ಕಾಫಿ ಬೆಳೆಗಾರರಿಂದ ಕಾಫಿ ಪಡೆದುಕೊಂಡು 100 ಕೋಟಿ ರು ಬಾಕಿ ಪಾವತಿ ಮಾಡದೇ ವಂಚನೆಯ ಆರೋಪ ಎದುರಿಸುತ್ತಿರುವ ಸಿದ್ದಾರ್ಥ ಹೆಗ್ಡೆ ಪತ್ನಿ, ಮಾಜಿ ಮುಖ್ಯ ಮಂತ್ರಿ ಎಸ್ ಎಂ ಕೃಷ್ಣ ಪುತ್ರಿ,ಮಂಡ್ಯದ ಮಗಳು ಮಾಳವಿಕಾ ಸೇರಿದಂತೆ 8 ಮಂದಿಗೆ ಈಗ ಬಂಧನ ಭೀತಿ ಎದುರಾಗಿದೆ.
300 ಕ್ಕೂ ಅಧಿಕ ಕಾಫಿ ಬೆಳೆಗಾರರಿಗೆ ಸುಮಾರು 100 ಕೋಟಿ ರು ಸಿದ್ದಾರ್ಥ ಕಂಪನಿಯು ಬಾಕಿ ಕೊಡಬೇಕಾಗಿತ್ತು. ಈ ವೇಳೆ ಕಂಪನಿಯ ಪರವಾಗಿ ಅನೇಕ ಬೆಳೆಗಾರರಿಗೆ ನೀಡಲಾಗಿದ್ದ ಚೆಕ್ ಕೂಡ ಬೌನ್ಸ್ ಆಗಿವೆ.
ಕಂಪನಿಯ ಪರವಾಗಿ ದಿನಾಂಕ ಅಂತ್ಯ ಗೊಂಡಿರುವ ಚೆಕ್ ಪಡೆದುಕೊಂಡ ಹೊಸ ಚೆಕ್ ಗಳನ್ನೂ ಕೂಡ ನೀಡಲು ಮಾಳವಿಕಾ ಮತ್ತು ಕಂಪನಿಯ ನಿರ್ದೇಶಕರು ನಿರಾಕರಿಸಿದರು.
ಕಂಪನಿ ಧೋರಣೆ ಖಂಡಿಸಿ ಕಾಫಿ ಬೆಳೆಗಾರ ಕೆ ನಂದೀಶ್ ಸೇರಿದಂತೆ 12ಕ್ಕೂ ಹೆಚ್ಚು ಮಂದಿ ಚಿಕ್ಕಮಂಗಳೂರಿನ ಜೆಎಂಎಫ್ಸಿ ನ್ಯಾಯಾಲಯಕ್ಕೆ ಮೊರೆ ಹೋಗಿ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿದ್ದರು.
ನ್ಯಾಯಾಲಯವು ಈಗ ಮಾಳವಿಕ ಸೇರಿದಂತೆ 8 ಜನರ ವಿರುದ್ದ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ. ಇದರಿಂದಾಗಿ ಮಾಳವಿಕಾಗೆ ಬಂಧನ ಭೀತಿ ಎದುರಾಗಿದೆ.
- ನಿಮ್ಮ ಮನದ ಭಾವನೆಗಳನ್ನು ಅರ್ಥಮಾಡಿಕೊಳ್ಳುವವರೇ ಇಲ್ಲದಾಗ …?
- ಎಳ್ಳು ಬೆಲ್ಲ ತಿಂದು ಅರೋಗ್ಯ ಹೆಚ್ಚಿಸಿಕೊಳ್ಳಿ
- ನಾನು ದೇವರಲ್ಲ, ನಾನೂ ಸಹ ತಪ್ಪು ಮಾಡಿದ್ದೇನೆ: ನಮೋ
- ಬಿಜೆಪಿಯಿಂದ ಪ್ರತಾಪ್ ಸಿಂಹ ಉಚ್ಛಾಟನೆಗೆ ಆಗ್ರಹ: ಪಕ್ಷ ತೊರೆಯಲಿದ್ದಾರಾ ಮಾಜಿ ಸಂಸದ?
- ಶಾಸಕ ಡಾ. ಚಂದ್ರು ಲಮಾಣಿ ಅವರ ಕಾರು ಚಾಲಕ ಆತ್ಮಹತ್ಯೆ
More Stories
ನಿಮ್ಮ ಮನದ ಭಾವನೆಗಳನ್ನು ಅರ್ಥಮಾಡಿಕೊಳ್ಳುವವರೇ ಇಲ್ಲದಾಗ …?
ಎಳ್ಳು ಬೆಲ್ಲ ತಿಂದು ಅರೋಗ್ಯ ಹೆಚ್ಚಿಸಿಕೊಳ್ಳಿ
ನಾನು ದೇವರಲ್ಲ, ನಾನೂ ಸಹ ತಪ್ಪು ಮಾಡಿದ್ದೇನೆ: ನಮೋ