January 10, 2025

Newsnap Kannada

The World at your finger tips!

pedler

ಅಪಘಾತ ಪ್ರಕರಣಕ್ಕೆ ಸ್ಫೋಟಕ ತಿರುವು – ಕೇರಳ ಸುಂದರಿಯರಿಗೆ ಡ್ರಗ್ ಪೆಡ್ಲರ್‌ಗಳ ನಂಟು?

Spread the love

ಕೇರಳದ ಕೊಚ್ಚಿಯಲ್ಲಿ ನವೆಂಬರ್ 1 ರಂದು ಅಪಘಾತದಲ್ಲಿ ಮೃತಪಟ್ಟ ಇಬ್ಬರು ಮಾಡೆಲ್‍ಗಳಿಗೆ ಡ್ರಗ್ ಪೆಡ್ಲರ್‌ಗಳ ನಂಟಿನ ಬಗ್ಗೆ ಸಂಶಯ ಎದುರಾಗಿದೆ

ಮೃತಪಟ್ಟ ಮಾಡೆಲ್‍ಗಳು ಪಾರ್ಟಿಯಲ್ಲಿ ಭಾಗವಹಿಸಿದ್ದ ಅತಿಥಿಗಳನ್ನು ವಿಚಾರಣೆ ನಡೆಸಲಾಗುತ್ತಿದೆ. ಈ ವೇಳೆ ಡ್ರಗ್ಸ್ ಲಿಂಕ್ ಬಗ್ಗೆ ಅನುಮಾನ ಬಂದಿದೆ.

ನವೆಂಬರ್ 1 ರಂದು ಫೋರ್ಟ್ ಕೊಚ್ಚಿಯ ನಂ.18 ಎಂಬ ಐಷಾರಾಮಿ ಹೋಟೆಲ್‍ನಲ್ಲಿ ಪಾರ್ಟಿ ಆಯೋಜಿಸಲಾಗಿತ್ತು.

ಈ ಪಾರ್ಟಿಯಲ್ಲಿ ಮಿಸ್ ಕೇರಳ 2019 ವಿಜೇತೆ ಆನ್ಸಿ ಕಬೀರ್, ರನ್ನರ್ ಅಪ್ ಅಂಜನಾ ಶಾಜನ್ ಭಾಗಿಯಾಗಿದ್ದರು. ಪಾರ್ಟಿ ಬಳಿಕ ಇಬ್ಬರು ರಸ್ತೆ ಅಪಘತಾದಲ್ಲಿ ಸಾವನ್ನಪ್ಪಿದ್ದರು.

ಪ್ರಕರಣಕ್ಕೆ ಸಂಬಂಧಿಸಿ ನಂ.18 ಹೋಟೆಲ್‍ನ ಮಾಲೀಕ ರಾಯ್ ವಯಲಾತ್ ಹಾಗೂ ಹೋಟೆಲ್‍ನ ಐವರು ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ತನಿಖೆ ವೇಳೆ ಮಾಡೆಲ್‍ಗಳು ಹೋಗುತ್ತಿದ್ದ ಕಾರನ್ನು ಆಡಿ ಕಾರೊಂದು ಹಿಂಬಾಲಿಸುತ್ತಿದ್ದ ಸಿಸಿಟಿವಿ ದೃಶ್ಯಗಳು ಪೊಲೀಸರಿಗೆ ದೊರೆತ್ತಿತ್ತು. ಕಾರನ್ನು ಚಲಾಯಿಸುತ್ತಿದ್ದ ಸೈಜು ತಂಕಚನ್‍ಗೆ ಕೊಚ್ಚಿಯಲ್ಲಿ ಡ್ರಗ್ ಪೆಡ್ಲರ್ ಸಂಪರ್ಕವಿದೆ.

ಈತ ಬೆಂಗಳೂರಿನಿಂದ ಕೊಚ್ಚಿಗೆ ಡ್ರಗ್ಸ್ ಮಾರಾಟ ಮಾಡುವ ಗುಂಪಿನಲ್ಲಿ ಕೆಲಸ ಮಾಡುತ್ತಿದ್ದ ಎಂಬ ಆರೋಪ ಬಂದಿದೆ.

ಮೂರು ವಾರ ಕಳೆದರೂ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚಲು ಸಾಧ್ಯವಾಗದ ಕಾರಣ ಇದೀಗ ಅಪರಾಧ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಬಿಜಿ ಜಾರ್ಜ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.

Copyright © All rights reserved Newsnap | Newsever by AF themes.
error: Content is protected !!