ನಟ ಅಂಬರೀಶ್ ಹೆಸರಲ್ಲಿ ಏನೂ ಮಾಡಿಲ್ಲ ಎನ್ನುವ ಬೇಸರ ಅಭಿಮಾನಿಗಳಲ್ಲಿದೆ ಎಂದು ಸಂಸದೆ ಸುಮಲತಾ ಅಂಬರೀಶ್ ಬೇಸರ ವ್ಯಕ್ತಪಡಿಸಿದರು.
ಅಂಬರೀಶ್ ಅವರ ಮೂರನೇ ವರ್ಷದ ಪುಣ್ಯತಿಥಿ ದಿನವಾದ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಪತ್ನಿ ಸುಮಲತಾ ಅಂಬರೀಶ್ ನಿಧನರಾಗಿ 3 ವರ್ಷವಾಗಿದೆ. ಅವರ ಹೆಸರಲ್ಲಿ ಏನೂ ಮಾಡಿಲ್ಲ ಎನ್ನುವ ಬೇಸರ ಅಭಿಮಾನಿಗಳಲ್ಲಿದೆ. ಸ್ಮಾರಕ ಸೇರಿ ಎಲ್ಲೂ ಅಂಬರೀಶ್ ಅವರ ಹೆಸರು ಕೇಳಿಬಂದಿಲ್ಲ ಎಂದು ಅಭಿಮಾನಿಗಳ ಬೇಸರದ ಬಗ್ಗೆ ಹೇಳಿದರು.
ಅಂಬರೀಶ್ ಅವರು ಯಾವ ಪ್ರಶಸ್ತಿ, ಹೆಸರನ್ನು ಕೇಳಿ ಪಡೆದಿರಲಿಲ್ಲ. ನಾವೂ ಸಹ ಅಂಬರೀಶ್ ಅವರಿಗೆ ಪ್ರಶಸ್ತಿ ಕೊಡಿ, ಅದು ಮಾಡಿ, ಇದು ಮಾಡಿ ಎಂದು ಕೇಳಲ್ಲ. ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಅಂಬಿ ತುಂಬಾ ಒಳ್ಳೇಯ ಸ್ನೇಹಿತರಾಗಿದ್ದರು. ಈಗ ಅವರೇ ಸಿಎಂ ಆಗಿದ್ದಾರೆ ಏನದರೂ ಮಾಡುತ್ತಾರೆ ಎನ್ನು ವ ನಿರೀಕ್ಷೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಭಿಮಾನಿಗಳಿಗೆ ಈ ಬಗ್ಗೆ ನೋವಿದೆ. ಅದಕ್ಕೆ ಹೋರಾಟ ಮಾಡ್ತೀವಿ ಅಂತಿದ್ದಾರೆ. ಆದರೆ ಹೋರಾಟದ ಸಮಯ ಇದಲ್ಲ ಎಂದು ಹೇಳಿದ್ದೀನಿ. ಅಪ್ಪು ಅಗಲಿಕೆಯ ನೋವು ಎಲ್ಲರನ್ನೂ ಕಾಡಿದೆ. ಈ ಸಮಯದಲ್ಲಿ ಹೋರಾಟ ಮಾಡಬಾರದು ಎಂದಿದ್ದೇನೆ ಎಂದು ತಿಳಿಸಿದರು.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು