ಮೊದಲ ಜಿಯೋ-ಬಿಪಿ ಬ್ರಾಂಡ್ ಮೊಬಿಲಿಟಿ ಸ್ಟೇಷನ್ ಅನ್ನು ಮಹಾರಾಷ್ಟ್ರದ ನವಿ ಮುಂಬೈನ ನಾವ್ಡೆಯಲ್ಲಿ ಆರಂಭಿಸಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮತ್ತು ಬಿಪಿ ಯ ಇಂಧನ ಮತ್ತು ಮೊಬಿಲಿಟಿಯ ಜಂಟಿ ಉದ್ಯಮ, ರಿಲಯನ್ಸ್ ಬಿಪಿ ಮೊಬಿಲಿಟಿ ಲಿಮಿಟೆಡ್ ಕಂಪನಿಗೆ ಈ ಸ್ಟೇಷನ್ ಸೇರಿದೆ.
ಇಂಧನ ಮತ್ತು ಮೊಬಿಲಿಟಿ ಕ್ಷೇತ್ರದಲ್ಲಿ ಭಾರತದ ಮಾರುಕಟ್ಟೆ ವೇಗವಾಗಿ ಬೆಳೆಯುತ್ತಿದೆ. ಮುಂದಿನ 20 ವರ್ಷಗಳಲ್ಲಿ ಇದು ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ಇಂಧನ ಮಾರುಕಟ್ಟೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಜಿಯೋ-ಬಿಪಿ ಮೊಬಿಲಿಟಿ ಸ್ಟೇಷನ್ ಗಳನ್ನು ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲೆಂದೇ ವಿನ್ಯಾಸಗೊಳಿಸಲಾಗಿದೆ ಮತ್ತು ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳಲಾಗಿದೆ.
ಸಂಯೋಜಿತ ಇಂಧನಗಳು, ಇವಿ ಚಾರ್ಜಿಂಗ್, ರಿಫ್ರೆಶ್ ಮೆಂಟ್ ಗಳು ಮತ್ತು ಆಹಾರ(ಹೊಟೇಲ್) ಸೇರಿದಂತೆ – ಸಂಚಾರ ನಡೆಸುವ ಗ್ರಾಹಕರಿಗೆ ನೆರವಾಗುವಂತೆ ಹಲವು ಸೇವೆಗಳನ್ನು ಜೊತೆಯಾಗಿ ನೀಡಲಿದೆ.
ಮುಂದಿನ ದಿನಗಳಲ್ಲಿ ಕಡಿಮೆ ಇಂಗಾಲವನ್ನು ಹೊರಸೂಸುವ ಸರಳ ಯೋಜನೆಗಳನ್ನು ರೂಪಿಸಲಿದೆ.
ಸಾಂಕ್ರಾಮಿಕ-ಪೀಡಿತ ಪರಿಸರದಲ್ಲಿ ಕೆಲಸ ಮಾಡುವುದು ಸವಾಲಾದರೂ ಜಿಯೋ-ಬಿಪಿ ಗ್ರಾಹಕರಿಗೆ ಬಹು ಇಂಧನ ಆಯ್ಕೆಗಳನ್ನು ನೀಡುವ ಮೂಲಕ ವಿಶ್ವ ದರ್ಜೆಯ ಮೊಬಿಲಿಟಿ ಸ್ಟೇಷನ್ ಗಳ ನೆಟ್ ವರ್ಕ್ ಅನ್ನು ಪರಿಚಯಿಸಿದೆ.
ಭಾರತದಲ್ಲಿ ಮೊಬಿಲಿಟಿ ಪರಿಹಾರಗಳನ್ನು ಮರುರೂಪಿಸುವಾಗ, ಜಿಯೊ-ಬಿಪಿ ಬ್ರ್ಯಾಂಡ್ ಸಾಟಿಯಿಲ್ಲದ ಮತ್ತು ವಿಶಿಷ್ಟವಾದ ಗ್ರಾಹಕ ಅನುಭವವನ್ನು ಒದಗಿಸಲು ಸಿದ್ಧವಾಗಿದೆ.
ಅಸ್ತಿತ್ವದಲ್ಲಿರುವ 1400 ಇಂಧನ ಪಂಪ್ ಗಳ ನೆಟ್ ವರ್ಕ್ ಅನ್ನು ಜಿಯೊ-ಬಿಪಿ ಎಂದು ಮರುಬ್ರಾಂಡ್ ಮಾಡಲಾಗುವುದರ ಜೊತೆಗೆ ಮುಂದಿನ ತಿಂಗಳುಗಳಲ್ಲಿ ಹೊಸ ಶ್ರೇಣಿಯ ಗ್ರಾಹಕ ಮೌಲ್ಯದ ಪ್ರಸ್ತಾಪಗಳನ್ನು ಮುಂದಿಡಲಿದೆ.
More Stories
ಶೀಘ್ರದಲ್ಲೇ ಅಡುಗೆ ಎಣ್ಣೆಗಳ ಬೆಲೆ ಏರಿಕೆ ಸಾಧ್ಯತೆ
ಅಕ್ರಮ ಜಾಹಿರಾತು ಫಲಕ ಕುಸಿತಕ್ಕೆ 14 ಸಾವು, 74 ಜನರು ಗಂಭೀರ
ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ರಾಮ ಮಂದಿರ ಶುದ್ಧೀಕರಣ : ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಉವಾಚ