April 4, 2025

Newsnap Kannada

The World at your finger tips!

lake 1

ಸಾಲಭಾದೆ ತಾಳಲಾರದೆ ಕುಟುಂಬದ ಮೂವರು ವಿಸಿ ನಾಲೆಗೆ ಹಾರಿ ಆತ್ಮಹತ್ಯೆ

Spread the love

ಮಂಡ್ಯ: ಸಾಲಭಾದೆ ತಾಳಲಾರದೆ ಒಂದೇ ಕುಟುಂಬದ ಮೂವರು ವಿಸಿ ನಾಲೆಗೆ (VC Canal) ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶ್ರೀರಂಗಪಟ್ಟಣದಲ್ಲಿ ಸಂಭವಿಸಿದೆ.

ಮೃತರನ್ನು ಶ್ರೀರಂಗಪಟ್ಟಣದ ಗಂಜಾಂ ನಿವಾಸಿ ಮಾಸ್ತಪ್ಪ (65), ರತ್ನಮ್ಮ (45) ಮತ್ತು ಲಕ್ಷ್ಮಿ (18) ಎಂದು ಗುರುತಿಸಲಾಗಿದೆ. ಮೂವರು ವಿಸಿ ನಾಲೆಗೆ ಹಾರಿ ಪ್ರಾಣ ತ್ಯಜಿಸಿದ್ದಾರೆ.

ಮೃತ ಮಾಸ್ತಪ್ಪ ಅವರು ಆಟೋ ಚಾಲಕರಾಗಿದ್ದು, ಸಾಲಬಾಧೆ ತಾಳಲಾರದೆ ಪತ್ನಿ ಮತ್ತು ಪುತ್ರಿಯೊಂದಿಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.ಇದನ್ನು ಓದಿ –KPSC ಪರೀಕ್ಷೆಯಲ್ಲಿ ಕನ್ನಡಿಗರಿಗೆ ಅನ್ಯಾಯ: ಪ್ರತಿಭಟನೆಯಲ್ಲಿ ಕರವೇ ಕಾರ್ಯಕರ್ತರ ಬಂಧನ

ಈ ಘಟನೆ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ್ದು, ಸ್ಥಳೀಯ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!