November 14, 2024

Newsnap Kannada

The World at your finger tips!

siri

FDA ಪ್ರಶ್ನೆಪತ್ರಿಕೆ ಸೋರಿಕೆ: ಕಮರ್ಷಿಯಲ್ ಟ್ಯಾಕ್ಸ್ ವಿಜಿಲೆನ್ಸ್ ಇನ್ ಸ್ಪೆಕ್ಟರ್ ಕಿಂಗ್​​ಪಿನ್:ಈಗ ಬಂಧಿತರು 9

Spread the love

ಕೆಪಿಎಸ್​​ಸಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದ ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ಕಿಂಗ್​ಪಿನ್ ಚಂದ್ರು ಸೇರಿ 9 ಆರೋಪಿಗಳನ್ನು ಬಂಧಿಸಿದ್ದಾರೆ.

ಬೆಂಗಳೂರಿನ ಕೊರಮಂಗಲದ ಕಮರ್ಷಿಯಲ್ ಟ್ಯಾಕ್ಸ್ ವಿಜಿಲೆನ್ಸ್ ಇನ್ ಸ್ಪೆಕ್ಟರ್ ಚಂದ್ರು ಈ ಸೋರಿಕೆ ಕಿಂಗ್ ಪಿನ್ ಎಂದು ಪೋಲಿಸರು ಹೇಳಿದ್ದಾರೆ.

ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದ ಚಂದ್ರು, ಇಲಾಖೆಯಲ್ಲಿರುವ ಅಧಿಕಾರಿಗಳನ್ನು ಬಳಸಿಕೊಂಡು ಪ್ರಶ್ನೆಪತ್ರಿಕೆ ಪಡೆದು, ಸೋರಿಕೆ ಮಾಡಿದ್ದ ಎಂದು ಆರೋಪಿಸಲಾಗಿದೆ. ಈ ಹಿಂದೆ ಕೂಡಾ ಬೇರೆ ಬೇರೆ ಪ್ರಶ್ನೆಪತ್ರಿಕೆ ಸೋರಿಕೆಗಳಲ್ಲಿ ಈತನ ಕೈವಾಡವಿದೆ ಎನ್ನಲಾಗಿದೆ.

ಪರೀಕ್ಷೆ ಬರೆಯುವ ಅಭ್ಯರ್ಥಿಗಳನ್ನೇ ಟಾರ್ಗೆಟ್ ಮಾಡಿ ಪ್ರತಿ ಜಿಲ್ಲಾವಾರು ಮಟ್ಟದಲ್ಲಿ ಪರೀಕ್ಷಾ ಅಭ್ಯರ್ಥಿಗಳನ್ನು ಗುರುತಿಸೋಕೆ ಚಂದ್ರು ತನ್ನ ಸಹಚರನೊಬ್ಬರನ್ನು ನೇಮಿಸಿದ್ದ. 

ಜಿಲ್ಲಾ ಮಟ್ಟದಲ್ಲಿದ್ದ ಸಹಚರನಿಂದ ಮಾಹಿತಿ ಸಂಗ್ರಹಿಸಿ ಪರೀಕ್ಷೆ ಬರೆಯುವ ಅಭ್ಯರ್ಥಿಗಳ ಬಳಿ ಡೀಲಿಂಗ್ ಮಾಡಿಸುತ್ತಿದ್ದ ಎಂದು ಹೇಳಲಾಗಿದೆ. ಬಳಿಕ ಈತನ ಗ್ಯಾಂಗ್ ಪ್ರತಿ ಪರೀಕ್ಷಾ ಅಭ್ಯರ್ಥಿಯಿಂದ 10 ಲಕ್ಷ ಹಣಕ್ಕೆ ಬೇಡಿಕೆಯಿಟ್ಟಿತ್ತು. ಮೊದಲಿಗೆ ಅಭ್ಯರ್ಥಿಗಳಿಂದ 1 ರಿಂದ 3 ಲಕ್ಷದವರೆಗೆ ಮುಂಗಡ ಹಣ ಪಡೆಯುತ್ತಿದ್ದರು.  ಪರೀಕ್ಷೆಯ ಬಳಿಕ ಇನ್ನುಳಿದ ಹಣವನ್ನು ನೀಡುವಂತೆ ತಿಳಿಸಿದ್ದರು ಎಂದು ಹೇಳಲಾಗಿದೆ.

ಕಿಂಗ್​ಪಿನ್ ಚಂದ್ರು, ಪ್ರಶ್ನೆ ಪತ್ರಿಕೆ ಸಂಗ್ರಹಿಸಲು ಬರುವ ಪರೀಕ್ಷಾ ಅಭ್ಯರ್ಥಿಗಳಿಗೆ ಮೊಬೈಲ್ ಫೋನ್ ನಿಷೇಧಿಸಿದ್ದ. ಕೇವಲ ಒಂದು ಪೇಪರ್ ಹಾಳೆ ತೆಗೆದು ಕೊಂಡು ಬರುವಂತೆ ರೂಲ್ಸ್ ಮಾಡಿದ್ದ. ಮೊಬೈಲ್ ಬಳಕೆ ಮಾಡಿದ್ರೆ ವಾಟ್ಸಪ್ ಮೂಲಕ ಬೇರೆಡೆಗೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗುತ್ತೆ ಅನ್ನೋ ಭಯದಲ್ಲಿ ಈ ರೀತಿ ಸೂಚಿಸಿದ್ದ ಎನ್ನಲಾಗಿದೆ.

ಒಂದು ಮನೆಯಲ್ಲಿ ಮೌಖಿಕವಾಗಿ ಪ್ರಶ್ನೆಪತ್ರಿಕೆಗೆ ಉತ್ತರ ಪಡೆಯುವಂತೆ ಮಾತ್ರ ಆರೋಪಿ  ಅವಕಾಶ ಕಲ್ಪಿಸಿದ್ದ.

ಸಿನಿಮೀಯ ಶೈಲಿಯಲ್ಲಿ ಆರೋಪಿಗಳ ಬಂಧನ :

ಎಫ್​ಡಿಎ ಪ್ರಶ್ನೆಪತ್ರಿಕೆ ಸೋರಿಕೆ ಹಿನ್ನೆಲೆ ಕಳೆದ ರಾತ್ರಿ ಸಿಸಿಬಿ ಅಧಿಕಾರಿಗಳು, ಖಚಿತ ಮಾಹಿತಿ ಆಧರಿಸಿ ಚಂದ್ರು ಮನೆ ಮೇಲೆ ಪೋಲಿಸರು ಸಿನಿಮೀಯ ಶೈಲಿಯಲ್ಲಿ ದಾಳಿ ಮಾಡಿದರು.

ಈ ವೇಳೆ ಪ್ರಶ್ನೆಪತ್ರಿಕೆ ಪ್ರತಿ ಹಾಗೂ ಉತ್ತರದ ಪ್ರತಿಗಳು ಸಿಕ್ಕಿವೆ. ಪ್ರತಿ ಪ್ರಶ್ನೆಗಳಿಗೂ ಉತ್ತರ ಸಿಕ್ಕಿದ್ದು,ಕೂಡಲೇ ಈ ಸಂಬಂಧ ಸಿಸಿಬಿ ಅಧಿಕಾರಿಗಳು, ಕೆಪಿಎಸ್​ಸಿ ಅಧಿಕಾರಿಗಳನ್ನು ಸಂಪರ್ಕ ಮಾಡಿದ್ದರು.

ಚಂದ್ರು ಬಳಿಯಿದ್ದ ಮೊಬೈಲ್ ವಶಕ್ಕೆ ಪಡೆದು, ಆತನ ಮೂಲಕವೇ ಉಳಿದ ಅಭ್ಯರ್ಥಿಗಳನ್ನು ಪೊಲೀಸರು ಕರೆಸಿಕೊಂಡಿದ್ದಾರೆ. ಈ ವೇಳೆ ಆರು ಅಭ್ಯರ್ಥಿಗಳನ್ನು ವಶಕ್ಕೆ ತೆಗೆದುಕೊಂಡರು. ಪರೀಕ್ಷಾ ಅಭ್ಯರ್ಥಿಗಳು ನೀಡಿದ್ದ 24 ಲಕ್ಷ ನಗದು ಹಾಗೂ 3 ವಾಹನಗಳು ಜಪ್ತಿ ಮಾಡಲಾಗಿದೆ. ಆರೋಪಿಗಳ ಜೊತೆ ಲಿಂಕ್​​ನಲ್ಲಿದ್ದವರ ಪತ್ತೆಗೆ ಸಿಸಿಬಿ‌ ತಲಾಷ್ ಮುಂದುವರೆಸಿದೆ.

Copyright © All rights reserved Newsnap | Newsever by AF themes.
error: Content is protected !!