January 8, 2025

Newsnap Kannada

The World at your finger tips!

atm van

2 ಮಕ್ಕಳ ತಂದೆ, 65 ಲಕ್ಷ ಹಣ ಎಗರಿಸಿಕೊಂಡು ಪ್ರೇಯಸಿ ಜೊತೆ ಎಸ್ಕೇಪ್: ಚಾಲಕನ‌ ರೋಚಕ‌ ಕಥೆ

Spread the love

ಬೆಂಗಳೂರಿನ ಸುಬ್ರಮಣ್ಯ ನಗರದಲ್ಲಿ ಎಟಿಎಂಗೆ ಹಣ ತುಂಬುವ ವಾಹನದ ಚಾಲಕ 65 ಲಕ್ಷ ಹಣವಿರುವ ಬ್ಯಾಗ್‍ಗಳನ್ನು ಹೊತ್ತು ಎಸ್ಕೇಪ್ ಆಗಿರುವ ಪ್ರಕರಣಕ್ಕೆ ಒಂದು ಹೊಸ ಟಿಸ್ಟ್ ದೊರಕಿದೆ.

ಸೆಕ್ಯೂರ್ ವಾಲಿಯ ಚಾಲಕನಾಗಿದ್ದ ಯೋಗೇಶ್ ಎಟಿಎಂ ಹಣ ಕದ್ದ ಆರೋಪಿ ಎನ್ನುವುದು ದೃಢವಾಗಿದೆ

ಮದುವೆಯಾಗಿ ಪತಿ ಬಿಟ್ಟಿದ್ದ ಅತ್ತೆ ಮಗಳ ಜೊತೆ ಈ ಯೋಗೇಶ್ ಮದುವೆಯಾಗಲು ನಿರ್ಧರಿಸಿದ್ದಾನೆ.‌ ಯೊಗೇಶ್‍ನಿಗೆ ಕೂಡ ಈಗಾಗಲೇ ಮದುವೆಯಾಗಿ, ಇಬ್ಬರು ಮಕ್ಕಳಿದ್ದಾರೆ. ಆದರೂ ಯೋಗೇಶ್ ಅತ್ತೆ ಮಗಳನ್ನು ಪ್ರೀತಿಸುತ್ತಿದ್ದಾನೆ.

ಪ್ರೇಯಸಿ ಜೊತೆ ಸುಖ ಸಂಸಾರ ನಡೆಸಲು 65 ಲಕ್ಷ ರು ಹಣ ದೋಚಿ ಆಟೋದಲ್ಲಿ ಪರಾರಿಯಾಗಿದ್ದ. ನಂತರ ಪ್ರೇಯಸಿ ಅತ್ತೆ ಮಗಳನ್ನು ಕರೆದು ಕೊಂಡು ಪರಾರಿಯಾಗಿದ್ದಾನೆ.

ಯೋಗೇಶ್ ಹಾಗೂ ಆತನ ಪ್ರೇಯಸಿ ಇಬ್ಬರೂ ಮೊಬೈಲ್ ಕೂಡ ಸ್ವಿಚ್ ಆಫ್ ಮಾಡಿದ್ದಾರೆ. ಘಟನೆಯ ಬಗ್ಗೆ ತನಿಖೆ ನಡೆಸಿದಾಗ ಯೊಗೇಶ್ ಅತ್ತೆ ಮಗಳೂ ಕೂಡ ಪರಾರಿಯಾಗಿರುವುದು ಬೆಳಕಿಗೆ ಬಂದಿದೆ.

ಸದ್ಯ ಉತ್ತರ ಭಾರತದ ಕಡೆ ತಿರುಗಾಟ ಮಾಡುತ್ತಿದ್ದಾರೆಂಬ ಬಗ್ಗೆ ಪೊಲೀಸರಿಗೆ ಮಾಹಿತಿ ಇದೆ, ವಿಶೇಷ ತಂಡ ರಚಿಸಿ ಸುಬ್ರಹ್ಮಣ್ಯ ನಗರ ಪೊಲೀಸರು ಯೊಗೇಶ್ ನ ಪತ್ತೆಗಾಗಿ ಜಾಲ ಬೀಸಿದ್ದಾರೆ.

ravi bojegowda 1
Copyright © All rights reserved Newsnap | Newsever by AF themes.
error: Content is protected !!