ಎಫ್ ಡಿ ಎ ಪ್ರಶ್ನೆ ಪತ್ರಿಕೆ ಲೀಕ್ : ಕೆಪಿಎಸ್ ಸಿ ಸಿಬ್ಬಂದಿ ಸೇರಿ 20 ಮಂದಿ ಬಂಧನ

Team Newsnap
1 Min Read

ಎಫ್​ಡಿಎ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಎಸ್​​ಸಿ ಸಿಬ್ಬಂದಿಯೂ ಸೇರಿದಂತೆ ಇದುವರೆಗೂ 20 ಮಂದಿಯನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕೆಪಿಎಸ್ ಸಿ ಕಚೇರಿಯಲ್ಲಿ ದ್ವಿತೀಯ ದರ್ಜೆ ಗುಮಾಸ್ತನಾಗಿರುವ
ಬೀಳಗಿ ತಾಲೂಕಿನ ಬೂದಿಹಾಳ ಗ್ರಾಮದ ರಮೇಶ್ ಹೆರಕಲ್ ಸಿಸಿಬಿ ವಶದಲ್ಲಿರುವ ಸಿಬ್ಬಂದಿ.

ಕೆಪಿಎಸ್​​ಸಿಯಲ್ಲಿ ಎಸ್.ಡಿ.ಎ ಸಿಬ್ಬಂದಿಯಾಗಿರುವ ರಮೇಶ್ ಹೆರಕಲ್, ಪ್ರಶ್ನೆ ಪತ್ರಿಕೆ ಸೋರಿಕೆ ವಿಷಯ ಬಹಿರಂಗವಾದ ಬೆನ್ನಲ್ಲೇ ಚಿಕ್ಕಪಡಸಲಗಿ ಗ್ರಾಮಕ್ಕೆ ತೆರಳಿದ್ದ.

ಈ ಪ್ರಕರಣದಲ್ಲಿ ಭಾಗಿಯಾಗಿರುವ ಆಧಾರದ ಮೇಲೆ ಚಿಕ್ಕಪಡಸಲಗಿಯಲ್ಲಿ
ರಮೇಶ್ ಜೊತೆಯಲ್ಲಿ ಇನ್ನೂ ಐವರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವಾಣಿಜ್ಯ ತೆರಿಗೆ ಅಧಿಕಾರಿ ಚಂದ್ರು ಮೊಬೈಲ್ ವಶ ಪಡಿಸಿಕೊಂಡ ಪೋಲಿಸರು ‌ಪರಿಶೀಲನೆ ಮಾಡಿದ ವೇಳೆಯಲ್ಲಿ ಚಂದ್ರು ‌, ರಮೇಶ್ ನೊಂದಿಗೆ ಹೆಚ್ಚು ಬಾರಿ ಸಂಪರ್ಕ ಮಾಡಿ ಪ್ರಶ್ನೆ ಪತ್ರಿಕೆ ಮಾರಾಟದ ಡೀಲ್ ನಡೆಸಿರುವುದು ಬೆಳಕಿಗೆ ಬಂದಿದೆ.

ಈ ಪ್ರಕರಣ ಹಿಂದೆ ಕೆಪಿಎಸ್ ಸಿ ಯಲ್ಲಿ ಇರುವ ಯಾವ ಅಧಿಕಾರಿ ಗಳು ಭಾಗಿಯಾಗಿದ್ದಾರೆ ಎನ್ನುವುದನ್ನು ಸಿಸಿಬಿ ಪೋಲಿಸರು ಪತ್ತೆ ಕಾರ್ಯ ಆರಂಭಿಸಿದ್ದಾರೆ.

Share This Article
Leave a comment