ಬೈಕ್ ಕಳ್ಳತನದ ಶಂಕೆ ಮೇಲೆ ಯುವಕನೊಬ್ಬನನ್ನು ಪೊಲೀಸರು ವಿಚಾರಣೆಗೆ ಕರೆದಿದ್ದಾರೆ. ಪೊಲೀಸರ ಕರೆಗೆ ಹೆದರಿ ಮಗ ಆತ್ಮಹತ್ಯೆಗೆ ಶರಣಾದನು. ಇತ್ತ ಮಗನ ಸಾವಿನ ಸುದ್ದಿ ತಿಳಿದ ತಾಯಿಯೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ವಿಜಯನಗರದಲ್ಲಿ ಜರುಗಿದೆ.
ಮೋಹನ್ ಗೌಡ (18) ಹಾಗೂ ಈ ಯುವಕನ ಅಮ್ಮ ಲೀಲಾವತಿ ಆತ್ಮಹತ್ಯೆ ಮಾಡಿಕೊಂಡವರು.
ಬೈಕ್ ಕಳ್ಳತನ ಕೇಸ್ ಒಂದರ ಸಂಬಂಧ ವಿಜಯನಗರ ಪೊಲೀಸರು ವಿಚಾರಣೆಗಾಗಿ ಮೋಹನ್ ಗೌಡನನ್ನು ಕರೆದಿದ್ದರು. ಆದರೆ ಮಗ ಮೋಹನ್ ಗೌಡ ಪೊಲೀಸರ ಕೇಸು, ವಿಚಾರಣೆ ಅಂತಾ ಹೆದರಿ ಮನೆಯಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ದ. ತಕ್ಷಣ ಮನೆಯಲ್ಲಿದ್ದವರು ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು.
ಮಗ ಆತ್ಮಹತ್ಯೆಗೆ ಯತ್ನಿಸಿರುವ ವಿಚಾರ ತಿಳಿದ ತಾಯಿ ಲೀಲಾವತಿ ಕೂಡ ಆಸ್ಪತ್ರೆ ಬಳಿ ಓಡಾಡೋಡಿ ಬಂದಿದ್ದರು. ಆಸ್ಪತ್ರೆ ಒಳಗೆ ಹೋಗೋವಷ್ಟರಲ್ಲಿ ಮಗ ಮೋಹನ್ ಗೌಡ ಸಾವನ್ನಪ್ಪಿದ್ದಾನೆಂದು ವೈದ್ಯರು ಹೇಳಿದರು.
ಮಗ ಸಾವನ್ನಪ್ಪಿದ್ದಾನೆ ಅನ್ನೋ ವಿಚಾರವನ್ನು ತಿಳಿದ ತಾಯಿ ಲೀಲಾವತಿ, ತಕ್ಷಣ ಆಸ್ಪತ್ರೆಯಿಂದ ಹೊರ ಬಂದು ಅಲ್ಲೇ ಬರುತ್ತಿದ್ದ ಕಾರಿಗೆ ತಲೆಕೊಟ್ಟು ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ಆಸ್ಪತ್ರೆ ಬಳಿ ಕುಟುಂಬಸ್ಥರು, ಸಾರ್ವಜನಿಕರ ಕಣ್ಣ ಮುಂದೆಯೇ ಈ ಘಟನೆ ನಡೆದಿದೆ.
More Stories
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
ಕ್ಷಣಾರ್ಧದಲ್ಲಿ 33 ಲಕ್ಷ ಕಳ್ಳತನ: ಓರ್ವ ಆರೋಪಿ ಬಂಧನ
ಚಾಮರಾಜನಗರದಲ್ಲಿ ಖಾಸಗಿ ಬಸ್ ಪಲ್ಟಿ: ಓರ್ವ ಸಾವು, 30ಕ್ಕೂ ಹೆಚ್ಚು ಜನರಿಗೆ ಗಾಯ