Main News

ಕಾಬೂಲ್ ವಿಮಾನ ನಿಲ್ದಾಣದ ಮೇಲೆ ಐದು ರಾಕೆಟ್ ದಾಳಿ – ಸಾವು ನೋವಿನ ಮಾಹಿತಿ ಅಲಭ್ಯ

ಕಾಬೂಲ್ ಹಮೀದ್ ಕರ್ಜೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮೇಲೆ ಸೋಮವಾರ 5 ರಾಕೆಟ್ ದಾಳಿ ನಡೆಸಲಾಗಿದೆ. ಈ ಘಟನೆಯಲ್ಲಿನ ಸಾವು ನೋವು ಗಳ ಬಗ್ಗೆ ವರದಿಗಳು ಬಂದಿಲ್ಲ.

ವಿಮಾನ ನಿಲ್ದಾಣದಲ್ಲಿ ಸ್ಥಾಪಿಸಲಾದ ವಾಯು ರಕ್ಷಣಾ ವ್ಯವಸ್ಥೆ ಈ ರಾಕೆಟ್‍ಗಳನ್ನು ಹಿಮ್ಮೆಟಿಸಿವೆ.

ಸೋಮವಾರ ಬೆಳಗ್ಗೆ 6.40 ರ ಸುಮಾರಿಗೆ ಕಾಬೂಲ್‍ನ ಸಲೀಂ ಕರ್ವಾನ್ ಬಳಿ ರಾಕೆಟ್ ದಾಳಿ ನಡೆಸಲಾಗಿದೆ. ಜೊತೆಗೆ ಗುಂಡಿನ ದಾಳಿ ಕೂಡ ನಡೆಸಲಾಗಿದೆ.

ಆದರೆ ಘಟನೆ ವೇಳೆ ಗುಂಡು ಹಾರಿಸಿದವರು ಯಾರು ಎಂಬುದರ ಬಗ್ಗೆ ಪತ್ತೆಯಾಗಿಲ್ಲ. ಅಲ್ಲದೇ 3 ಬಾರಿ ಸ್ಫೋಟಗೊಂಡ ಶಬ್ಧ ಮತ್ತು ಆಕಾಶದಲ್ಲಿ ಏನೋ ಮಿಂಚಿದಂತೆ ಕಂಡಿದೆ. ಈ ಸ್ಫೋಟಗಳ ನಂತರ ಜನರು ಸ್ಥಳ ತೊರೆದು ಹೋಗುತ್ತಿದ್ದಾರೆಂದು ಹೇಳಲಾಗಿದೆ.

ಅಮೇರಿಕಾ ಅಧ್ಯಕ್ಷ ಜೋ ಬೈಡೆನ್ ಭಯೋತ್ಪಾದಕರಿಗೆ ದಾಳಿ ನಡೆಸುವ ಎಚ್ಚರಿಕೆ ನೀಡಿದ ಕೆಲವೇ ಗಂಟೆಗಳಲ್ಲಿ, ಸ್ಫೋಟಕ ತುಂಬಿದ ವಾಹನವನ್ನು ಧ್ವಂಸಗೊಳಿಸಿದ ಬಳಿಕ ಇದೀಗ ಮತ್ತೆ ಈ ಘಟನೆ ನಡೆದಿದೆ.

Team Newsnap
Leave a Comment
Share
Published by
Team Newsnap

Recent Posts

ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India

ನವದೆಹಲಿ ,ಏಪ್ರಿಲ್ 30 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 66,550 ರೂಪಾಯಿ ದಾಖಲಾಗಿದೆ. 24… Read More

April 30, 2024

5 ವಿದ್ಯಾರ್ಥಿಗಳ ಕಾವೇರಿ ನದಿಯಲ್ಲಿ ಮುಳುಗಿ ದುರ್ಮರಣ

ರಾಮನಗರ : ಮೇಕೆದಾಟು (Mekedatu) ಬಳಿಯ ಸಂಗಮದ ಕಾವೇರಿ ನದಿಯಲ್ಲಿ ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರು ಪಾಲಾದ ಘಟನೆ… Read More

April 29, 2024

ಎಸ್.ಎಂ ಕೃಷ್ಣ ಆರೋಗ್ಯದಲ್ಲಿ ಏರುಪೇರು; ಮಣಿಪಾಲ್ ಆಸ್ಪತ್ರೆಗೆ ದಾಖಲು

ಬೆಂಗಳೂರು: ಮಾಜಿ ಸಿಎಂ ಎಸ್.ಎಂ ಕೃಷ್ಣ (91) ಆರೋಗ್ಯದಲ್ಲಿ ಏರುಪೇರು ಆಗಿದೆ. ವೈದ್ಯರ ಸೂಚನೆ ಮೇರೆಗೆ ಮಣಿಪಾಲ್ ಆಸ್ಪತ್ರೆಗೆ ಎಸ್.ಎಂ… Read More

April 29, 2024

ಜೆಡಿಎಸ್ ನಿಂದ ಪ್ರಜ್ವಲ್ ರೇವಣ್ಣ ಅಮಾನತ್ತು – ಎಚ್ ಡಿಕೆ

ಬೆಂಗಳೂರು: ಮಹಿಳೆಯರ ಮೇಲಿನ ಸತತ ದೌರ್ಜನ್ಯದ ಆರೋಪಗಳ ಹಿನ್ನೆಲೆಯಲ್ಲಿ ಸಂಸದ ಪ್ರಜ್ವಲ್ ರೇವಣ್ಣರನ್ನು ಜೆಡಿಎಸ್ ನಿಂದ ಅಮಾನತು ಮಾಡಲಾಗಿದೆ. ಈ… Read More

April 29, 2024

ನಾಳೆ ಶ್ರೀನಿವಾಸ ಪ್ರಸಾದ್ ಅವರ ಅಂತಿಮ ಸಂಸ್ಕಾರ

ಮೈಸೂರು : ಶ್ರೀನಿವಾಸ್‌ ಪ್ರಸಾದ್ (Srinivas Prasad) ಅವರ ಅಂತ್ಯಕ್ರಿಯೆ ನಾಳೆ ಮಾಡಲಾಗುತ್ತದೆ ಎಂದು ‌ ಮಗಳು ಪ್ರತಿಮಾ ಪ್ರಸಾದ್‌… Read More

April 29, 2024

ಭ್ರೂಣ ಲಿಂಗ ಪತ್ತೆ ಪ್ರಕರಣ – ಮೈಸೂರಿನಲ್ಲಿ 17 ಮಂದಿ ವಿರುದ್ಧ ಎಫ್‌ಐಆರ್‌ ದಾಖಲು

ಮೈಸೂರು : ಉದಯಗಿರಿ ಪೊಲೀಸ್‌ ಠಾಣೆಯಲ್ಲಿ ಭ್ರೂಣ ಲಿಂಗ ಪತ್ತೆ ಹಾಗೂ ಗರ್ಭಪಾತ ಜಾಲ ಪ್ರಕರಣಕ್ಕೆ ಸಂಬಂಧಿಸಿದಂತೆ 17 ಮಂದಿ… Read More

April 29, 2024