2020 ಕ್ಕೆ ಇಂದು ವಿದಾಯ ಹೇಳುವ ದಿನ. 2021ರ ವರ್ಷದ ಆಗಮನದ ಸಡಗರ-ಸಂಭ್ರಮದಿಂದ ಸ್ವಾಗತಿಸೋಣ ಅಂತಾ ಕಾದು ಕುಳಿತಿದ್ದ ಜನರ ಆಸೆಗೆ ಕೊರೋನಾ ಮಾಹಾಮಾರಿಗೆ ಹೆದರಿ ಸರ್ಕಾರ ಹಾಗೂ ಪೋಲಿಸರು ಕಠಿಣ ರೂಲ್ಸ್ ಜಾರಿಗೆ ತಣ್ಣೀರು ಎರಚಿದ್ದಾರೆ.
ಬೆಂಗಳೂರಿನಲ್ಲಿ ಮಧ್ಯಾಹ್ನ 12 ಗಂಟೆಯಿಂದ ನಿಷೇದಾಜ್ಙೆ :
ಬೆಂಗಳೂರು ಪೋಲಿಸ್ ಆಯುಕ್ತ ಕಮಲ್ ಪಂಥ್ ಹೊಸ ಆದೇಶ ಹೊಡಿಸಿ ನಗರದಾದ್ಯಂತ ಇಂದು ಮಧ್ಯಾಹ್ನ 12 ಗಂಟೆಯಿಂದಲೇ 144 ನಿಷೇದಾಜ್ಙೆ ಜಾರಿ ಮಾಡಲಾಗುವುದು ಎಂದು ಹೇಳಿದ್ದಾರೆ.
- ಬೆಂಗಳೂರಿನ ಜನ ಮಧ್ಯಾಹ್ನ ದಿಂದಲೇ ಮನೆಯಿಂದಲೇ ಹೊರಗೆ ಬರುವಂತಿಲ್ಲ.
- ಬಂದ್ ಸ್ಥಿತಿ ನಿರ್ಮಾಣವಾಗಲಿದೆ.
- ಡಿಜೆ ಪಾರ್ಟಿ , ಸಂಭ್ರಮದ ಪಾರ್ಟಿಗಳಿಲ್ಲ.
ಹೊರ ಜಿಲ್ಲೆಗಳಲ್ಲೂ ನಿಷೇಧ :
- ಕಾವೇರಿ ನದಿ ತೀರದ ಹಲವು ರೆಸಾರ್ಟ್ಗಳಲ್ಲಿ ಅನುಮತಿ ಪಡೆದು ಪ್ರತಿವರ್ಷ ಹೊಸ ವರ್ಷಾಚರಣೆ ನಡೆಯುತ್ತಿತ್ತು. ಆದರೆ ರೂಪಾಂತರ ಗೊಂಡು ರಾಜ್ಯಕ್ಕೆ ಪ್ರವೇಶ ನೀಡಿರುವ ಕೊರೊನಾ ವೈರಸ್ ನಿಯಂತ್ರಣದ ಉದ್ದೇಶದಿಂದ ಈ ವರ್ಷ ಸಂಭ್ರಮಾಚರಣೆಗೆ ರಾಜ್ಯದ ಬಹುತೇಕ ಪ್ರವಾಸಿ ತಾಣಗಳಿಗೆ ನಿಷೇಧ ಹೇರಲಾಗಿದೆ.
- ಮಂಡ್ಯ ಜಿಲ್ಲಾಡಳಿತ ಬ್ರೇಕ್ ಹಾಕಿದೆ. ಜಿಲ್ಲೆಯ ಮಳವಳ್ಳಿ ತಾಲೂಕಿನ ಮುತ್ತತ್ತಿ, ಶ್ರೀರಂಗಪಟ್ಟಣದ ಕೆಆರ್ಎಸ್ ಹಿನ್ನೀರು, ಕಾವೇರಿ ನದಿಯ ಬಲಮುರಿ ಎಡ ಮುರಿಗಳಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಇಂದು ಮತ್ತು ನಾಳೆ ಎರಡು ದಿನ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
- ರಾಮನಗರ ಜಿಲ್ಲಾಡಳಿತ ಹೊಸ ವರ್ಷದ ಆಚರಣೆಗೆ ಬ್ರೇಕ್ ಹಾಕಿ ಕೊರೊನಾ ಹೆಚ್ಚಾಗದಂತೆ ತಡೆಯಲು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿದೆ. ಡಿ 30 ರಿಂದಲೇ ಜನವರಿ 2 ರವರೆಗೂ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಜಿಲ್ಲೆಯ ಕಣ್ವ ಜಲಾಶಯ, ಮಂಚನಬೆಲೆ ಜಲಾಶಯ, ಸಾವನದುರ್ಗ, ಸಂಗಮ, ಮೇಕೆದಾಟು, ಚುಂಚಿ ಫಾಲ್ಸ್ನಲ್ಲಿ ನಿಷೇಧಾಜ್ಞೆ ಜಾರಿ ಮಾಡಿದೆ. ಜೊತೆಗೆ ಸಾಮೂಹಿಕ ಸಂಭ್ರಮಾಚರಣೆಗೆ ಬ್ರೇಕ್ ಹಾಕಿದೆ.
- ತುಮಕೂರು ಜಿಲ್ಲೆಯ ಪ್ರವಾಸಿ ತಾಣಗಳಲ್ಲೂ ಸಂಭ್ರಮಾಚರಣೆಗೆ ತುಮಕೂರು ಜಿಲ್ಲಾಡಳಿತ ತಡೆಯೊಡ್ಡಿದೆ. ಪ್ರಸಿದ್ಧ ಪ್ರವಾಸಿ ತಾಣ ದೇವರಾಯನ ದುರ್ಗ ಹಾಗೂ ನಾಮದಚಿಲುಮೆ ಪ್ರವೇಶಕ್ಕೆ ಇಂದು ಬೆಳಗ್ಗೆ 8 ಗಂಟೆಯಿಂದ ಜನವರಿ 2ರ ಬೆಳಗ್ಗೆ 8 ಗಂಟೆವರೆಗೆ ನಿಷೇಧ ಹೆರಲಾಗಿದೆ.
- ನಂದಿ ಬೆಟ್ಟದಲ್ಲಿ ಪಾರ್ಟಿ ಪ್ಲ್ಯಾನ್ ಮಾಡಿದ್ರೆ ಕ್ಯಾನ್ಸಲ್ ಮಾಡಿ! ಏಕೆಂದರೆ
ಚಿಕ್ಕಬಳ್ಳಾಪುರ ಜಿಲ್ಲಾಡಳಿತ ನಂದಿ ಬೆಟ್ಟ ಪ್ರವೇಶಕ್ಕೆ ತಡೆ ನೀಡಿ ನಿಷೇಧ ಹೇರಿದೆ. - ಬೆಂಗಳೂರಿಗರು ನ್ಯೂ ಇಯರ್ ಸೆಲಬ್ರೇಟ್ ಮಾಡಲು ಸಜ್ಜಾಗಿದ್ದ ಎಂಜಿ ರೋಡ್, ಬ್ರಿಗೇಡ್ ರಸ್ತೆಗಳಲ್ಲಿನ ಸಂಚಾರವನ್ನು ಮುಚ್ವಲಾಗುವುದು.
ಈಗಾಗಲೇ ಹೋಟೆಲ್, ರೆಸ್ಟೋರೆಂಟ್, ಡಾಬಾ, ರೆಸಾರ್ಟ್ಗಳ ಮಾಲೀಕರ ಸಭೆ ನಡೆಸಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
*/ಕರಾವಳಿಯ ಕಡಲ ತೀರಗಳಲ್ಲಿ ಸಂಭ್ರಮಾಚರಣೆಗೆ ನಿಷೇಧವಿದೆ
ಹೊಸ ವರ್ಷವನ್ನ ಕಡಲ ತೀರದಲ್ಲಿ ಆಚರಿಸೋರಿಗೇನೂ ಕಡಿಮೆ ಇಲ್ಲ. ಈ ಬಾರಿ ರಾಜ್ಯದ ಕರಾವಳಿಯಲ್ಲೂ ನಿಷೇಧಾಜ್ಞೆ ಜಾರಿಯಾಗಿದೆ, ಬಹುತೇಕ ಕಡಲ ತೀರಗಳಲ್ಲಿ ಸಂಭ್ರಮಾಚರಣೆಗೆ ಬ್ರೇಕ್ ಬಿದ್ದಿದೆ.
- ಉತ್ತರಕನ್ನಡ ಜಿಲ್ಲೆಯ ಮುರ್ಡೇಶ್ವರ, ಹೊನ್ನಾವರ, ಗೋಕರ್ಣ ಮತ್ತು ಕಾರವಾರ ಬೀಚ್ ಸೇರಿ ಕರಾವಳಿ ಭಾಗದ 5 ತಾಲೂಕುಗಳಲ್ಲಿ ಸೆಕ್ಷನ್ 144 ಜಾರಿಮಾಡಿದೆ.
- ಇಂದು ಸಂಜೆ ನಾಲ್ಕು ಗಂಟೆಯಿಂದ ಜನವರಿ 1 ರ ಬೆಳಗ್ಗೆ 6 ಗಂಟೆವರೆಗೆ ನಿಷೇಧಾಜ್ಞೆ ಜಾರಿಯಲ್ಲಿರುತ್ತೆ. ಇದೇ ರೀತಿ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ, ಸೋಮೇಶ್ವರ, ಮೊಗವೀರಪಟ್ಣ, ಪಣಂಬೂರು, ತಣ್ಣೀರುಬಾವಿ, ಸಸಿಹಿತ್ಲು ಮತ್ತು ಸುರತ್ಕಲ್ ಬೀಚ್ ಸೇರಿ ಎಲ್ಲಾ ಕಡಲ ತೀರದಲ್ಲಿ ಇಂದು ಮಧ್ಯಾಹ್ನ 12 ರಿಂದ ಜನವರಿ 2ರ ಮಧ್ಯಾಹ್ನ 12ಗಂಟೆವರೆಗೆ ನಿಷೇಧಾಜ್ಞೆ ವಿಧಿಸಲಾಗಿದೆ. ಉಡುಪಿ ಜಿಲ್ಲೆಯಲ್ಲೂ ಸಹ ಬೀಚ್ಗಳ ಜೊತೆಗೆ ಬಾರ್, ಕ್ಲಬ್, ಪಬ್, ಬೀಚ್ ರೆಸಾರ್ಟ್ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಸಂಭ್ರಮಾಚರಣೆ ನಡೆಸಬಾರದು ಅಂತಾ ರಾಜ್ಯ ಸರ್ಕಾರ ಆದೇಶಿಸಿದೆ.
- ಹೊಸವರ್ಷವನ್ನು ತಮ್ಮ ತಮ್ಮ ಮನೆಯಲ್ಲೇ ಹೊಸ ವರ್ಷ ಆಚರಣೆ ಮಾಡವುದು ಸೂಕ್ತ ಏಕೆಂದರೆ ಈ ವರ್ಷ ಇಲ್ಲದಿದ್ದರೆ ಮುಂದಿನ ವರ್ಷ ಆಚರಣೆ ಮಾಡಬಹುದು ಅಲ್ಲವೇ?
- ಮಳೆ ನಿಂತರೂ ಮರದ ಹನಿ ನಿಲ್ಲದು
- ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ: 6 ಜನರ ಮೃತದೇಹ ಪತ್ತೆ
- ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ: DYSP ವಿರುದ್ಧ ಗಂಭೀರ ಆರೋಪ
- ಐಶ್ವರ್ಯ ಗೌಡ ಪ್ರಕರಣ: ಸರ್ಕಾರದ ವಿರುದ್ಧ ಹೆಚ್ಡಿಕೆ ವಾಗ್ದಾಳಿ
- ಸಾರಿಗೆ ನೌಕರರಿಗೆ ಸರ್ಕಾರದ ಭರವಸೆ: 2 ಸಾವಿರ ಕೋಟಿ PF ನಿಧಿ ಬಿಡುಗಡೆ
More Stories
ಕಾನ್ಸ್ಟೇಬಲ್ ನೇಮಕಾತಿ ದೈಹಿಕ ಪರೀಕ್ಷೆ: ಓಟದ ವೇಳೆ ಬಿದ್ದ ಯುವಕನ ದುರ್ಮರಣ
ಸಂಕ್ರಾಂತಿ ಬಳಿಕ ಬಸ್ ಟಿಕೆಟ್ ದರ ಏರಿಕೆ ಸಾಧ್ಯತೆ
ಹೊಸ ವರ್ಷದ ಸಂಭ್ರಮ: KSBCLನಿಂದ ಒಂದೇ ದಿನ 308 ಕೋಟಿ ರೂ. ಮದ್ಯ ಮಾರಾಟ