ಪರವಾಗಿಲ್ಲ ಬಿಡಿ

Team Newsnap
1 Min Read
Pay Farmer Abhiyan from Mandya Farmers: Pay Rs 4500 per ton of sugarcane - farmers demand ಮಂಡ್ಯ ರೈತರಿಂದಲೂ ಪೇ ಫಾರ್ಮರ್ ಅಭಿಯಾನ : ಟನ್ ಕಬ್ಬಿಗೆ 4500 ರು ಕೊಡಿ - ರೈತರ ಒತ್ತಾಯ

ನೀವು ವಿದ್ಯಾರ್ಥಿಗಳ ಹೋರಾಟವನ್ನು ಬೆಂಬಲಿಸಲಿಲ್ಲ
ಪರವಾಗಿಲ್ಲ ಬಿಡಿ:
ನಿಮಗದರಿಂದೇನು ಲಾಭವಿರಲಿಲ್ಲ.

ನೀವು ಎನ್ಆರ್‌ಸಿ ವಿರೋಧಿಸಿ ಪ್ರಜಾತಾಂತ್ರಿಕ ಸತ್ಯಾಗ್ರಹಿಗಳಿಗೆ ಜೊತೆಯಾಗಲಿಲ್ಲ
ಪರವಾಗಿಲ್ಲ ಬಿಡಿ:
ಅವರಿಂದ ನಿಮಗೇನೂ ಅನುಕೂಲವಿರಲಿಲ್ಲ.

ನೀವು ಗುಂಪು ಹತ್ಯೆಗೀಡಾದವರ ದುಃಖತಪ್ತ
ಕುಟುಂಬಗಳ ಜೊತೆಗೂ ನಿಲ್ಲಲಿಲ್ಲ.
ಪರವಾಗಿಲ್ಲ ಬಿಡಿ;
ಅವರಿಗಾಗಿ ನಿಮ್ಮಲ್ಲಿ
ಕರುಣೆ ಇರಲಿಲ್ಲ.

ನೀವು ಕಣ್ಗಾವಲಿನ ಕಾಶ್ಮೀರದ ಹಿಂದೂಸ್ತಾನಿಗಳ ಜೊತೆ ನಿಲ್ಲಲಿಲ್ಲ
ಪರವಾಗಿಲ್ಲ ಬಿಡಿ;
ಅವರನ್ನು ನಮ್ಮವರೆಂದು ನೀವು ಭಾವಿಸಿದ್ದಾದರೂ ಎಂದು?

ನೀವು ಅತ್ಯಾಚಾರಿಗಳ ವಿರುದ್ದವಾದರೂ ಎದ್ದು ನಿಲ್ಲಲಿಲ್ಲ
ಪರವಾಗಿಲ್ಲ ಬಿಡಿ:
ಅತ್ಯಾಚಾರಕ್ಕೊಳಗಾದ ಯಾವೊಬ್ಬ ಹೆಣ್ಣುಮಗಳೂ ನಿಮ್ಮ ಸಂಬಂಧಿಗಳಾಗಿರಲಿಲ್ಲ

ನೀವು ಖಾಸಗೀಕರಣಕ್ಕೆ ಸಿಕ್ಕು ಉಸಿರುಗಟ್ಟುತ್ತಿರುವ
ಸರ್ಕಾರಿ ನೌಕರರ ಪರ ನಿಲ್ಲಲಿಲ್ಲ
ಪರವಾಗಿಲ್ಲ ಬಿಡಿ:
ಅವರಲ್ಲಿ ಯಾರೊಬ್ಬರೂ ನಿಮ್ಮ ಕುಟುಂಬದ ಸದಸ್ಯರಾಗಿರಲಿಲ್ಲ.!

ಕಳೆದ ಏಳು ವರ್ಷಗಳಿಂದ ಕ್ಷಣ ಕ್ಷಣವೂ ದೇಶದ ನೌಕೆ ಮುಳುಗುತ್ತಿದೆ
ಪರವಾಗಿಲ್ಲ ಬಿಡಿ:
ನಿಮಗೆ ಇದೊಂದು ಸವಾಲು ಎಂದು ಅನಿಸುತ್ತಲೇ ಇಲ್ಲ

ಕೃಷಿ ದೇಶದ ಆರ್ಥಿಕತೆಯ ಬೆನ್ನೆಲು
ರೈತರು ಕಳೆದ ಎರಡು ತಿಂಗಳಿನಿಂದ ಬೀದಿಯಲ್ಲಿ ಪ್ರತಿಭಟಿಸುತ್ತಿದ್ದಾರೆ
ಮನೆ, ಹೊಲಗದ್ದೆ ಬಿಟ್ಟು
ಹಕ್ಕಿಗಾಗಿ ಹೋರಾಡುತ್ತಿದ್ದಾರೆ
ಇವತ್ತಾದರೂ ನೀವು ಅವರ ಜೊತೆಗಿರಬೇಕಿತ್ತಲ್ಲ..?!

ಈ ಬೆಳಗ್ಗೆ ನೀವು ತಿಂದ ರೊಟ್ಟಿ,ಅನ್ನ ಇದಾವುದೂ ಕಾರ್ಖಾನೆಯ,
ಅಂಬಾನಿ ಅದಾನಿಯ ದೌಲತ್ತಿನಿಂದ ಸೃಷ್ಟಿಸಿದ್ದಲ್ಲ,
ರೈತರ ಕಣ್ಣೀರು, ಬೆವರು ಶ್ರಮದಿಂದ ಬೆಳೆದದ್ದು.
ಈಗಲೂ ನೀವು ಅನ್ನದಾತನ ಜೊತೆ ನಿಲ್ಲದಿದ್ದರೆ
ಸ್ಪಷ್ಟವಾಯಿತು ಬಿಡಿ….,
ನೀವು ಮನುಷ್ಯತ್ವದ ವಿರೋಧಿಗಳೆಂದು,
ನೀವು ಅಂಧಭಕ್ತರೆಂದು,
ಈ ದೇಶ ಮುಳುಗುತ್ತಿರುವುದಕ್ಕೆ ನೀವೇ ಕಾರಣರೂ ಎಂದು.

ಮೂಲ: ಹಿಂದಿ
ಭಾವಾನುವಾದ; ಎನ್.ರವಿಕುಮಾರ್ ಟೆಲೆಕ್ಸ್

Share This Article
Leave a comment