ಮೋದಿ ಅಧಿಕಾರಾವಧಿಗಿಂತಲೂ ಮುಂಚೆ ನಡೆಯುತ್ತಿದ್ದ ರೈತ ಪ್ರತಿಭಟನೆಗಳ ಸಂಖ್ಯೆಗೂ ಹಾಗೂ ಪ್ರಸ್ತುತ ಮೋದಿಯವರ ಅಧಿಕಾರಾವಧಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಸಂಖ್ಯೆಗೂ ವಿಪರೀತ ಪ್ರಮಾಣದ ವ್ಯತ್ಯಾಸವಾಗಿದೆ.
ಪ್ರಸ್ತುತ ಸರ್ಕಾರದ ಅವಧಿಯಲ್ಲಿ ರೈತ ಪ್ರತಿಭಟನೆಗಳ ಸಂಖ್ಯೆ ಒಟ್ಟು 700% ನಷ್ಟು ಜಾಸ್ತಿಯಾಗಿದೆ.
ಮೋದಿಯವರು 2014ರಲ್ಲಿ ಅಧಿಕಾರಕ್ಕೆ ಬರುವ ಮುಂಚೆ 2020ರ ವೇಳೆಗೆ ಈದೇಶದ ರೈತರ ಆದಾಯವನ್ನು ದ್ವಿಗುಣಗೊಳಿಸುವದಾಗಿ ಹೇಳಿದ್ದರು. ಆದರೆ ಆ ತರಹದ ಯಾವುದೇ ಬದಲಾವಣೆ ಇದುವರೆಗೂ ಸಂಭವಿಸಿಲ್ಲ. ಆದರೆ ಈಗ ಕೇಂದ್ರ ಸರ್ಕಾರ ಅಂಗೀಕರಿಸಿರುವ ಮೂರು ಕೃಷಿ ಮಸೂದೆಗಳು ವಿರೋಧ ಪಕ್ಷಗಳು ಆಡಳಿತ ಪಕ್ಷಗಳನ್ನು ತರಾಟೆಗೆ ತೆಗೆದುಕೊಳ್ಳುವಂತೆ ಮಾಡಿದೆ. ಹಾಗೆಯೇ ಬಿಜೆಪಿಯ ಮಿತ್ರಪಕ್ಷಗಳು ಸಹ ಈ ಕೃಷಿ ಮಸೂದೆಗಳನ್ನು ವಿರೋಧಿಸಿದೆ. ಅಲ್ಲದೇ ಮೊನ್ನೆ ತಾನೇ ಕೇಂದ್ರ ಸಚಿವೆಯೊಬ್ಬರು ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನೂ ನೀಡಿದರು.
ರಾಷ್ಟ್ರೀಯ ಅಪರಾಧ ದಾಖಲೆ ಸಂಸ್ಥೆ(NCRB)ಯ ಪ್ರಕಾರ 2014 ರಿಂದ 2016ರಲ್ಲಿ ದೇಶದಲ್ಲಿನ ರೈತರು ಮೋದಿ ಸರ್ಕಾರದ ವಿರುದ್ಧವಾಗಿ ನಡೆಸಿದ ಪ್ರತಿಭಟನೆಗಳು ಅಧಿಕವಾಗಿವೆ ಎಂದು ಹೇಳಿದೆ.
ಈ ಪ್ರತಿಭಟನೆಗಳ ಸಂಖ್ಯೆ 628 ರಿಂದ 4,837 ಕ್ಕೆ ಏರಿವೆ ಎಂದು ಸಂಸ್ಥೆ ದಾಖಲಿಸಿದೆ. ಪ್ರಸ್ತುತವಾಗಿ ಅಂಗೀಕಾರ ಮಾಡಿರುವ ಮಸೂದೆಗಳೂ ಸಹ ರೈತರಿಗೆ ಸಹಕಾರಿಯಾಗುತ್ತವೆ ಎಂದು ಮಬುವುದು ಕಷ್ಟಸಾಧ್ಯವೇ ಆಗಿದೆ.
ಆದರೆ ಈ ಮೊದಲಿನಂತೆ ರೈತ ಪ್ರತಿಭಟನೆಗಳನ್ನು ಕೇಂದ್ರ ಸರ್ಕಾರ ಗೌಣವಾಗಿ ಕಾಣುವಂತಿಲ್ಲ. ಮೊದಲೆಲ್ಲಾ ಚಿಕ್ಕ ಪುಟ್ಟ ಪ್ರಮಾಣದಲ್ಲಿ ನಡೆಯುತ್ತಿದ್ದ ಪ್ರತಿಭಟನೆಗಳು ಈಗ ರಾಷ್ಟ್ರಮಟ್ಟದಲ್ಲಿ ಸಂಘಟಿತವಾಗುತ್ತಿವೆ. 2017ರ ಮಾರ್ಚ್ ನಲ್ಲಿ ತಮಿಳುನಾಡಿನ ರೈತರು ದೆಹಲಿಯಲ್ಲಿ, ತಲೆಬರುಡೆಗಳ ಹಾರ ಧರಿಸುವಿಕೆ ಹಾಗೂ ಇಲಿಗಳನ್ನು ಬಾಯಿಯಲ್ಲಿ ಇಟ್ಟುಕೊಳ್ಳುವದರ ಮೂಲಕ ವಿಭಿನ್ನ ತಂತ್ರಗಳನ್ನು ಪ್ರತಿಭಟನಾಕಾರರು ಅನುಸರಿಸಿದರು.
ಅದೇ ವರ್ಷ ಮಧ್ಯಪ್ರದೇಶದಲ್ಲಿ ಪೋಲೀಸರು ಪ್ರತಿಭಟನೆ ಮಾಡುತ್ತಿದ್ದ ರೈತರ ಮೇಲೆ ಗೋಲಿಬಾರ್ ಮಾಡಿದರು. ಈ ಎರಡೂ ಘಟನೆಗಳು ರೈತರಲ್ಲಿದ್ದ ಕೇಂದ್ರದ ಬಗೆಗಿನ ವಿಶ್ವಾಸವನ್ನು ಗಣನೀಯ ಪ್ರಮಾಣದಲ್ಲಿ ಕಡುಮೆ ಮಾಡಿದವು. ಈ ಪ್ರತಿಭಟನೆಗಳ ವರದಿಗಳನ್ನು ಮಾಧ್ಯಮದವರು ಮುನ್ನೆಲೆಗೆ ತಂದು ಕೇಂದ್ರವನ್ನು ಪೇಚಿಗೆ ಸಿಲುಕಿಸಿದರು. ಇಡೀ ದೇಶದಲ್ಲೇ ಬಿಜೆಪಿ ವಿರೋಧಿ ಅಲೆ ಹೆಚ್ಚಾಯ್ತು. ಕೇಂದ್ರ ಸರ್ಕಾರ ವಿರುದ್ಧದ ಈ ಪ್ರತಿಭಟನೆಗಳ ಬೆನ್ನಲ್ಲೇ ದೇಶದ ಸುಮಾರು 70-80 ರೈತ ಸಂಘಟನೆಗಳು ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ರಚನೆ ಮಾಡಿದವು. ಈ ಸಮಿತಿ ಈಗ 20 ರಾಜ್ಯಗಳಿಂದ 250 ಸಂಸ್ಥೆಗಳನ್ನು ಪ್ರತಿನಿಧಿಸುತ್ತದೆ. ಬಿಜೆಪಿ ಹೊರತು ಪಡಿಸಿ ದೇಶದ 21 ರಾಜಕೀಯ ಪಕ್ಷಗಳ ಬೆಂಬಲವನ್ನು ಈ ಸಮಿತಿ ಗಳಿಸಿಕೊಂಡಿತು.
ಬಿಜೆಪಿ ಅಂಗೀಕಾರದ ಕೃಷಿ ಮಸೂದೆಗಳು ರೈತರಿಗೆ ಮಂಡಿ ಹೊರಗಡೆ ಸ್ವತಂತ್ರ ಮಾರಾಟದ ಆಯ್ಕೆಯನ್ನು ನೀಡುತ್ತವೆ. ದಲ್ಲಾಳಿಗಳ ಏಕಸ್ವಾಮ್ಯ ಮಯರಿಯುತ್ತವೆ. ಆದರೆ ರೈತರ ಅಭಿವೃದ್ಧಿ ಮಟ್ಟವನ್ನು ಹೆಚ್ಚಿಸುತ್ತವೆ ಎಂದು ಹೇಳಲಾಗುವದಿಲ್ಲ. ಹಾಗಾಗಿಯೇ ರೈತರು ಪ್ರತಿಭಟನೆ ಮಾಡುತ್ತಿರುವುದು. ಇನ್ನು ಮುಂದೆ ರೈತ ಪ್ರತಿಭಟನೆಯನ್ನು ಕೇಂದ್ರ ಅಲಕ್ಷಿಸುವಂತಿಲ್ಲ. ಏಕೆಂದರೆ ಇದು ಈಗ ರಾಷ್ಟ್ರೀಯ ಹೋರಾಟದಸ್ವರೂಪವನ್ನು ಪಡೆದುಕೊಂಡಿದೆ.
More Stories
ಸಂಸತ್ ಭವನದ ಬಳಿಯ ದಾರುಣ ಘಟನೆ: ವ್ಯಕ್ತಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನ
ಸಿದ್ದರಾಮಯ್ಯ ಹೆಸರನ್ನು ರಸ್ತೆಗೆ ಇಟ್ಟರೆ ತಪ್ಪೇನು? – ಸಿಎಂ ಪರ ನಿಂತುಕೊಂಡ ಪ್ರತಾಪ್ ಸಿಂಹ
ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನದ ಏರ್ಸ್ಟ್ರೈಕ್: 15 ಮಂದಿ ಮೃತ್ಯು