ರಾಸಲೀಲೆ ಪ್ರಕರಣದ ತನಿಖೆಯಲ್ಲಿ ಕ್ಷಣ ಕ್ಷಣಕ್ಕೂ ಹೊಸ ತಿರುವು ಹಾಗೂ ಮಾಹಿತಿಗಳನ್ನು ಎಸ್ ಐಟಿ ತಂಡ ಕಲೆ ಹಾಕುತ್ತಿದೆ.
ಎಸ್‍ಐಟಿ ಅಧಿಕಾರಿಗಳಿಗೆ ಈ ವೇಳೆ ಅಚ್ಚರಿಯ ಮಾಹಿತಿ ಲಭ್ಯವಾಗಿದೆ. ಆರೋಪಿಗಳು ಸಿಡಿ ಇಟ್ಟುಕೊಂಡು ಬೆದರಿಕೆ ಹಾಕಿ ಲಕ್ಷ, ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ವಿಜಯಪುರದಲ್ಲಿ ಸಿಡಿ ಅಪ್ ಲೋಡ್ ಮಾಡಿದ ವ್ಯಕ್ತಿಯು ಬರೋಬ್ಬರಿ 45 ಲಕ್ಷ ರುಗಳ ಫಾರ್ಚೂನರ್ ಕಾರು ಖರೀದಿಗೆ ಈ ಸಿಡಿಕೋರ ಯತ್ನಿಸಿದ್ದನು. ಈ ಸಿಡಿಕೋರನಿಗೆ ಆ ವ್ಯಕ್ತಿ 45 ಲಕ್ಷ ರು ನಗದು ನೀಡಿದ್ದ.
ಇದೇ ಹಣದಲ್ಲಿ ವ್ಯಕ್ತಿ ಫಾರ್ಚೂನರ್ ಕಾರು ಖರೀದಿಗೆ ಯತ್ನಿಸಿದ್ದ, ಆದರೆ ನಗದು ವ್ಯವಹಾರ ಮಾಡುವುದಿಲ್ಲ ಎಂದು ಶೋ ರೂಂ ಸಿಬ್ಬಂದಿ ಹೇಳಿದ್ದಕ್ಕೆ ಕಾರ್ ಖರೀದಿಸಲು ಸಾಧ್ಯವಾಗಿರಲಿಲ್ಲ ಎನ್ನಲಾಗಿದೆ.
ಮಾಜಿ ಸಚಿವರ ಸಿಡಿ ತಂದುಕೊಟ್ಟವರಿಗೆ ಲಕ್ಷ ಲಕ್ಷ ರೂಪಾಯಿ ದುಡ್ಡು ನೀಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ, ಸಿಡಿ ತೆಗೆದುಕೊಂಡು ಹೋಗಿ ಕೊಟ್ಟ ಐದಾರು ಮಂದಿಗೆ ಲಕ್ಷಗಟ್ಟಲೇ ಹಣ ಸಂದಾಯವಾಗಿದೆ.
ಆದರೆ ಈ ಹಣ ಕೊಟ್ಟಿದ್ದು ಯಾರು? ಆ ಹಣದ ಮೂಲ ಎಲ್ಲಿಯದು ಎಂಬುದನ್ನು ಸಹ ಎಸ್‍ಐಟಿ ಮಾಹಿತಿ ಕಲೆ ಹಾಕುತ್ತಿದೆ.
- ರಾಜ್ಯದಲ್ಲಿ ಮುಂದಿನ 5 ದಿನ ಮಳೆಯ ಮುನ್ಸೂಚನೆ
- 10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
- ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )
- ಹೊರರಾಜ್ಯದ ಯುವತಿಯರನ್ನ ಕರೆಸಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: ಆರೋಪಿ ಬಂಧನ
- ಬೆಂಗಳೂರಿನಲ್ಲಿ ಮಹಿಳೆಗೆ 30 ಲಕ್ಷ ರೂ. ವಂಚನೆ!
More Stories
10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ
ವಿರಾಟ್ ಕೊಹ್ಲಿಗೆ ಬಿಬಿಎಂಪಿ ನೋಟಿಸ್