January 5, 2025

Newsnap Kannada

The World at your finger tips!

girl

ರಾಸಲೀಲೆ ವಿಡಿಯೋದಲ್ಲಿನ ಯುವತಿ ಪತ್ತೆ : ಉತ್ತರ ಕರ್ನಾಟಕದ ಚಲುವೆಯ ರಹಸ್ಯ ಬಯಲು

Spread the love

ರಾಸಲೀಲೆ ವಿಡಿಯೋದಲ್ಲಿನ ಯುವತಿ ಯಾರೆಂಬು ಎನ್ನುವುದನ್ನು ಪತ್ತೆ ಹಚ್ಚಿದ ಬೆಂಗಳೂರಿನ ಪೋಲಿಸರು, ಉತ್ತರ ಕರ್ನಾಟಕದ ಚಲುವೆಯ ರಹಸ್ಯ ಬಯಲು ಮಾಡಿದ್ದಾರೆ.

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಜೊತೆಗೆ ರಾಸಲೀಲೆ ವೀಡಿಯೋದಲ್ಲಿದ್ದ ಉತ್ತರ ಕರ್ನಾಟಕ ಮೂಲದ ಆ ಯುವತಿಯ ಬಗ್ಗೆ ಸಮಗ್ರ ಮಾಹಿತಿ ಕಲೆ ಹಾಕಿದ್ದಾರೆ.

ಆ ಯುವತಿ ಬೆಂಗಳೂರಿನ ಆರ್.ಟಿ.ನಗರದ ಬಹುಮಹಡಿ ಕಟ್ಟಡದಲ್ಲಿ ಬಾಡಿಗೆ ಮನೆಯಲ್ಲಿ 2018 ರಿಂದ ವಾಸವಿದ್ದಳು. ಮಾರ್ಚ್ 1 ರ ತನಕ ಅದೇ ಮನೆಯಲ್ಲಿ ವಾಸವಿದ್ದ ಆ ಯುವತಿ, ದಿನೇಶ್ ಕಲ್ಲಹಳ್ಳಿ ದೂರು ನೀಡಿದ ದಿನದಿಂದ ಆ ಮನೆ ಬಿಟ್ಟು ಹೋದವಳು ಮತ್ತೆ ಹಿಂತಿರುಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಎಂಜಿನಿಯರಿಂಗ್ ಕಾಲೇಜಿಗೆ ದಾಖಲಾಗಿದ್ದ ಆ ಯುವತಿ, ವ್ಯಾಸಂಗ ಅರ್ಧಕ್ಕೆ ಬಿಟ್ಟು ರಾಜಾಜಿನಗರದ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದಳು.

ಇದೇ ವೇಳೆ ಕೆಲವು ಸ್ನೇಹಿತರು ಆಕೆಯನ್ನು ಭೇಟಿ ಮಾಡಲು ಬರುತ್ತಿದ್ದರು ಎನ್ನುವ ಮಾಹಿತಿ ಲಭ್ಯ ವಾಗಿದೆ.

ನಾಳೆ ಯುವತಿ ವಶಕ್ಕೆ ಸಾಧ್ಯತೆ ?

ಆ ಸುಂದರಿ ಯಾರು ಅರ್ಧದಲ್ಲಿ ಪೊಲೀಸರಿಗೆ ಖಚಿತವಾಗಿದೆ. ನಾಳೆಯೊಳಗೆ ಆಕೆಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಿದ್ದಾರೆಂದು ಗೊತ್ತಾಗಿದೆ.

ಜಾರಕಿಹೊಳಿ ಜೊತೆ ಸಹಮತದ ರಾಸಲೀಲೆಯೋ ಅಥವಾ ಹನಿ ಟ್ರ್ಯಾಪ್ ಪ್ಲಾನ್ ಹಾಗೂ ಅತ್ಯಾಚಾರ ಮಾಡಲಾಗಿದಯೇ ಎಂಬ ಪ್ರಮುಖ ವಿಷಯದ ವಿಚಾರಣೆ ಮಾಡಿದ ನಂತರ ಇನ್ನೂ ಉತ್ತರ ಸಿಗದ ಅನೇಕ ಪ್ರಶ್ನೆ ಗಳಿಗೆ ಆಕೆ ಉತ್ತರಿಸಬೇಕಿದೆ.

ಆ ಯುವತಿ ನೀಡುವ ಹೇಳಿಕೆ ಆಧಾರದ ಮೇಲೆ ಇಡೀ ಪ್ರಕರಣ ನಿಲ್ಲುತ್ತದೆ. ಆಕೆಯ ಹೇಳಿಕೆ ಮೇಲೆ ರಮೇಶ್ ಜಾರಕಿಹೊಳಿ ರಾಜಕೀಯ ಜೀವನವನೂ ತೀರ್ಮಾನವಾಗಲಿದೆ.

Copyright © All rights reserved Newsnap | Newsever by AF themes.
error: Content is protected !!