January 8, 2025

Newsnap Kannada

The World at your finger tips!

kpsc1

ಎಫ್ ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ : 6 ಜನರ ಬಂಧನ : 24 ಲಕ್ಷ, 3 ಕಾರು ವಶ

Spread the love
  • ಪ್ರಶ್ನೆ ಪತ್ರಿಕೆ ಮಾರುತ್ತಿದ್ದ ಕಮರ್ಷಿಯಲ್ ಟ್ಯಾಕ್ಸ್ ಇನ್ಸ್ ಪೆಕ್ಟರ್ ಚಂದ್ರು ಬಂಧಿತರಲ್ಲಿ ಒಬ್ಬ
  • ಒಂದು ಪ್ರಶ್ನೆ ಪತ್ರಿಕೆ ಗೆ 10 ಲಕ್ಷ ರು ವಸೂಲಿ
  • ಚಂದ್ರು ಕೋರಮಂಗಲ ಕಮರ್ಷಿಯಲ್ ಕಚೇರಿಯಲ್ಲಿ ಕೆಲಸ

ಕರ್ನಾಟಕ ಲೋಕ ಸೇವಾ ಆಯೋಗದ ಎಫ್ ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಸಿಸಿಬಿ ಪೊಲೀಸರು 6 ಮಂದಿಯನ್ನು ಬಂಧಿಸಿದ್ದಾರೆ.

ಬಂಧಿತರಿಂದ 24 ಲಕ್ಷ ರು 3 ಕಾರುಗಳನ್ನು ವಶ ಪಡೆದುಕೊಂಡಿದ್ದಾರೆ.

ಪ್ರಶ್ನೆ ಪತ್ರಿಕೆ ಮಾರುತ್ತಿದ್ದ ಕಮರ್ಷಿಯಲ್ ಟ್ಯಾಕ್ಸ್ ಇನ್ಸ್ ಪೆಕ್ಟರ್ ಚಂದ್ರು ಬಂಧಿತರಲ್ಲಿ ಒಬ್ಬ . ಈತ ಒಂದು ಪ್ರಶ್ನೆ ಪತ್ರಿಕೆ ಗೆ 10 ಲಕ್ಷ ರು ವಸೂಲಿ ಮಾಡುತ್ತಿದ್ದನು. ಚಂದ್ರು ಕೋರಮಂಗಲ ಕಮರ್ಷಿಯಲ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾನೆ.

ಕೆಪಿಎಸ್ ಇ ಎಫ್ ಡಿಎ ಸ್ಪರ್ಧಾತ್ಮಕ ಪರೀಕ್ಷೆಗಾಗಿ ಜ. 23ರಂದು ಕನ್ನಡ ಪರೀಕ್ಷೆ ಹಾಗೂ ಜ. 24 ರಂದು ಪರೀಕ್ಷೆಗಳು ನಡೆಯಬೇಕಾಗಿತ್ತು.

ಆದರೆ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಜ್ಞಾನಭಾರತಿ ಹಾಗೂ ಕೆಂಗೇರಿ ಠಾಣೆಯ ಪೊಲೀಸರ ನೆರವಿನಿಂದ ಸಿಸಿಬಿ ಪೋಲಿಸರು ಉಳ್ಳಾಲದಲ್ಲಿ ಒಟ್ಟು 6 ಮಂದಿಯನ್ನು ಬಂಧಿಸಿದ್ದಾರೆ.

ಬಂಧಿತರಿಂದ 24 ಲಕ್ಷ ರೂಪಾಯಿ ಹಣ ಹಾಗೂ 3 ವಾಹನಗಳನ್ನು ಜಪ್ತಿ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ದಂತೆ ಬಂಧಿತರ ವಿಚಾರಣೆಯನ್ನು ನಡೆಸಲಾಗುತ್ತಿದೆ ಇನ್ನಷ್ಟು ಮಂದಿಯ ಬಂಧನವಾಗುವ ಸಾಧ್ಯತೆಯಿದೆ.

ಪ್ರಶ್ನೆ ಪತ್ರಿಕೆ ಸೋರಿಕೆಯಾಗುತ್ತಿದ್ದಂತೆಯೇ ಕೆಪಿಎಸ್ ಎಫ್ ಡಿಎ ಪರೀಕ್ಷೆಯನ್ನು ಮುಂದೂಡಿಕೆ ಮಾಡಿ ಆದೇಶ ಹೊರಡಿಸಿದ್ದು, ಮುಂದಿನ ಪರೀಕ್ಷಾ ದಿನಾಂಕವನ್ನು ಶೀಘ್ರದಲ್ಲಿಯೇ ಪ್ರಕಟಿಸುವುದಾಗಿ ಹೇಳಿದೆ.

Copyright © All rights reserved Newsnap | Newsever by AF themes.
error: Content is protected !!