January 28, 2026

Newsnap Kannada

The World at your finger tips!

WhatsApp Image 2024 09 20 at 12.28.23 PM

ಪ್ರಥಮ ಪಿಯುಸಿ ವಿದ್ಯಾರ್ಥಿ ಹೃದಯಾಘಾತದಿಂದ ಸಾವು

Spread the love

ತುಮಕೂರು: ಹೃದಯಾಘಾತದಿಂದ ಪ್ರಥಮ ಪಿಯುಸಿ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿರುವ ದುರ್ಘಟನೆ ಜಿಲ್ಲೆಯ ಗುಬ್ಬಿ ತಾಲೂಕಿನ ನಿಟ್ಟೂರಿನ ವಿನಾಯಕ ಕಾಲೇಜಿನಲ್ಲಿ ನಡೆದಿದೆ.

ಮೃತರನ್ನು 17 ವರ್ಷದ ಶಮಂತ್ ಎಂದು ಗುರುತಿಸಲಾಗಿದೆ.

ಕಾಲೇಜು ಮುಂಭಾಗದಲ್ಲಿ ಸ್ನೇಹಿತರೊಂದಿಗೆ ಮಾತನಾಡುತ್ತಾ ನಿಂತಿದ್ದ ಶಮಂತ್, ಹಠಾತ್ ಕುಸಿದು ಬಿದ್ದಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಮಾರ್ಗಮಧ್ಯೆ ಶಮಂತ್ ಮೃತಪಟ್ಟಿದ್ದಾನೆ.ಇದನ್ನು ಓದಿ –ಖಾಸಗಿ ವಾಹನಗಳಿಗೆ ಮಾಸಿಕ ಮತ್ತು ವಾರ್ಷಿಕ ಟೋಲ್ ಪಾಸ್ ಪರಿಚಯಿಸಲು ಸರ್ಕಾರ ತೀರ್ಮಾನ

ಈ ಘಟನೆ ಗುಬ್ಬಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹಠಾತ್ ಅಸಮಯದಲ್ಲಿ ವಿದ್ಯಾರ್ಥಿಯ ಪ್ರಾಣ ಹೋಗಿರುವುದು ಸ್ಥಳೀಯರ ಮತ್ತು ಕಾಲೇಜು ಸಮುದಾಯದವರಲ್ಲಿ ಆಘಾತ ಉಂಟುಮಾಡಿದೆ.

error: Content is protected !!