December 23, 2024

Newsnap Kannada

The World at your finger tips!

WhatsApp Image 2022 06 18 at 5.39.36 PM

Failure in exam: 4 students commits suicide in state #thenewsnap #kannada #karnataka #education_board #2nd_puc #suicide #students_death #latest_news

ಪರೀಕ್ಷೆಯಲ್ಲಿ ಫೇಲ್ : ಮಂಡ್ಯ ಕೊಡಗು ಸೇರಿ ನಾಲ್ವರು ವಿದ್ಯಾರ್ಥಿಗಳು ಆತ್ಮಹತ್ಯೆ

Spread the love

ಪರೀಕ್ಷೆಯಲ್ಲಿ ಫೇಲ್​ ಮೂವರು ವಿದ್ಯಾರ್ಥಿಗಳು ಆತ್ಮಹತ್ಯೆ: ಫಸ್ಟ್​ ಕ್ಲಾಸ್​ನಲ್ಲಿ ಪಾಸ್​ ಆದರೂ ಮತ್ತೊಬ್ಬಾಕೆ ಸಾವು

ಇದನ್ನು ಓದಿ –ಮೈಸೂರು ರೈಲು ನಿಲ್ದಾಣ ವಿಸ್ತರಣೆ: 395. 73 ಕೋಟಿ ರು ಯೋಜನೆಗೆ ಪ್ರಧಾನಿ ಶಂಕು ಸ್ಥಾಪನೆ

ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ಅನುತೀರ್ಣ, ನಿರೀಕ್ಷಿಸಿದ ಫಲಿತಾಂಶ ಬರಲಿಲ್ಲ ಎಂಬ ಕಾರಣಕ್ಕೆ ಮನನೊಂದು ರಾಜ್ಯದ ವಿವಿಧೆಡೆ ನಾಲ್ವರು ವಿದ್ಯಾರ್ಥಿಗಳು ಅತ್ಮಹತ್ಯೆ ಮಾಡಿಕೊಂಡಿದ್ದಾರೆ

ಯಾರು ಆತ್ಮಹತ್ಯೆ ಮಾಡಿಕೊಂಡವರು ಯಾರು ? :

ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ‌ ಕಡ್ಲೆ ಗ್ರಾಮದ ಪ್ರಣಮ್ ಈಶ್ವರ್ ನಾಯ್ಕ(18), ಗದಗ ತಾಲೂಕಿನ ಹರ್ತಿ ಗ್ರಾಮದ ಪವಿತ್ರ ಲಿಂಗದಾಳ(18), ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕು ಮಹದೇವಪುರ ಗ್ರಾಮದ ಎಂ.ಜೆ.ಸ್ಪಂದನಾ(17) ಮತ್ತು ಕೊಡಗು ಜಿಲ್ಲೆಯ ಬಸವನಹಳ್ಳಿಯ ಸಂಧ್ಯಾ(18) ಮೃತ ದುರ್ದೈವಿಗಳು.

ಫೇಲ್​ ಆಗಿದ್ದಕ್ಕೆ ಮೂವರು ಆತ್ಮಹತ್ಯೆ:

1) ಕುಮಟಾ ತಾಲೂಕಿನ‌ ಎ.ವಿ ಬಾಳಿಗಾ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದ ಪ್ರಣಮ್ ಈಶ್ವರ್ ನಾಯ್ಕ, 4 ವಿಷಯಗಳಲ್ಲಿ ಅನುತ್ತೀರ್ಣಗೊಂಡ ಹಿನ್ನೆಲೆ ಜಿಗುಪ್ಸೆಗೊಂಡು ಮನೆಯಲ್ಲೇ ನೇಣಿಗೆ ಶರಣಾಗಿದ್ದಾನೆ. ಕುಮಟಾ‌ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

2) ಗದಗ ನಗರದ ಖಾಸಗಿ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಹರ್ತಿ ಗ್ರಾಮದ ಪವಿತ್ರ ಲಿಂಗದಾಳ, ಪರೀಕ್ಷೆಯಲ್ಲಿ ಅನುತ್ತೀರ್ಣವಾಗಿದ್ದಕ್ಕೆ ಮನನೊಂದು ಮನೆಯಲ್ಲೇ ಪವಿತ್ರಾ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಕೂಡಲೇ ಪೋಷಕರು ಗದಗ ಜಿಮ್ಸ್ ಆಸ್ಪತ್ರೆಗೆ ಕರೆದೊಯ್ದರಾದರೂ ಮಾರ್ಗಮಧ್ಯೆ ಕೊನೆಯುಸಿಳೆದರು.

3) ಮಂಡ್ಯದ ಸ್ಯಾಂಥೋಂ ಕಾಲೇಜಿನಲ್ಲಿ ದ್ವಿತೀಯ ಪಿಯು ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ಶ್ರೀರಂಗಪಟ್ಟಣ ತಾಲೂಕಿನ ಸ್ಪಂದನಾ, ಮೂರು ವಿಷಯದಲ್ಲಿ ಅನುತೀರ್ಣಗೊಂಡಿದ್ದಕ್ಕೆ ಜಿಗುಪ್ಸೆಯಿಂದ ಮನೆಯಲ್ಲೇ ನೇಣಿಗೆ ಶರಣಾಗಿದ್ದಾಳೆ.

ನಿರೀಕ್ಷಿತ ಅಂಕ ಬರದಿದ್ದಕ್ಕೆ ಆತ್ಮಹತ್ಯೆ:

ಪಿಯುಸಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದೆ. ನಿರೀಕ್ಷಿತ ಫಲಿತಾಂಶ ಬರಲಿಲ್ಲ ಎಂದು ಬೇಸರಗೊಂಡ ಕೊಡಗು ಜಿಲ್ಲೆ ಕುಶಾಲನಗರ ತಾಲೂಕಿನ ಹೆರೂರು ನಿವಾಸಿ, ನಿವೃತ್ತ ಯೋಧ ಸುಭಾಷ್ ಅವರ ಪುತ್ರಿ ಸಂಧ್ಯಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ

ಈಕೆ ವಿವೇಕಾನಂದ ಕಾಲೇಜಿನಲ್ಲಿ ಓದುತ್ತಿದ್ದಳು. ದ್ವಿತೀಯ ಪಿಯುಸಿಯಲ್ಲಿ ಶೇ.77ಅಂಕ ಬಂದಿತ್ತು. ಶೇ.90ಕ್ಕೂ ಹೆಚ್ಚು ಅಂಕ ಬರುವ ನಿರೀಕ್ಷೆಯಲ್ಲಿ ಇದ್ದಳಂತೆ.

Copyright © All rights reserved Newsnap | Newsever by AF themes.
error: Content is protected !!