December 23, 2024

Newsnap Kannada

The World at your finger tips!

WhatsApp Image 2022 12 02 at 7.12.34 AM

ಮದ್ದೂರಿನಲ್ಲಿ ಕೌಟುಂಬಿಕ ಕಲಹ- 3 ಮಕ್ಕಳಿಗೆ ವಿಷ ಕೊಟ್ಟು ತಾಯಿಯೂ ನೇಣಿಗೆ ಶರಣು

Spread the love

ಕೌಟುಂಬಿಕ ಕಲಹದಿಂದ ಬೇಸತ್ತ ಮಹಿಳೆಯೊಬ್ಬಳು ತನ್ನ 3 ಮಕ್ಕಳಿಗೆ ವಿಷ ಕೊಟ್ಟು ತಾನೂ ನೇಣಿಗೆ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮದ್ದೂರಿನಲ್ಲಿ ಜರುಗಿದೆ.

ಉಸ್ನಾ ಕೌಸರ್ (30)ತನ್ನ ಮೂರು ಮಕ್ಕಳಾದ ಹಾರಿಸ್(7) ಆಲಿಸಾ(4) ಹಾಗೂ ಪಾತಿಮಾ(2) ವಿಷ ಕೊಟ್ಟು ನಂತರ
ನೇಣು ಬಿಗಿದುಕೊಂಡಿದ್ದಾರೆ. 

ಮದ್ದೂರಿನ ಹೊಳೆಬೀದಿಯಲ್ಲಿ ನಿವಾಸಿ ಉಸ್ನಾ ಕೌಸರ್ , ಅಖಿಲ್ ಅಹಮದ್ ಎಂಬುವರನ್ನು ಮದುವೆ ಆಗಿದ್ದರು. ಪತಿ ಅಹಮದ್ ಚನ್ನಪಟ್ಟಣದಲ್ಲಿ ಕಾರು ಮೆಕಾನಿಕ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುರುಘಾಮಠದಲ್ಲಿದ್ದ 22 ಅನಾಥ ಮಕ್ಕಳು ನಾಪತ್ತೆ ? ಸ್ವಾಮೀಜಿ ಮೇಲೆ ಮತ್ತೊಂದು ದೂರು ?

ಪತ್ನಿ ಉಸ್ನಾ ಕೌಸರ್ ಕೂಡ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು ಎನ್ನಲಾಗಿದೆ. ಈ ದಂಪತಿ ಸಂಸಾರದಲ್ಲಿ ಕೆಲದಿನಗಳಿಂದ ಕೌಟುಂಬಿಕ ಕಲಹ ಆರಂಭವಾಗಿತ್ತು‌. ಮನನೊಂದಿದ್ದ ಉಸ್ನಾ ಕೌಸರ್ ಕೆಲಸ ಮುಗಿಸಿ ಮನೆಗೆ ಬಂದ ವೇಳೆ ಯಾರು ಇಲ್ಲದ್ದನ್ನು ಗಮನಿಸಿ ಸಾಯುವ ನಿರ್ಧಾರ ಮಾಡಿದ್ದಾರೆ.

ಮೊದಲು ಮಕ್ಕಳಿಗೆ ವಿಷ ನೀಡಿರುವ ಉಸ್ನಾ ಕೌಸನ್ ತನ್ನ ಕಣ್ಣೆದುರೇ ಮಕ್ಕಳು ಮೃತಪಟ್ಟ ಬಳಿಕ ತಾನು ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮದ್ದೂರು ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!