ಯಾದಗಿರಿ: ವಿಜಯಪುರದ ನಂತರ, ಯಾದಗಿರಿ ಜಿಲ್ಲೆಯ ಸಾವಿರಕ್ಕೂ ಹೆಚ್ಚು ರೈತರಿಗೆ ವಕ್ಫ್ ಬೋರ್ಡ್ ಹೊಸ ಸಮಸ್ಯೆ ತಂದುಕೊಟ್ಟಿದೆ. ರೈತರ ಭೂಮಿಯನ್ನು ಪಹಣಿ ದಾಖಲೆಗಳ 11ನೇ ಕಾಲಂನಲ್ಲಿ ವಕ್ಫ್ ಎಂದು ಗುರುತಿಸಲಾಗಿದ್ದು, ಸಾವಿರಾರು ಎಕರೆ ಕೃಷಿ ಭೂಮಿ ವಕ್ಫ್ ಹೆಸರಿಗೆ ವರ್ಗಾವಣೆಗೊಂಡಿದೆ. ಇದರಿಂದ ತೀವ್ರ ಅಸಮಾಧಾನಗೊಂಡಿರುವ ರೈತರು ವಕ್ಫ್ ಕಾಯ್ದೆ ವಿರುದ್ಧ ಪ್ರತಿಭಟನೆಗೆ ತೊಡಗಿದ್ದಾರೆ.
ಯಾದಗಿರಿ ಜಿಲ್ಲೆಯ 1440 ರೈತರ ಕೃಷಿ ಭೂಮಿ ವಕ್ಫ್ ಬೋರ್ಡ್‌ಗೆ ಸೇರಿದ್ದು, ಈ ಭೂಮಿಯಲ್ಲಿ ಜನರ ವಂಶಪಾರಂಪರಿಕವಾಗಿ ಉಳುಮೆ ಮಾಡುತ್ತಿದ್ದರು. ಪಹಣಿಯಲ್ಲಿನ ದಾಖಲೆಗಳಲ್ಲಿ 2018 ರವರೆಗೆ ಎಲ್ಲವೂ ರೈತರ ಹೆಸರಲ್ಲಿತ್ತು. ಕೊಂಗಡಿ ಗ್ರಾಮದ ರೈತ ಸುನೀಲ್ ಹವಾಲ್ದಾರ್ ತನ್ನ ತಂದೆ ಅಂಬಣ್ಣನ ಹೆಸರಿನಿಂದ ಭೂಮಿಯನ್ನು ತನ್ನ ಹೆಸರಿಗೆ ವರ್ಗಾವಣೆ ಮಾಡಿಕೊಂಡಿದ್ದರು, ಆದರೆ ಆಗ ಆ ಭೂಮಿಯನ್ನು ವಕ್ಫ್ ಎಂದೇನೂ ಗುರುತಿಸಲಾಗಿರಲಿಲ್ಲ.
ಕಳೆದ ಕೆಲವು ವರ್ಷಗಳ ನಂತರ, ರೈಲ್ವೆ ಇಲಾಖೆ ಹಳಿ ಕಾಮಗಾರಿಗಾಗಿ ಕೆಲವು ಜಮೀನುಗಳನ್ನು ಸ್ವಾಧೀನ ಪಡಿಸಿಕೊಂಡು ಪರಿಹಾರದ ಮೊತ್ತಕ್ಕಾಗಿ ರೈತರು ಪಹಣಿ ದಾಖಲೆಗಳು ಸಲ್ಲಿಸಿದಾಗ, ಪಹಣಿ ದಾಖಲೆಗಳ 11ನೇ ಕಾಲಂನಲ್ಲಿ “ವಕ್ಫ್” ಎಂದು ದಾಖಲಾಗಿರುವುದು ಬೆಳಕಿಗೆ ಬಂದಿದೆ.
ಜಮೀನು ಹತ್ತಿರ ಯಾವುದೇ ದರ್ಗಾ ಅಥವಾ ಮಸೀದಿಗಳು ಇಲ್ಲದಿದ್ದರೂ ಭೂಮಿಯನ್ನು ವಕ್ಫ್ ಬೋರ್ಡ್‌ಗೆ ವರ್ಗಾವಣೆ ಮಾಡಲಾಗಿದೆ ಎಂಬ ಪ್ರಶ್ನೆಯು ರೈತರಿಗೆ ತೀವ್ರ ಆತಂಕವನ್ನು ಉಂಟುಮಾಡಿದೆ.
ಈ ಪ್ರಕರಣ ಕೋರ್ಟ್‌ನಲ್ಲಿರುವುದರಿಂದ ಸುಮಾರು 200 ಕೋಟಿ ರೂಪಾಯಿ ಮೌಲ್ಯದ ಪರಿಹಾರ ಹಣವೂ ಇನ್ನೂ ನಿರಾಕೃತವಾಗಿದೆ. ಇದರಿಂದಾಗಿ ರೈತರು ಬೆಳೆ ಪರಿಹಾರ, ಬೆಳೆ ಸಾಲ ಇತ್ಯಾದಿಗಳನ್ನು ಪಡೆಯಲು ವಿಫಲರಾಗಿದ್ದು, ಜೀವನದ ಮೇಲೆ ಬೆಲೆಬಾಳುವ ಪರಿಣಾಮ ಬೀರಿದೆ.ಇದನ್ನು ಓದಿ –ರೈಲ್ವೆ ಇಲಾಖೆಯಲ್ಲಿ 60 ಸಾವಿರ ಹುದ್ದೆಗಳ ನೇಮಕಾತಿಗೆ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ – ವಿ. ಸೋಮಣ್ಣ
ಸರ್ಕಾರ ಮತ್ತು ವಕ್ಫ್ ಕಾಯ್ದೆ ವಿರುದ್ಧ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪಹಣಿಯಲ್ಲಿನ ವಕ್ಫ್ ಹೆಸರನ್ನು ತೆಗೆದುಹಾಕದಿದ್ದರೆ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಲಕ್ಷ್ಮೀಕಾಂತ್ ಸರ್ಕಾರ ವಿರುದ್ಧ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
More Stories
ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ
ಮಂಡ್ಯದಲ್ಲಿ ಭೀಕರ ಅಪಘಾತ: ಕಾರು-ಲಾರಿ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿ ಸಾವು
ನೆಲಮಂಗಲ ಟೀ ಬೇಗೂರು ಬಳಿ ಭೀಕರ ಸರಣಿ ಅಪಘಾತ: ಒಂದೇ ಕುಟುಂಬದ 6 ಮಂದಿ ಸಾವು