February 23, 2026

Newsnap Kannada

The World at your finger tips!

hegde

ಫೈರ್ ಬ್ರ್ಯಾಂಡ್ ಸಂಸದ ಹೆಗಡೆಗೆ ಶಸ್ತ್ರ ಚಿಕಿತ್ಸೆ : ಒಂದು ವರ್ಷ ವಿಶ್ರಾಂತಿ- ರಾಜಕೀಯ ನೇಪಥ್ಯ ಸಾಧ್ಯತೆ ?

Spread the love

ಫೈರ್ ಬ್ರ್ಯಾಂಡ್ ರಾಜಕಾರಣಿ ಸಂಸದ ಅನಂತ ಕುಮಾರ್ ಹೆಗಡೆ ತೀವ್ರ ಸ್ವರೂಪದ ಕಾಲು ಹಾಗೂ ಬೆನ್ನು ನೋವಿನಿಂದಾಗಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿ
ಒಂದು ವರ್ಷ ಓಡಾಡುವಂತಿಲ್ಲ ಎಂಬ ಆಪ್ತ ಮೂಲಗಳ ಹೇಳಿಕೆ ಅನ್ವಯ
ಸಂಸದ ಅನಂತ್ ಕುಮಾರ್ ಹೆಗಡೆ ನಿವೃತ್ತಿ ಮನಸ್ಸು ಮಾಡಿದರೆ ಎಂಬ ಅನುಮಾನ ವ್ಯಕ್ತವಾಗಿದೆ.

ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ಸಂಸದ ಹೆಗಡೆ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಒಂದು ವರ್ಷವೇ ಬೇಕಂತೆ. ಹೀಗಾಗಿ ಫೈರ್ ಬ್ರ್ಯಾಂಡ್ ರಾಜಕಾರಣಿ ಅನ್ನೋ ಖ್ಯಾತಿ ಗಳಿಸಿರುವ ಅನಂತ್ ಕುಮಾರ್ ಹೆಗಡೆ ರಾಜಕೀಯ ನಿವೃತ್ತಿ ಪಡೆಯುತ್ತಾರೆನ್ನುವ ಮಾತುಗಳು ಕೇಳಿಬರುತ್ತಿದೆ.

ಸಂಸದ ಅನಂತ ಕುಮಾರ್ ಹೆಗಡೆ ಆಪ್ತ ಸಹಾಯಕರು ಆರೋಗ್ಯ ಮಾಹಿತಿಯ ಕುರಿತು ಪ್ರಕಟಣೆಯೊಂದನ್ನು ನೀಡಿದ್ದಾರೆ. ಕಳೆದ ಕೆಲ ತಿಂಗಳಿನಿಂದಲೂ ಬೆನ್ನು ನೋವು ಮತ್ತು ಕಾಲು ನೋವು ಹೆಚ್ಚಾಗಿದ್ದರಿಂದಾಗಿ ತಜ್ಞರ ಸೂಚನೆಯ ಮೇರೆಗೆ ಕಾಲಿನ ಶಸ್ತ್ರ ಚಿಕಿತ್ಸೆಯನ್ನು ನಡೆಸಲಾಗಿದೆ.

ಇದೀಗ ಕೆಲವು ದಿನಗಳ ಹಿಂದೆ ನಡೆಸಿದ ಗಂಭೀರ ಶಸ್ತ್ರ ಚಿಕಿತ್ಸೆಯ ನಂತರ ಸಂಸದರು ಚೇತರಿಸಿಕೊಳ್ಳುತ್ತಿದ್ದಾರೆ. ವೈದ್ಯರು ದೀರ್ಘಾವಧಿ ವಿಶ್ರಾಂತಿ ಪಡೆಯುಲು ಸೂಚಿಸಿರುವ ಹಿನ್ನೆಲೆಯಲ್ಲಿ ಪೂರ್ಣವಾಗಿ ಗುಣಮುಖರಾಗುವ ತನಕ ಸಂಸದರು ಸಾರ್ವಜನಿಕ ಕಾರ್ಯಕ್ರಮ ಹಾಗೂ ಭೇಟಿಗೆ ಲಭ್ಯವಿರುವುದಿಲ್ಲ ಎಂದು ತಿಳಿಸಿದ್ದಾರೆ.

error: Content is protected !!