November 29, 2024

Newsnap Kannada

The World at your finger tips!

madegowdaru

ಕಾವೇರಿ ಹೋರಾಟಗಾರ ಜಿ. ಮಾದೇಗೌಡ ಅಸ್ತಂಗತ – ಕಳಚಿದ ಗಾಂಧಿ ಕೊಂಡಿ

Spread the love

ಮಂಡ್ಯ ಜಿಲ್ಲೆಯ ಧೃವತಾರೆ , ಕಾವೇರಿ ವರಪುತ್ರ, ಹೋರಾಟಗಾರ, ಗಾಂಧೀವಾದಿ ಜಿ. ಮಾದೇಗೌಡರು (93) ವಯೋಸಹಜ ಖಾಯಿಲೆಗಳಿಂದ ಬಳಲಿ ಚಿಕಿತ್ಸೆ ಫಲಕಾರಿಯಾಗದೇ ಇಂದು ಕೊನೆಯುಸಿರೆಳೆದರು.

ಮಂಡ್ಯದ ಬಂಧೀಗೌಡ ಬಡಾವಣೆ ನಿವಾಸಿಯಾಗಿದ್ದ ಮಾದೇಗೌಡರು, ಮದ್ದೂರು ತಾಲೂಕಿನ ಗುರುದೇವರ ಹಳ್ಳಿ ಗ್ರಾಮದವರು.

ಮಾದೇಗೌಡರು, ಪತ್ನಿ , ಡಾ.‌ ಪ್ರಕಾಶ್, ಮಧು ಮಾದೇಗೌಡ ಸೇರಿದಂತೆ ನಾಲ್ವರು ಪುತ್ರರು, ಪುತ್ರಿ ಹಾಗೂ ಅಪಾರ ಬಂಧುಗಳು ಅಭಿಮಾನಿಗಳನ್ನು ಅಗಲಿದ್ದಾರೆ.

೯ ದಶಕಗಳ ನಿರಂತರ ಹೋರಾಟ, ಅಭಿವೃದ್ಧಿ ಬಗ್ಗೆ ಸದಾ ಚಿಂತನೆ ಇಟ್ಟು ಬದುಕು ಸವೆಸಿದ ಗೌಡರು, ಬದುಕಿನಲ್ಲಿ ಗಾಂದೀವಾದವನ್ನು ಅಳವಡಿಸಿಕೊಂಡರು. ಮಂಡ್ಯದಲ್ಲಿ ಹಾಗೂ ಭಾರತೀನಗರದಲ್ಲಿ ಗಾಂಧೀಭವನ, ಗಾಂಧೀಗ್ರಾಮ, ಗುಡಿ ಕೈಗಾರಿಕೆ, ವಾಚನಾಲಯ ಹೀಗೆ ಹಲವು ಗಾಂಧೀ ಮಾರ್ಗ ಅನುಸರಿಸಿ , ಹಲವು ಯೋಜನೆಗಳನ್ನು ಅನುಷ್ಠಾನಕ್ಕೆ ತಂದ ಕೀರ್ತಿ ಗೌಡರದು.

ಮದ್ದೂರು ತಾಲೂಕಿನ ಕಾಳಮುದ್ದನದೊಡ್ಡಿ ಗ್ರಾಮ ಎಂದರೆ ಗೌಡರಿಗೆ ಅಚ್ಚುಮೆಚ್ಚು. ಈ ಗ್ರಾಮಕ್ಕೆ ಪಟ್ಟಣದ ಸ್ವರೂಪ ತಂದು ಕೊಟ್ಟು , ಭಾರತೀನಗರ ಎಂದು ಹೊಸ ಹೆಸರನ್ನು ಖ್ಯಾತಿಗೊಳಿಸಿದರು.

Copyright © All rights reserved Newsnap | Newsever by AF themes.
error: Content is protected !!