ಕರ್ನಾಟಕ ರಾಜ್ಯಕ್ಕೆ 1200 ಮೆಟ್ರಿಕ್ ಟನ್ ಆಕ್ಸಿಜನ್ ನೀಡುವಂತೆ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ಅಸ್ತು ಎಂದಿದೆ.
ಕರ್ನಾಟಕಕ್ಕೆ ನೀಡಬೇಕಾದ ಆಮ್ಲಜನಕದ ಬಗ್ಗೆ ಹೈಕೋರ್ಟ್ ಸರಿಯಾಗಿ ವಿಶ್ಲೇಷಣೆ ಮಾಡಿದೆ. ಈ ಆದೇಶವನ್ನು ನಾವು ಬದಲಿಸಿ ಕರ್ನಾಟಕದ ಜನತೆಗೆ ತೊಂದರೆ ಉಂಟುಮಾಡಲು ಬಯಸಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ.
ಕೇಂದ್ರ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ನಿನ್ನೆ ದೆಹಲಿಯ ಆಕ್ಸಿಜನ್ ಕೊರತೆಯ ಬಗ್ಗೆ ವಾದ ನಡೆಸುವಾಗ ಸಾಲಿಟರ್ ಜನರಲ್ ಕರ್ನಾಟಕದ ಹೈಕೋರ್ಟ್ ಆದೇಶದ ಬಗ್ಗೆ ಪ್ರಶ್ನಿಸಿದ್ದರು. ಈ ಬಗ್ಗೆ ನಿನ್ನೆಯೂ ನ್ಯಾ. ಚಂದ್ರಚೂಡ್ ಪೀಠದ ಮುಂದೆ ಮೆಹ್ತಾ ಪ್ರಸ್ತಾಪಿಸಿದ್ದರು.
ಆ ವೇಳೆ ನ್ಯಾ.ಚಂದ್ರಚೂಡ್ ರವರು ಎನ್.ವಿ ರಮಣ್ ಅವರ ಪೀಠದ ಮುಂದೆ ಪ್ರಸ್ಥಾಪಿಸಿ ಅಂತ ಹೇಳಿದ್ದರು. ಆದರೆ ಮತ್ತೆ ಇವತ್ತು ಸಾಲಿಟರ್ ಜರ್ನಲ್ ಮೆಹ್ತಾ ಕರ್ನಾಟಕದ ಹೈಕೋರ್ಟ್ ಆದೇಶ ಪ್ರಶ್ನಿಸಿದ್ದಾಗ, ನ್ಯಾಯಪೀಠ ಹೈಕೋರ್ಟ್ ಆದೇಶವನ್ನು ಎತ್ತಿಹಿಡಿದಿದೆ.
ಸದ್ಯ 865 ರಿಂದ 965 ಮೆಟ್ರಿಕ್ ಟನ್ ಆಕ್ಸಿಜನ್ ಅನ್ನು ಕೇಂದ್ರ ಸರ್ಕಾರ ರಾಜ್ಯಕ್ಕೆ ಪೂರೈಕೆ ಮಾಡುತ್ತಿದೆ.
More Stories
ಆಯೋಧ್ಯೆ ರಾಮಮಂದಿರಕ್ಕೆ ಸ್ಫೋಟದ ಬೆದರಿಕೆ: ಆರ್ಡಿಎಕ್ಸ್ ಬಳಸಿ ಧ್ವಂಸಗೊಳಿಸುವ ಎಚ್ಚರಿಕೆ
ವಿಧಾನಸಭೆ ಉಪಚುನಾವಣೆ: ನ. 13 ರಂದು ರಾಜ್ಯ ಸರ್ಕಾರದಿಂದ ವೇತನ ಸಹಿತ ರಜೆ ಘೋಷಣೆ
ಮೈಸೂರಿನ ಸರ್ಕಾರಿ ಶಾಲೆಯ ಜಾಗ ವಕ್ಫ್ ಆಸ್ತಿಯಾಯ್ತು – ಸಿಎಂಗೆ ಪ್ರತಾಪ್ ಸಿಂಹ ಟಾಂಗ್