February 22, 2026

Newsnap Kannada

The World at your finger tips!

jarakihole

ಮಾಜಿ ಮಂತ್ರಿ ರಮೇಶ್ ಜಾರಕಿಹೊಳಿ ವಿರುದ್ದ ಎಫ್ ಐ ಆರ್ ದಾಖಲು – ಬಂಧನದ ಸಾಧ್ಯತೆ ?

Spread the love

ಸಿಡಿ ಲೇಡಿ ನೀಡಿರುವ ದೂರಿನ ಅನ್ವಯ ಕಬ್ಬನ್ ಪಾಕ್೯ ಪೋಲಿಸರು ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಎಫ್ ಐಆರ್ ದಾಖಲು ಮಾಡಿದ್ದಾರೆ.

ಯುವತಿಯ ಕೈ ಬರಹವನ್ನು ಪರಿಶೀಲನೆ ಮಾಡಿದ ಪೋಲಿಸರು ನಂತರ ದೂರು ದಾಖಲು ಮಾಡಿದ್ದಾರೆ.

ಸಿಡಿ ಯುವತಿಯ ಪರವಾಗಿ ವಕೀಲ ಜಗದೀಶ್‌ ದೂರು ನೀಡಿದ ಬೆನ್ನಲ್ಲೇ ಕಬ್ಬನ್‌ ಪಾರ್ಕ್‌ ಪೊಲೀಸ್‌ ಠಾಣೆಯಲ್ಲಿ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ವಿರುದ್ಧ ಅತ್ಯಾಚಾರ ಕೇಸ್‌ ದಾಖಲಾಗಿದೆ.

ಐಪಿಸಿ ಸೆಕ್ಷನ್‌ 376 ಸಿ (ಅತ್ಯಾಚಾರ), 354 ಎ(ಕೆಲಸ ನೀಡುವುದಾಗಿ ನಂಬಿಸಿ ದೈಹಿಕ ಸಂಪರ್ಕ) 506 (ಜೀವ ಬೆದರಿಕೆ) 417(ವಂಚನೆ) ಅಡಿ ಅಲ್ಲದೇ ವಿಡಿಯೋ ಹೊರ ಹಾಕಿದ್ದಕ್ಕೆ ರಮೇಶ್ ಜಾರಕಿಹೊಳಿ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್‌ 67ರ ಅಡಿ ಪ್ರಕರಣ ದಾಖಲಾಗಿದೆ. ರೇಪ್‌ ಆರೋಪ ಸಾಬೀತಾದರೆ 6-10 ವರ್ಷ ಕಾಲ ಜೈಲು ಶಿಕ್ಷೆಯಾಗುವ ಸಾಧ್ಯತೆಯಿದೆ.

error: Content is protected !!