Main News

ಲಿಸ್ಬೋಸ್ ನ‌ ಗ್ರೀಸ್ ಶಿಬಿರದಲ್ಲಿ ಬೆಂಕಿಯ ಕೆನ್ನಾಲಿಗೆ- ವಲಸಿಗರು ಕಂಗಾಲು

ನ್ಯೂಸ್ ಸ್ನ್ಯಾಪ್
ಲಿಸ್ಬೋಸ್,

ಗ್ರೀಕ್ ನ ರಾಜಧಾನಿ ಲಿಸ್ಬೋಸ್ ನಲ್ಲಿರುವ ಅತಿ ದೊಡ್ಡ ವಲಸೆ ಶಿಬಿರದಲ್ಲಿ ಬೆಂಕಿ ಅನಾಹುತ ಕಾಣಿಸಿಕೊಂಡಿದೆ. ವಲಸಿಗರನ್ನು ಸ್ಥಳಾಂತರಿಸಬೇಕಾದ ಅನಿವಾರ್ಯತೆ ಗ್ರೀಸ್ ನ‌ ಸರ್ಕಾರಕ್ಕೆ ಎದುರಾಗಿದೆ. ಬೆಂಕಿ ಅನಾಹುತಕ್ಕೆ ಇಡೀ ಶಿಬಿರ ನಾಶವಾಗಿದೆ.

ಕರೋನಾ ಸೋಂಕು ಪ್ರಪಂಚದಾದ್ಯಂತ ಹರಡುತ್ತಿರುವ ಸಂದರ್ಭದಲ್ಲಿ, ಅಲ್ಲಿನ ಸರ್ಕಾರವು ಶಿಬಿರದಲ್ಲಿನ ವಲಸಿಗರಿಗೆ ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ರೂಪಿಸಿತ್ತು. ಈ ಕ್ರಮಗಳ ವಿರುದ್ಧ ವಲಸಿಗರು ಪ್ರತಿಭಟನೆಯನ್ನು ನಡೆಸಿದ್ದ ಸಂದರ್ಭದಲ್ಲಿ ಈ ಬೆಂಕಿಯ ಅವಘಡ ಸಂಭವಿಸಿದೆ.

25 ಅಗ್ನಿಶಾಮಕ ವಾಹನಗಳೊಂದಿಗೆ 10 ಇಂಜಿನ್ ಗಳೊಂದಿಗೆ ಅಗ್ನಿಶಾಮಕ ದಳದವರು ವಲಸಿಗರನ್ನು ಸ್ಥಳಾಂತರಿಸಲು ಬಹು ಹೋರಾಟ ನಡೆಸಿದರು. ಘಟನೆಯಲ್ಲಿ ಅನೇಕರು ಗಾಯಗೊಂಡಿದ್ದಾರೆ.

ಬೆಂಕಿ ಹೇಗೆ ಹೊತ್ತಿಕೊಂಡಿತು ಎಂಬುದಕ್ಕೆ ಯಾವುದೇ ಖಚಿತವಾದ ಮಾಹಿತಿಗಳು ಇನ್ನೂ ಸಿಕ್ಕಿಲ್ಲ. ಆದರೆ ಘಟನೆಗೆ ಸಂಬಂಧಪಟ್ಟಂತೆ ಕೆಲವು ಸ್ಥಳೀಯರು ವಲಸಿಗರನ್ನು ದೂರಿದರೆ, ವಲಸಿಗರು ಸ್ಥಳೀಯರಾದ ಗ್ರೀಕರನ್ನು ದೂರಿದ್ದಾರೆ.

ಬೆಂಕಿಯ ಅವಘಡದಿಂದ ಹೆದರಿದ ಜನರು, ಶಿಬಿರದಿಂದ ಬೇರೆಡೆ ಪಲಾಯನಗೈಯುವದನ್ನ ತಡೆಯಲು ಶಿಬಿರದ ಸುತ್ತಮುತ್ತಲಿನ‌ ರಸ್ತೆಗಳನ್ನು ಪೋಲಿಸರು ಸುತ್ತುವರೆದಿದ್ದಾರೆ. ಕೆಲವು ವಲಸಿಗರು ಬೆಂಕಿಯ ಅವಘಡದಿಂದ ಹೆದರಿ ಪಲಾಯನ ಮಾಡಿದ ನಂತರ ಪೋಲಿಸರು ಈ ಕ್ರಮ ಕೈಗೊಂಡಿದ್ದಾರೆ. ಏಕೆಂದರೆ ಈ ಎಲ್ಲಾ ವಲಸಿಗರು ಕ್ವಾರಂಟೈನ್ ನಲ್ಲಿದ್ದವರು ಹಾಗೂ ಈ ವಲಸಿಗರಲ್ಲಿ ಕೆಲವು ಜನರಿಗೆ ಕೊರೋನಾ ಸೋಂಕು ಸಹ ಧೃಡಪಟ್ಟಿದೆ.

ಕೆಲ ವಲಸಿಗರ ಮಾಹಿತಿಯ ಪ್ರಕಾರ, ಮೊರಿಯಾ ಶಿಬಿರದಲ್ಲಿ ಸುಮಾರು‌ 13,000 ಸಾವಿರ ಜನ ನೆಲೆಸುತ್ತಾರೆ. ಇದರಲ್ಲಿ ಶೇಕಡ 70ರಷ್ಟು ಜನರು ಅಫ್ಘಾನಿಸ್ತಾನದಿಂದ ಬಂದವರಾಗಿದ್ದಾರೆ. ಒಟ್ಟು 70ಕ್ಕೂ ಹೆಚ್ಚು ದೇಶದ ನಿರಾಶ್ರಿತರು ಈ ಶಿಬಿರದಲ್ಲಿ‌ ನೆಲೆ ಕಂಡುಕೊಂಡಿದ್ದಾರೆ.

ಮೊರಿಯಾದಲ್ಲಿ ಏನಾಯಿತು?
‘ಮೊರಿಯಾದಲ್ಲಿ ಇದ್ದಕ್ಕಿದ್ದಂತೆ ಮೂರು ಸ್ಥಳಗಳಲ್ಲಿ ಬೆಂಕಿ ಕಾಣಿಸಿಕೊಂಡಿತು. ಅಲ್ಲಿನ ಪ್ರತಿಭಟನಾಕಾರರು ಬೆಂಕಿಯನ್ನು ನಂದಿಸಲು ಬಂದ ಅಗ್ನಿಶಾಮಕ‌ ಸಿಬ್ಭಂದಿಗೆ ದೊಡ್ಡ ತಡೆಯಾಗಿದ್ದಾರೆ’ ಎಂದು ಅಗ್ನಿಶಾಮಕ ಇಲಾಖೆ ಮುಖ್ಯಸ್ಥ ಕಾನ್ಸ್ಟಂಟಿನೋಸ್ ಥಿಯೋಫಿಲೋಪೌಲೋಸ್ ಅಲ್ಲಿನ ರಾಜ್ಯ ದೂರದರ್ಶನ ಚಾನೆಲ್ ERTಗೆ ತಿಳಿಸಿದರು. ‘ಬುಧವಾರ ಬೆಳಿಗ್ಗೆಯಷ್ಟೊತ್ತಿಗೆ ಅಷ್ಟೂ ಬೆಂಕಿಯನ್ನು ನಂದಿಸಲಾಯಿತಾದರೂ ಚಿಕ್ಕ ಪುಟ್ಟ ವಸ್ತುಗಳಲ್ಲಿ ಇನ್ನೂ ಬೆಂಕಿ ಇದೆ’ ಎಂದೂ ಅವರು ಹೇಳಿದರು.

ಯುರೋಪಿನ್ ನಿಗಮದ ಉಪಾಧ್ಯಕ್ಷ ಮಾರ್ಗರಿಟಾ ಶಿಯಾಸ್ ‘ ನಾನು ಈಗಾಗಲೇ ಗ್ರೀಕ್ ನ ಪ್ರಧಾನಿ ಮಿಸ್ಟೋಟಾಕೀಸ್ ಅವರೊಂದಿಗೆ ಮಾತನಾಡಿರುವೆ. ಇಂಥಹ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ನಮ್ಮ ಯುರೋಪಿಯನ್ ನಿಗಮ ಗ್ರೀಕ್ ಗೆ ಯಾವುದೇ ವಿಷಯದಲ್ಲಿ ಸಹಾಯ ಮಾಡಲು ಸಿದ್ಧವಿದೆ’ ಎಂದು ಹೇಳಿದ್ದಾರೆ.

ಇದೇ ಸಮಯದಲ್ಲಿ, EU ನ ಗೃಹ ವ್ಯವಹಾರಗಳ ಆಯುಕ್ತೆ ಯ್ಲಾ ವೆ ಜಾನ್ಸನ್ ನಾಲ್ಕುನೂರು ಅಸಂಘಟಿತ ನಿರಾಶ್ರಿತ ಯುವಕ, ಯುವತಿ ಹಾಗೂ ಮಕ್ಕಳಿಗೆ ತಮ್ಮ ಸ್ಥಳದಲ್ಲಿ ಆಶ್ರಯ ನೀಡುವದಾಗಿ ಭರವಸೆ ನೀಡಿದ್ದಾರೆ. ‘ಮೊರಿಯಾದಲ್ಲಿ ಸುರಕ್ಷತೆ ಮತ್ತು ವಸತಿ ನೀಡುವಿಕೆ ಪ್ರಾಧಾನ್ಯತೆಯ ವಿಷಯವಾಗಬೇಕು’ ಎಂದು ಅವರು ಟ್ವೀಟಿಸಿದ್ದಾರೆ.

ಗ್ರೀಸ್ ನ ಅಧಿಕಾರಿಗಳು ಈ ಶಿಬಿರವನ್ನು, ಸೋಮಾಲಿ ವಲಸಿಗರಲ್ಲಿ ಕರೋನಾ ಸೋಂಕು ಧೃಡಪಟ್ಟ ಹಿನ್ನಲೆಯಲ್ಲಿ, ಕ್ವಾರಂಟೈನ್ ತಾಣವಾಗಿ‌ ಒಂದು ವಾರದ ಹಿಂದೆ ಮಾರ್ಪಡಿಸಿದ್ದರು. ಸದ್ಯ ಈಗ ಅಲ್ಲಿ ಒಟ್ಟು 35 ಕರೋನಾ ಸೋಂಕು ಪೀಡಿತರಿದ್ದಾರೆ‌.

ಬೆಂಕಿ ಹೇಗೆ ಪ್ರಾರಂಭವಾಯಿತು?
ಬೆಂಕಿ ಹೇಗೆ ಪ್ರಾರಂಭವಾಯಿತು ಖಚಿತವಾದ ಮಾಹಿತಿ ಇನ್ನೂ ಸಿಕ್ಕಿಲ್ಲ.

ಗ್ರೀಕ್ ಸುದ್ದಿ ಸಂಸ್ಥೆ ಎಎನ್ಎ ಯ ಪ್ರಕಾರ, ಕರೋನಾ ಸೋಂಕಿತ 35 ಕಟುಂಬಗಳನ್ನು ಪ್ರತ್ಯೇಕವಾಗಿರಲು ಹೇಳಿದಾಗ ಅವರು ನಿರಾಕರಿಸಿ ಪ್ರತಿಭಟನೆಗೆ ಇಳಿದಿದ್ದಾರೆ. ಇದೇ ಸಂದರ್ಭದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಲೆಸ್ಬೊಸೋ‌ ಸುತ್ತಮುತ್ತ ಕಾಡ್ಗಿಚ್ಚು ಅಧಿಕ. ಹಾಗೆಯೇ ಗಾಳಿಯೂ ಸಹ ಅಧಿಕ. ಕಾಡ್ಗಿಚ್ಚಿನ ಮೂಲಕವೂ ಬೆಂಕಿ ಅವಘಡ ಸಂಭವಿಸಿರಬಹುದು. ಆದರೆ ನಿರ್ಧರಿತವಾಗಿ ಹೀಗೆ ಆಗಿದೆ ಎಂದು ಹೇಳಲು ಯಾವ ಸಾಕ್ಷ್ಯಗಳೂ ಇಲ್ಲ.

ನಾಗರೀಕ ಸಂರಕ್ಷಣೆಯ ಉಪಮೇಯರ್ ಮಿಚಾಲಿಸ್ ಫ್ರಾಟ್ಜೆಸ್ಕೋಸ್ ಅವರು ಬೆಂಕಿಯ ಅವಘಡವನ್ನು ‘ಪೂರ್ವನಿಯೋಜಿತ’ ಎಂದು ಕರೆದಿದ್ದಾರೆ. ‘ಗುಡಾರಗಳು ಖಾಲಿಯಿದ್ದವು ಹಾಗೂ ಅಗ್ನಿಶಾಮಕ ದಳ ಈ ಸಂದರ್ವಬವನ್ನು ದುರುಪಯೋಗಪಡಿಸಿಕೊಂಡಿದ್ದಾರೆ’ ಎಂದು ಅವರು ಆರೋಪಿಸಿದ್ದಾರೆ‌.

ಬೆಂಕಿ ಅವಘಡ ಹೇಗೆ ನಡೆಯಿತು ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಸದ್ಯ ಶಿಬಿರದ ಸುತ್ತಮುತ್ತ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ ಎಂದು ಸರ್ಕಾರದ ಪ್ರತಿನಿಧಿಗಳು ಹೇಳಿದರು.

ಶಿಬಿರ ಎಂದರೇನು?
ಮೊರಿಯಾ ಶಿಬಿರವು ಲಿಸ್ಬೀಸ್ ನ ರಾಜಧಾನಿ ಮೈಟಿಲೀನ್ ನ ಈಶಾನ್ಯದಲ್ಲದೆ.
ಇದು ಎರಡು ಸಾವಿರ ನಿರಾಶ್ರಿತರಿಗೆ ನಿರ್ಮಿಸಲಾದ ಶಿಬಿರ. ಆದರೆ ಅದರಲ್ಲಿ‌13,000 ಜನ ವಾಸ ಮಾಡುತ್ತಿದ್ದರು. ಜನಸಂದಣಿ ದಟ್ಟವಾಗಿತ್ತು. ಅನೇಕ ದೇಶಗಳ ನಿರಾಶ್ರಿತರು ಇಲ್ಲಿ ವಾಸ ಮಾಡುವದರಿಂದ ಸಹಜವಾಗಿಯೇ ಜಗಳಗಳು ನಡೆಯುತ್ತಿದ್ದವು. ಬೆಂಕಿಯ ಅವಘಡಕ್ಕೂ ಮುಂಚೆ ಇಲ್ಲಿ‌ ನಡೆದ ಜಗಳವೇ ಇದಕ್ಕೆ ಸಾಕ್ಷಿ. ಹ್ಯೂಮನ್ ರೈಟ್ಸ್ ಕಮಿಷನ್ ನ ಏಪ್ರಿಲ್ ವರದಿಯು ‘ವಲಸಿಗರಿಗೆ ಗ್ರೀಕ್ ಸರ್ಕಾರ ಸರಿಯಾದ ವ್ಯವಸ್ಥೆಗಳನ್ನು ಮಾಡಿಲ್ಲ. ಜನಸಂದಣಿ ದಟ್ಟವಾಗಿದೆ’ ಎಂದು ಹೇಳಿದೆ

Team Newsnap
Leave a Comment
Share
Published by
Team Newsnap

Recent Posts

ತಾಯಿಯ ಶವದೊಂದಿಗೆ 4 ದಿನ ಕಳೆದ ಪುತ್ರಿಯೂ ವಿಧಿವಶ

ಕುಂದಾಪುರ : ಮೇ 16 ರ ರಾತ್ರಿ ಗೋಪಾಡಿ ಗ್ರಾಮದ ಮೂಡುಗೋಪಾಡಿಯ ನಿವಾಸಿ ಜಯಂತಿ ಶೆಟ್ಟಿ (61) ಅವರ ಮೃತದೇಹ… Read More

May 19, 2024

ನಟಿ ಪವಿತ್ರ ಸಾವಿನಿಂದ ನೊಂದ ಗೆಳೆಯ ನಟ ಚಂದು ಕೂಡ ಆತ್ಮಹತ್ಯೆ

2015ರಲ್ಲಿ ಶಿಲ್ಪಾ ಎಂಬುವವರ ಜೊತೆ ಮದುವೆಯಾಗಿದ್ದ ನಟ ಚಂದು ತ್ರಿನಯನಿ ಸೀರಿಯಲ್​ನಲ್ಲಿ ಅಭಿನಯಿಸಿದ್ದ ತೆಲುಗು ನಟ ಚಂದು ನಟಿ ಪವಿತ್ರ… Read More

May 18, 2024

SSLC ವಿದ್ಯಾರ್ಥಿಗಳಿಗೆ ಮುಂದಿನ ವರ್ಷದಿಂದ ಗ್ರೇಸ್ ಮಾರ್ಕ್ಸ್ ಇಲ್ಲ: ಮಧು ಬಂಗಾರಪ್ಪ

ಬೆಂಗಳೂರು : ಶಿಕ್ಷಣ ಸಚಿವ ಮಧು ಬಂಗಾರಪ್ಪ , ಮುಂದಿನ ವರ್ಷದಿಂದ SSLC ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕಗಳನ್ನು ನೀಡಲಾಗುವುದಿಲ್ಲ ಎಂದು… Read More

May 17, 2024

ಇಂಜಿನಿಯರಿಂಗ್ ವಿದ್ಯಾರ್ಥಿನಿ ಹಾಸ್ಟೆಲ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ

ಬೆಂಗಳೂರು : ಆನೇಕಲ್ ತಾಲೂಕಿನ ಚಂದಾಪುರ ಸಮೀಪದ ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಅರಸೀಕೆರೆ ಮೂಲದ ಕರಡಿಹಳ್ಳಿ… Read More

May 17, 2024

ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್: ಕೆಯುಡಬ್ಲ್ಯುಜೆ ನಿಯೋಗದಿಂದ ಮುಖ್ಯಮಂತ್ರಿಗೆ ಅಭಿನಂದನೆ

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮನವಿ ಮೇರೆಗೆ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಸೌಲಭ್ಯವನ್ನು ಬಜೆಟ್‌ನಲ್ಲಿ ಘೋಷಣೆ… Read More

May 16, 2024

ಎಚ್ ಡಿ ರೇವಣ್ಣನಿಗೆ ನಾಳೆ ತನಕ ಮಧ್ಯಂತರ ಜಾಮೀನು ನೀಡಿದ ನ್ಯಾಯಾಲಯ

ಬೆಂಗಳೂರು : ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್ ಡಿ ರೇವಣ್ಣಗೆ ಮಧ್ಯಂತರ ಜಾಮೀನು ಮಂಜೂರಾಗಿದೆ. ಈ ಪ್ರಕರಣದಲ್ಲಿ… Read More

May 16, 2024