November 13, 2024

Newsnap Kannada

The World at your finger tips!

pataki

ತಮಿಳುನಾಡಿನ ಪಟಾಕಿ ಕಾರ್ಖಾನೆ ಸ್ಫೋಟ: 11 ಮಂದಿ ದಾರುಣ ಸಾವು

Spread the love

ತಮಿಳುನಾಡಿನ ಶಿವಕಾಸಿ ಬಳಿಯ ಸತ್ತೂರಿನ ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ 11 ಮಂದಿ ಸಾವನ್ನಪ್ಪಿದ ಬಗ್ಗೆ ವರದಿಯಾಗಿದೆ.

ಎಎನ್‌ಐ ಸುದ್ದಿ ಸಂಸ್ಥೆ ವರದಿ ಮೂಲದಂತೆ ತಮಿಳುನಾಡಿನ ಶಿವಕಾಸಿ ಬಳಿಯ ಸತ್ತೂರಿನ ಖಾಸಗಿ ಪಟಾಕಿ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿ ಕೊಂಡಿದೆ. ಈ ಅವಘಡದಲ್ಲಿ ಇದುವರೆಗೆ 11 ಮಂದಿ ಮೃತಪಟ್ಟಿದ್ದಾರೆ ಎಂದು ವಿರುಧುನಗರ ಜಿಲ್ಲಾಧಿಕಾರಿ ಆರ್. ಕಣ್ಣನ್ ತಿಳಿಸಿದ್ದಾರೆ.

ಘಟನೆ ಸಂಭಸಿದ್ದು ಹೇಗೆ?

ಪಟಾಕಿ ತಯಾರಿಸಲು ಕೆಲವು ನಿರ್ದೀಷ್ಟ ರಾಸಾಯನಿಕಗಳನ್ನು ಬೆರೆಸುತ್ತಿರುವಾಗ ಈ ಅಗ್ನಿ ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಚ್ಚನ್‌ಕುಲಂ ಗ್ರಾಮಕ್ಕೆ ಧಾವಿಸಿರುವ 10 ರಷ್ಟು ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಈ ಘಟನೆಯಲ್ಲಿ 10ರಷ್ಟು ಮಂದಿ ಗಾಯಗೊಂಡಿದ್ದಾರೆ.
ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೋದಿ ಸಂತಾಪ- ಪರಿಹಾರ ಘೋಷಣೆ:

ತಮಿಳುನಾಡು ಶಿವಕಾಸಿ ಬಳಿ ಪಟಾಕಿ ಕಾರ್ಖಾನೆ ಸ್ಫೋಟ ದುರುಂತದಲ್ಲಿ ಮೃತಪಟ್ಟವರಿಗಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಂತಾಪವನ್ನು ಸೂಚಿಸಿದ್ದಾರೆ.

ಮೃತಪಟ್ಟವರ ಕುಟುಂಬಕ್ಕೆ ತಲಾ 2 ಲಕ್ಷ ರು.ಗಳ ಪರಿಹಾರ ಘೋಷಿಸಿದ್ದಾರೆ.

ರಾಹುಲ್ ಸಂತಾಪ:
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡಾ ಪಟಾಕಿ ಕಾರ್ಖಾನೆ ಸ್ಫೋಟದಲ್ಲಿ ಮೃತಪಟ್ಟವರಿಗೆ ಸಂತಾಪವನ್ನು ಸೂಚಿಸಿದ್ದಾರೆ.

ಅಲ್ಲದೆ ತುರ್ತಾಗಿ ರಕ್ಷಣಾ ಕಾರ್ಯಾಚರಣೆಗೆ ಬೇಕಾದ ಎಲ್ಲ ನೆರವು ನೀಡುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!