November 22, 2024

Newsnap Kannada

The World at your finger tips!

MP , water , politics

ಅಂತಂತ್ರಕ್ಕೆ ಕುಟುಂಬದ ತಂತ್ರ ; ಎಚ್‍ಡಿಕೆ ವಿರುದ್ಧ ಸುಮಲತಾ ವಾಗ್ದಾಳಿ

Spread the love

ಮಂಡ್ಯ: ರಾಜ್ಯದಲ್ಲಿ ಅತಂತ್ರ ಸ್ಥಿತಿ ಉಂಟಾದರೆ ಮತ್ತೇ ನಾನು ಮುಖ್ಯಮಂತ್ರಿ ಆಗಬಹುದು ಎಂದು ರಾಜ್ಯದ ಕುಟುಂಬವೊಂದು ಕಾಯುತ್ತಾ ಕುಳಿತಿದೆ ಎಂದು ಎಚ್.ಡಿ.ದೇವೇಗೌಡ ಕುಟುಂಬದ ವಿರುದ್ಧ ಸಂಸದೆ ಸುಮಲತಾ ವಾಗ್ದಾಳಿ ನಡೆಸಿದರು.

ಬಿಜೆಪಿಗೆ ಬಾಹ್ಯ ಬೆಂಬಲ ನೀಡಿರುವ ಸುಮಲತಾ ಅವರು ಬುಧವಾರ ಮಂಡ್ಯದಲ್ಲಿ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರ ಜತೆ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನಂತರ ಮಾತನಾಡಿದ ಅವರು, ಎಚ್.ಡಿ.ಕುಮಾರಸ್ವಾಮಿ ಅವರ ಹೆಸರು ಹೇಳದೆ, ತಮ್ಮ ಭಾಷಣದುದ್ದಕ್ಕೂ ವಾಗ್ದಾಳಿ ನಡೆಸಿದರು. ಚುನಾವಣೆಯಲ್ಲಿ ಒಮ್ಮೆಯೂ ಪೂರ್ಣ ಬಹುಮತದೊಂದಿಗೆ ಅವರು ಸಿಎಂ ಆಗಲಿಲ್ಲ. ಅತಂತ್ರ ಸ್ಥಿತಿಯನ್ನು ಉಪಯೋಗಿಸಿಕೊಂಡು ಅಧಿಕಾರ ಪಡೆದರು ಎಂದು ಟೀಕಿಸಿದರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳು ಜೆಡಿಎಸ್ ಪಾಲಾದವು. ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಮೂವರು ಸಚಿವರುಗಳು ಆದರೂ ಜಿಲ್ಲೆಗೆ ಅವರ ಕೊಡುಗೆ ಶೂನ್ಯ. ಮೈ ಶುಗರ್ ಫ್ಯಾಕ್ಟರಿ ಸಮಸ್ಯೆಯನ್ನು ನಾನು ಸಂಸದೆಯಾದ ನಂತರ ನನ್ನ ಪ್ರಯತ್ನದಿಂದ ಬಗೆಹರಿಸಲಾಯಿತು ಎಂದರು. ಯುಪಿ ಸಿಎಂ ಯೋಗಿ ಆದಿತ್ಯ ನಾಥ್ ಗೆ ಅದ್ದೂರಿ ಸ್ವಾಗತ- ಮಂಡ್ಯದಲ್ಲಿ ಯೋಗಿ ಹವಾ

ಮಂಡ್ಯದಲ್ಲಿ ಬದಲಾವಣೆ ಬೇಕಿದೆ. ಈ ಭಾಗದ ಜೆಡಿಎಸ್ ಶಾಸಕರು ಯಾವ ಕೆಲಸ ಮಾಡಿದ್ದಾರೆಂದು ತೋರಿಸಲಿ. ಯಾರೊ ಕನಸು ಕಾಣುತ್ತಿದ್ದಾರೆ. ಅತಂತ್ರ ಪರಿಸ್ಥಿತಿ ಬರಲಿ ಅಂತ. ಆ ಒಂದೇ ಕುಟುಂಬದ ಸುತ್ತ ಅಧಿಕಾರ ಸುತ್ತುತ್ತಿರಬೇಕು ಎಂದು ಬಯಸುತ್ತಿದ್ದಾರೆ ಕುಮಾರಸ್ವಾಮಿಗೆ ಟಾಂಗ್ ನೀಡಿದರು.

Yogi Adityanath road show Mandya

ಈ ಹಿಂದೆ ಉತ್ತರಪ್ರದೇಶ ಗೂಂಡಾ ರಾಜ್ಯ ಎಂದು ಕುಖ್ಯಾತಿಯಾಗಿತ್ತು. ಜನ ತಾವು ಸಂಪಾದಿಸಿದ ಹಣವನ್ನು ರೌಡಿಗಳಿಗೆ ಹಫ್ತಾ ನೀಡಬೇಕಿತ್ತು. ಯೋಗಿ ಸರ್ಕಾರ ಬಂದ ಮೇಲೆ ರೌಡಿಗಳು ಓಡಿ ಹೋಗಿದ್ದಾರೆ. ಉತ್ತರ ಪ್ರದೇಶದಲ್ಲಿ ಜನರು ಈಗ ನಿರ್ಭಯವಾಗಿ ಒಡಾಡುತ್ತಿದ್ದಾರೆ, ಕರ್ನಾಟಕದಲ್ಲಿಯೂ ಅಭಿವೃದ್ಧಿಪರ ಕೆಲಸವಾಗಬೇಕೆಂದರೆ ಬಿಜೆಪಿ ಗೆಲ್ಲಿಸಿ ಎಂದು ಹೇಳಿದರು.

Copyright © All rights reserved Newsnap | Newsever by AF themes.
error: Content is protected !!