ನಾನು ಅಮ್ಮನ ಹೊಟ್ಟೆಯಲ್ಲಿದ್ದಾಗಿನಿಂದಲೇ ಅಪ್ಪನಿಗೆ ಪ್ರಿಯವಾಗಿದ್ದೆ ಅವರು ನನ್ನನ್ನಾ ಹೇಗೆ ನೋಡಿಕೊಂಡರು ಅಂದರೆ ಆಕ್ಷಣವನ್ನು ಮರೆಯಲಾಗದು ನನ್ನಿಂದ..
ಮಗನ ಜನನ ಆದ ನಂತರ ಮಗನನ್ನು ತಬ್ಬಿಕೊಳ್ಳುತ್ತಾನೆ, ಮಗುವಿನೊಂದಿಗೆ ಆಟನಡುತ್ತ ಕಾಲ ಕಳೆಯುತ್ತಾನೆ, ಮಗನು ಇಷ್ಟ ಪಡುವ ಎಲ್ಲಾ ಆಟ ಸಾಮಗ್ರಿಗಳನ್ನು ಒದಗಿಸುತ್ತಾ ಪ್ರೀತಿ ಅಕ್ಕರೆಯಿಂದ ನೋಡಿಕೊಳ್ಳುತ್ತಾನೆ, ಮಗನ ಸಂತೋಷವೇ ಮುಖ್ಯ ಮಗ ಚೆನ್ನಾಗಿ ಇದ್ದರೆ ನಾನು ಇದ್ದಹಾಗೆ ಎಂದು ಹೇಳುತ್ತಾನೆ, ತಂದೆ ಮಗನಿಗೆ ಪ್ರೀತಿಯಿಂದ ದಿನನಿತ್ಯ ಸ್ನಾನ ಮಾಡಿಸುತ್ತಾ ಲಾಲನೆ ಪಾಲನೆ ಮಾಡುತ್ತಾನೆ., ವಾರಕ್ಕೊಮ್ಮೆ ಎಣ್ಣೆ ಹಚ್ಚಿ ಸ್ನಾನ ಮಾಡಿಸುತ್ತಾನೆ, ಮಗನಿಗೆ ಊಟ ಮಾಡಿಸಿದ ನಂತರ ಅಪ್ಪ (ಶ್ರೀಧರ) ಊಟ ಮಾಡುವನು..
ಶ್ರೀಧರ ತನ್ನ ಮಗನಿಗೆ ನಾಮಕರಣ ಮಾಡಲು ಬಹಳ ಪ್ರೀತಿಯಿಂದ ಅದ್ದೂರಿಯಾಗಿ ಆಚರಿಸಲಾಯಿತು ಮಗನಿಗೆ ಅಗಸ್ತ್ಯ ಎಂದು ನಾಮಕರಣ ಮಾಡಿದನು ಅಗಸ್ತ್ಯನಿಗೆ ಕೈಹಿಡಿದು ನಡೆಸಲು ಶುರು ಮಾಡುತ್ತಾನೆ, ನಡೆಯಲು ಶುರು ಮಾಡಿದನು ಎಂದು ಶ್ರೀಧರ ಬಹಳ ಸಂತಸ ಪಡುತ್ತಾರೆ, ಅಗಸ್ತ್ಯನಿಗೆ ಶಾಲೆಗೆ ಸೇರಿಸಿದರು ದಿನ ನಿತ್ಯ ಹಳೆಯ ಬಜಾಜ್ ಸ್ಕೂಟರ್ ಲೀ ಶಾಲೆಯ ಕ್ಲಾಸ್ ರೂಮ್ ವರೆಗೂ ಕೈಹಿಡು ನಡೆಸುತ್ತಾ ಬಿಡುವನು, ಶಾಲೆಯ ಸಮಯ ಮುಗಿದ ಮೇಲೆ ಶ್ರೀಧರ ತನ್ನ ಕೆಲಸವನ್ನು ಪಕ್ಕಕ್ಕೆ ಇಟ್ಟು ಅಗಸ್ತ್ಯ ನಿಗೆ ಕರೆದುಕೊಂಡು ಬರಲು ಶಾಲೆಯ ಬಳಿ ಬಂದು ಕ್ಲಾಸ್ ರೂಮಿನಿಂದ ಕೈಹಿಡಿದು ಕರೆದುಕೊಂಡು ಸ್ಕೂಟರ್ ನಲ್ಲಿ ಮುಂದೆ ನಿಲ್ಲಿಸಿ ಕರೆದುಕೊಂಡು ತನ್ನ ಅಂಡಗಿಯ ಬಳಿ ಹೋಗುತ್ತಾ , ಹೋಗಿದ ಕೂಡಲೇ ತನ್ನ ಶೂಸ್ ಬಿಚ್ಚಿ ಅಗಸ್ತ್ಯನಿಗೆ ಇಷ್ಟವೆಂದು ದಿನ ನಿತ್ಯ ಕ್ರೀಮ್ ಬಿಸ್ಕೇಟ್ ಕೊಡುವನು.
ಅಗಸ್ತ್ಯ ಕೈಹಿಡಿದು ಅಕ್ಷರಾಭ್ಯಾಸ ಮಾಡಿಸಿ ಮಗನೊಂದಿಗೆ ಕಾಲ ಕಳೆಯುವನು ಅಗಸ್ತ್ಯ ಸ್ವಲ್ಪ ದೊಡ್ಡವನು ಆದನೆಂದು ಅವನಿಗೆ ಒಂದು ಸಣ್ಣ ನೀಲಿ ಬಣ್ಣದ ಸೈಕಲ್ ಕೊಡಿಸುತ್ತಾನೆ, ದಿನ ನಿತ್ಯ ಮಗನ ಸೈಕಲನ್ನು ಸ್ವಚ್ಚ ಮಾಡಿ ಸೈಕಲ್ ಅಭ್ಯಾಸ ಮಾಡಿಸುತ್ತಾ ತನ್ನ ಆಸೆಗಳನ್ನು ಬದಿಗಿಟ್ಟು ಅಗಸ್ತ್ಯನ ಸಂತೋಷದಲ್ಲಿ ತನ್ನ ಸಂತೋಷವನ್ನೂ ನೋಡುವನು, ಪ್ರತಿ ವಾರ ಶ್ರೀಧರ ಬೆಂಗಳೂರು ಹೋಗುತ್ತಿದ್ದರು ಅಂಗಡಿಯ ಕೆಲಸದ ಮೇಲೆ ಅಗಸ್ತ್ಯನಿಗೆ ಶಾಲೆಗೆ ರಜ ಮಾಡಿಸಿ ಕರೆದು ಕೊಂಡು ಹೋಗುವನು ಅಗಸ್ತ್ಯ ಕಾಲು ನೋವು ಎಂದರೆ ಸಾಕು ಎತ್ತಿಕೊಂಡು ತನ್ನ ಕುತ್ತಿಗೆಯ ಮೇಲೆ ಕೂರಿಸಿ ಹಿಡಿ ಪ್ರಪಂಚವನ್ನೇ ತೋರಿಸುತ್ತಾ ಒಂದು ಕೈಯಲ್ಲಿ ಮಗನ ( ಅಗಸ್ತ್ಯನ) ಕೈಯನ್ನು ಹಿಡಿದು ಮತ್ತೂಂದು ಕೈಯಲ್ಲಿ ಲಗೇಜ್ ಹಿಡಿದು ಪ್ರೀತಿಯಿಂದ ಜೋಪಾನ ಮಾಡಿಕೊಳ್ಳುವನು ಪ್ರತಿ ನಿತ್ಯ ಅಗಸ್ತ್ಯ ತನ್ನ ಶ್ರೀಧರನ ಕೈಮೇಲೆ ಮಲಗುವನು ಅಗಸ್ತ್ಯ ಶ್ರೀಧರನನ್ನು ಬಿಟ್ಟು ಒಂದು ನಿಮಿಷ ಕಳೆಯುತ್ತಿರಲಿಲ್ಲ ತನ್ನ ತಂದೆ ಶ್ರೀಧರ ಕಾಣದಿದ್ದಲ್ಲಿ ಶ್ರೀಧರನ ಫೋಟೋ ನೋಡಿ ಅಳುತ್ತಾ ಕುರುವನು, ಅಗಸ್ತ್ಯನಿಗೆ ಜ್ವರ ಎಂದರೆ ಸಾಕು ಶ್ರೀಧರ ತನ್ನ ತೊಡೆಯ ಮೇಲೆ ಮಲಗಿಸಿ ಹಣೆಯನ್ನು ಸವರುತ್ತಾ ನೊಡ್ಕಿಕೊಳ್ಳುವನು.
ಅಗಸ್ತ್ಯನಿಗೆ ಸ್ಕೂಟರ್ ಬೈಕ್ ಎಂದರೆ ಪ್ರಾಣ ತನ್ನ ಸ್ಕೂಟರ್ಗೆ ಪುಟ್ಟ ಸೀಟು ಹಾಕಿಸಿ ಅದರ ಮೇಲೆ ಕೂರಿಸಿಕೊಂಡು ಹೋಗುವನು ಹೋಗುವಾಗ ಮಗ್ಗಿ ಹೇಳಿಕೊಡುತ್ತಾ ನೀತಿ ಪಾಠ ಕಲಿಸಿ ನಾಲಕ್ಕು ಜನಕ್ಕೆ ಒಳ್ಳೇದನ್ನು ಮಾಡಬೇಕು ಸಹಾಯ ಗುಣ ಬೇಳಿಸಿಕೊ ಎಂದು ಬುದ್ಧಿ ಹೇಳುವನು., ಅಗಸ್ತ್ಯ ಎಸೆಸೆಲ್ಸಿ ಫಲಿತಾಂಶ ಕಂಡು ಶ್ರೀಧರ ಬಹಳ ಖುಷಿ ಪಟ್ಟನು ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಳ್ಳುತ್ತಾ ಅಗಸ್ತ್ಯನಿಗೆ ಚೆನ್ನಾಗಿ ಓದು ಎಂದು ಹೇಳುವರು ಅಗಸ್ತ್ಯನ ಪಲಿತಾಂಶ ಕಂಡು ತಂದೆ ಬಹಳ ಖುಷಿ ಪಟ್ಟನು ಹೀಗೆ ಒಂದು ದಿನ ಹಳೆಯ ಮನೆಯನ್ನು ಕೆಡುವಿ ಹೊಸ ಮನೆ ಕಟ್ಟಲು ನಿರ್ಧಾರ ಮಾಡಿದರು ಮುಂದೆ ತನ್ನ ಮಗನಾದ ಅಗಸ್ತ್ಯನ ಭವಿಷ್ಯಕ್ಕೆ ಅನುಕೂಲ ಆಗಲಿ ಎಂದು ಹಾಗೆ ದಿನಗಳು ಸಾಗುವಾಗ ಶ್ರೀಧರ ಬಹಳ ಶ್ರಮ ಜೀವಿ ಒಬ್ಬೊಂಟಿಯಾಗಿ ಬಹಳ ಶ್ರಮ ಪಟ್ಟು ಮೇಲೆ ಬಂದವರು ಒಂದು ಸುಂದರ ಮನೆಯನ್ನು ಕಟ್ಟಿಸಿದರು
ಶ್ರೀಧರನಿಗೆ ಮಂಡಿ ನೋವಲು ಶುರುವಾಯಿತು ತನ್ನ ಹಳೆಯ ಗಾಡಿ ಓಡಿಸಲು ಕಷ್ಟವಾಗುತ್ತಿತ್ತು ಅಗಸ್ತ್ಯ ಬಲ್ವಂತ ಮಾಡಿ ಹೊಸ ಸ್ಕೂಟಿ ಒಂದನ್ನು ತಗೊಳ್ಳಿ ಎಂದು ಹಠ ಮಾಡಿದ. ತಂದೆ ಹೊಸ ಗಾಡಿಯನ್ನು ಖರೀದಿಸಿದರು ಅದನ್ನು ಓಡಿಸುವುದನ್ನು ನೋಡುವುದೆ ಅಗಸ್ತ್ಯ ನಿಗೆ ಬಹಳ ಸಂತೋಷ ಶ್ರೀಧರ ಬಹಳ ಖುಷಿಯಿಂದ ಅಗಸ್ತ್ಯನನ್ನು ಕೂರಿಸಿಕೊಂಡು ಒಂದು ಲಾಂಗ್ ರೈಡ್ ಕರೆದುಕೊಂಡು ಹೋಗಿಬಂದರು…, ಅಗಸ್ತ್ಯನ ಜೊತೆ ಗಾಡಿಯಲ್ಲಿ ಕುಳಿತು ರಸ್ತೆಯಲ್ಲಿ ಸಂಚಾರ ಮಾಡುವುದು ಶ್ರೀಧರನಿಗೆ ಬಹಳ ಖುಷಿ.., ಶ್ರೀಧರ ಅವರ ಜನುಮ ದಿನವು ಕೂಡ ಒಂದು ಸ್ವೀಟ್ ಹಾಗು ಹೊಸ ಬಟ್ಟೆ ತೆಗೆದುಕೊಂಡಿಲ್ಲ ಎಲ್ಲವು ಅಗಸ್ತ್ಯನಿಗೆ ತ್ಯಾಗ ಮಾಡಿದರು ಅವನ ಸಂತೋಷಕ್ಕೆ.
ಅಗಸ್ತ್ಯ ಬೆಳೆದು ನಿಂತ ಅವನು ದುಡಿಯಲು ಶುರು ಮಾಡಿದ, ಅಗಸ್ತ್ಯ ಬೆಂಗಳೂರಿಗೆ ಹೋದನು ಅಲ್ಲಿ ಒಂದಷ್ಟು ವರ್ಷ ಕೆಲಸ ಮಾಡಿದನು ಪ್ರತಿ ಬಾರಿ ಅಗಸ್ತ್ಯ ಮನೆಗೆ ಬರುತ್ತಿದ್ದಾನೆ ಎಂದು ತಿಳಿದಾಗ ತಂದೆ ಅಗಸ್ತ್ಯನನ್ನು ಕರೆದುಕೊಂಡು ಹೋಗಲು ರೈಲಿನ ನಿಲ್ದಾಣದ ಬಳಿ ಬಂದು ನಿಲ್ಲುವನು ಸೀದ ಮನೆಗೆ ಕರೆದು ಕೊಂಡು ಅಗಸ್ತ್ಯನಿಗಾಗಿ ಪ್ರೀತಿಯಿಂದ ಮಾಡಿದ ಕ್ಯಾರಟ್ ಹಲ್ವಾ ತಿನ್ನಿಸುವನು ಮಗ ಅಗಸ್ತ್ಯ ಮನೆಗೆ ಬಂದಿದ್ದಾನೆ ಎಂದು ವಿಷೇಶ ಅಡುಗೆ ಮಾಡಿ ಬಡಿಸುವನು ಶ್ರೀಧರನಿಗೆ ಅಗಸ್ತ್ಯ ಎಂದರೆ ಬಹಳ ಪ್ರೀತಿ ಅಕ್ಕರೆ ಮಗ ಪುನಃ ಕೆಲಸಕ್ಕೆ ದೂರ ಹೋಗುವ ಸಂದರ್ಭದಲ್ಲಿ ಶ್ರೀಧರ ಮುಖವನ್ನು ಗಂಟು ಮಾಡಿಕೊಂಡು ಇರುವನು ಅಗಸ್ತ್ಯ ಮತ್ತೆ ನನ್ನ ಜೊತೆ ಇರುವುದಿಲ್ಲ ಎಂದು ಆದರೂ ಅಗಸ್ತ್ಯನಿಗೆ ರೈಲು ಬೋಗಿಯ ಬಳಿ ಬಂದು ಬಿಟ್ಟು ರೈಲು ಚಲಿಸುವವರೆಗೂ ನಿಂತು ನೋಡುತ್ತಿರುವನು ಅಗಸ್ತ್ಯ ನಿಗೆ ರವೆಉಂಡೆ, ಹಲ್ವಾ ಇತರೆ ತಿಂಡಿಗಳನ್ನು ಪ್ರೀತಿಯಿಂದ ಮಾಡಿ ಡಬ್ಬಿಗೆ ಹಾಕಿ ಶ್ರೀಧರ ಕಳಸುವನು
ಪ್ರತಿ ನಿತ್ಯ ಅಗಸ್ತ್ಯನಿಗೆ ಫೋನ್ ಮಾಡಿ ಊಟ ಆಯ್ತಾ ತಿಂಡಿ ಆಯ್ತಾ ಹೆಗಿದಿಯ ಎಂದು ವಿಚಾರ ಮಾಡುತ್ತಾ ಅಗಸ್ತ್ಯ ಊಟ ತಿಂಡಿ ಮಾಡಿದ ನಂತರ ತಂದೆ ಊಟ ಮಾಡುವನು ತನಗೆ ಊಟ ಕಡಿಮೆ ಆದರೂ ತೊಂದರೆ ಇಲ್ಲ ಅಗಸ್ತ್ಯ ಚೆನ್ನಾಗಿ ಇರಲಿ ಎಂದು ಹೊಟ್ಟೆ ತುಂಬಾ ಊಟ ಬಡಿಸುವನು ತಂದೆ ತನಗೆ ಜ್ವರ ಬಂದರು ಅಗಸ್ತ್ಯನ ಬಳಿ ಹೇಳುತ್ತಿರಲಿಲ್ಲ ಗಾಬರಿ ಆಗುತ್ತಾನೆ ಎಂದು.
ಸ್ವಲ್ಪ ದಿನಗಳ ನಂತರ ಅಗಸ್ತ್ಯನ ತಾಯಿ (ನೀರಜ) ಫೋನ್ ಮಾಡಿದಳು …. ಲೋ ಅಗಸ್ತ್ಯ ನಿನ್ನ ಅಪ್ಪನಿಗೆ ಕಣ್ಣು ನೋವು ಎಂದು ಕೊನೆಗೆ ಅಗಸ್ತ್ಯ ಗಾಬರಿಗೊಂಡು ಬಂದನು ಅಪ್ಪನನ್ನು ಆಸ್ಪತ್ರೆಗೆ ತೋರಿಸಿದನು ಅಪ್ಪನ ಆರೋಗ್ಯದ ಕ್ಷೇಮಕ್ಕಾಗಿ ಅಗಸ್ತ್ಯ ತಾನು ಹುಟ್ಟು ಬೆಳೆದ ಊರಿನಲ್ಲೇ ಕೆಲಸ ಮಾಡಲು ಶುರು ಮಾಡಿದನು.
ಶ್ರೀಧರನ ಆರೋಗ್ಯ ಚೇತರಿಸುತ್ತ ಬಂತು ಅಗಸ್ತ್ಯ ಸಮಧಾನ ಮಾಡಿಕೊಂಡ ಹಾಗೆ ಕೆಲವು ದಿನಗಳ ಕಾಲ ಇಲ್ಲಿಯೆ ಕೆಲಸ ಮಾಡಲು ಶುರು ಮಾಡಿದ ಹಾಗೆ ಸ್ವಲ್ಪ ದಿನಗಳ ನಂತರ ಶ್ರೀಧರ ಹಾಗು ಅಗಸ್ತ್ಯನ ನಡುವೆ ಹೊಂದಾಣಿಕೆ ಕಳೆದುಕೊಳ್ಳಲು ಶುರುವಾಯಿತು ಅಗಸ್ತ್ಯ ಅಪ್ಪ ಹೇಳಿದ ಮಾತುಗಳಿಗೆ ಲೆಕ್ಕವಿಲ್ಲದ ಹಾಗೆ ನಡೆದುಕೊಳ್ಳುತ್ತಿದ್ದ ಎಲ್ಲದಕ್ಕೂ ಕೋಪ ಮಾಡಿ ಕೊಳ್ಳುತ್ತಾ ಕೂಗಾಡಲು ಶುರು ಮಾಡಿದ.
ತನ್ನ ಮಗ ತನಗೆ ಬೈಯುವುದನ್ನು ಕಂಡ ಶ್ರೀಧರನಿಗೆ ತುಂಬಾ ಬೇಸರವಾಗುತ್ತಿತ್ತು.ಆದರೂ ಪಾಪ ಮಗನಿಗೆ ತುಂಬಾ ಕಷ್ಟದ ಪರಿಸ್ಥಿತಿ ದುಡಿಯಬೇಕು ತನ್ನ ಆರೋಗ್ಯವನೂ ನೋಡಿಕೊಳ್ಳಬೇಕು ಪಾಪ ತುಂಬಾ ಚಿಂತೆ ಮಾಡುತ್ತಿರುತ್ತಾನೆ ಎಂದು ತನ್ನಷ್ಟಕ್ಕೇ ನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ.
ಮನೆಗೆ ಬಂದ ಅಗಸ್ತ್ಯನಿಗೆ ಆಘಾತ ,ತನ್ನ ಪ್ರೀತಿಯ ಅಪ್ಪ ಇನ್ನಿಲ್ಲ ವೆಂಬ ದುಃಖ ಒಂದೆಡೆಯಾದರೆ ಅಪ್ಪನ ಆತ್ಮಾಹುತಿಗೆ ತಾನೇ ಕಾರಣವಾದೆ ಎಂದು ಬಹಳ ದುಃಖಿಸತೊಡಗಿದ.ಇದನ್ನು ಓದಿ –ಹೊಸ ವರ್ಷದ ಹೊಸ್ತಿಲಿನಲ್ಲಿ… ನವ ಆಶಯಗಳ ತೇರನೆಳೆಯೋಣ ಬನ್ನಿ
ಅಪ್ಪನ ಸಾವಿನ ನಂತರ ಆತನಿಗೆ ತನ್ನ ತಪ್ಪು ಅರ್ಥ ವಾಗಿತ್ತು ಆದರೆ ತಿದ್ದಿಕೊಂಡು ನಡೆಯಲು ಅಪ್ಪನಿರಲಿಲ್ಲ..ಅಪ್ಪನ ತ್ಯಾಗವನ್ನ ನಾ ಮರೆತು ತಪ್ಪು ಮಾಡಿದೆ ಆದರೆ ಯಾರೂ ಇಂತಹ ತಪ್ಪು ಮಾಡದೆ ಅಪ್ಪ ಅಮ್ಮನನ್ನ ಪ್ರೀತಿಯಿಂದ ನೋಡಿಕೊಳ್ಳಿ ಎಂದು ಎಲ್ಲರ ಬಳಿ ಹೇಳುತ್ತು ಅಪ್ಪನ ನೆನಪಲ್ಲೇ ಕಾಲ ಕಳೆದನು…….
ಅಪ್ಪನ ತ್ಯಾಗವನ್ನು ಎಂದಿಗೂ ವರ್ಣಿಸಲು ಸಾಧ್ಯವಿಲ್ಲ…, ಅಪ್ಪನ ಪ್ರೀತಿ ಅಕ್ಕರೆ ಅಪಾರ.., ಸದಾ ಗೌರವಿಸಿ ಅಪ್ಪಂದಿರನ್ನು..!!
ವೈಶಾಕ್. ಬಿ. ಆರ್.ಮೂರ್ತಿ.
ಭದ್ರಾವತಿ
More Stories
ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ: ಚುನಾವಣೆಯ ಮೂಲಕ ತೀರ್ಮಾನ
ಕಾನ್ಸ್ಟೇಬಲ್ ನೇಮಕಾತಿ ದೈಹಿಕ ಪರೀಕ್ಷೆ: ಓಟದ ವೇಳೆ ಬಿದ್ದ ಯುವಕನ ದುರ್ಮರಣ
ಎಲಿವೇಟೆಡ್ ಕಾರಿಡಾರ್ ಮೂಲಕ ಏರ್ಪೋರ್ಟ್ ರಸ್ತೆಯ ಟ್ರಾಫಿಕ್ ಸಮಸ್ಯೆಗೆ ಪರಿಹಾರ