ವಿಜಯನಗರ ನ್ಯೂಸ್ : ದಿನಾಂಕ 27-11-2021 ರೋಟರಿ ಕ್ಲಬ್ ಹೊಸಪೇಟೆ ಇವರ ಆಶ್ರಯದಲ್ಲಿ ಮಹಿಳೆಯರಿಂದ ರೋಟರಿ ಕ್ಲಬ್ ಆಪ್ ಹಂಪೆ ಪಲ್ಸ್ (Rotary Club of Hampi Pearls) ಸಂಸ್ಥೆಯನ್ನು ಉದ್ಘಾಟಿಸಲಾಯಿತು.
ಹೊಸಪೇಟೆ ಸ್ಟೇಷನ್ ರೋಟರಿ ಕ್ಲಬ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮಗಳನ್ನು ರೋಟರಿ ಕ್ಲಬ್ ಗವರ್ನರ್ ಮತ್ತು ಹೆಸರಾಂತ ಸಿವಿಲ್ ಗುತ್ತಿಗೆದಾರರಾದ ಶ್ರೀ ತಿರುಪತಿ ನಾಯ್ಡು ಮತ್ತು ತುಮಕೂರಿನ ರೋಟರಿ ಕ್ಲಬ್ ಮುಖ್ಯಸ್ಥರು ಮತ್ತು ಕರ್ನಾಟಕದ ಪ್ರಪ್ರಥಮ ಲೇಡಿ ಗೌರ್ನರ್ ಶ್ರೀಮತಿ ಆಶಾ ಪ್ರಸನ್ನ ಕುಮಾರ್ , ರೋಟರಿ ಕ್ಲಬ್ ಆಪ್ ಹಂಪೆ ಪರ್ಸ್ ಕ್ಲಬ್ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀಮತಿ ಕಮಲಾ ಗುಮಾಸ್ತೆ , ಕಾರ್ಯದರ್ಶಿ ಯಾಗಿ ಆಯ್ಕೆಯಾದ ಶ್ರೀಮತಿ ರಚನಾ ಏಕತಾರೆ, ಉಪಾಧ್ಯಕ್ಷ ರಾದ ಶ್ರೀಮತಿ ನಿರ್ಮಲಾ ನಾಯ್ಡ್ ಮತ್ತು ವಿಶೇಷ ಅತಿಥಿಯಾಗಿ ಆಗಮಿಸಿದ್ದ ಬೆಂಗಳೂರಿನ ಶಾಂಡಲ್ಯ ಇನ್ಸ್ಟಿಟ್ಯೂಟ್ ಸಂಸ್ಥೆಯ ಮುಖ್ಯಸ್ಥರಾದ ಶ್ರೀ ಜಿ.ಎನ್ ಶೇಷಾದ್ರಿ ಇವರುಗಳು ದೀಪವನ್ನು ಹಚ್ಚುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಹಾಗೂ ರೋಟರಿ ಕ್ಲಬ್ ಸದಸ್ಯರಾದ ಶ್ರೀ ಆರ್ ವಿ ಗುಮಾಸ್ತೆ, ಕಾರ್ಖಾನೆಯ ಹಿರಿಯ ಅಧಿಕಾರಿಗಳು ಮತ್ತು ಕುಟುಂಬದ ಸದಸ್ಯರು , ಕೊಪ್ಪಳ ರೋಟರಿ ಕ್ಲಬ್ ಸದಸ್ಯರಾದ ಡಾ.ಕೆ ಜಿ ಕುಲಕರ್ಣಿ ಮತ್ತು ಸದಸ್ಯರು, ಲೇಡೀಸ್ ಕ್ಲಬ್ ಸದಸ್ಯರು, ಇನರ್ ವಿಲ್ ಕ್ಲಬ್ ಸದಸ್ಯರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ನೂತನವಾಗಿ ಆಯ್ಕೆಯಾದ ಸದಸ್ಯರಿಂದ ಶ್ರೀ ತಿರುಪತಿ ನಾಯ್ಡು ಇವರಿಂದ ರೋಟರಿ ಕ್ಲಬ್ ಪ್ರಮಾಣ ವಚನ ಭೋದನೆಯನ್ನು ನಡೆಸಲಾಯಿತು.
ವಿಜಯನಗರ ನೂತನ ಜಿಲ್ಲೆಯ ಹೊಸಪೇಟೆ ನಗರದಲ್ಲಿ ಪ್ರಾರಂಭವಾದ ನೂತನ ರೋಟರಿ ಕ್ಲಬ್ ಆಪ್ ಹಂಪೆ ಪಲ್ಸ್ ಕ್ಲಬ್ ಉದ್ಘಾಟನೆಯಾಗಿ ಸಮಾಜದ ಸಾಮಾಜಿಕ, ಆರೋಗ್ಯ,ಪರಿಸರಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಕೈಜೋಡಿಸಿ ಸಮಾಜದ ಸಮುದಾಯದ, ಶಾಲಾ ಕಾಲೇಜುಗಳ ಸಮಾಜಿಕ ಉನ್ನತಿಯನ್ನು ಮುಖ್ಯ ಉದ್ದೇಶವನ್ನಿಟ್ಟುಕೂಂಡು ಉದ್ಘಾಟನೆ ಮಾಡಲಾಯಿತು.
ಪ್ರಥಮ ಕಾರ್ಯಕ್ರಮವಾಗಿ ಶ್ರೀಯುತ ಜಿ.ಎನ್ ಶೇಷಾದ್ರಿ ಬೆಂಗಳೂರು ಇವರಿಂದ ವ್ಯಕ್ತಿತ್ವ ವಿಕಸನ ವಿಷಯವಾಗಿ ವಿಶೇಷ ಉಪನ್ಯಾಸ ನೀಡಿದರು. ವೈಯಕ್ತಿಕವಾಗಿ , ಸಾಮಾಜಿಕವಾಗಿ ಮತ್ತು ಸಮೂಹದಲ್ಲಿ ಯಾವುದೇ ಆತಂಕವನ್ನು ಪಡದೆ ಗುರಿಯನ್ನು ಸಾಧಿಸಲು ಮಾಡುವ ಉಪಯುಕ್ತ ಅಂಶಗಳನ್ನು ತಿಳಿಸುವುದರ ಮೂಲಕ ಸಂತೋಷದ ಕಡೆ ಜೀವನವನ್ನು ಸಾಹಿಸುವ ಮಾರ್ಗವನ್ನು ತಮ್ಮ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲ ಸದಸ್ಯರು ಮತ್ತು ಸಂಘ ಸಂಸ್ಥೆಗಳ ಸದಸ್ಯರುಗಳಿಗೆ ತಿಳಿಸಿದರು.
ಕಾರ್ಯಕ್ರಮ ವಂದನಾರ್ಪನೆ ಮೂಲಕ ಮುಕ್ತಾಯವಾಯಿತು.
ವರದಿ : ಮುರುಳೀಧರ್ ನಾಡಿಗೇರ್
ಹೊಸಪೇಟೆ
- ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭಾರತ ತಂಡದ ಟಿ20 ನಾಯಕ ಸೂರ್ಯಕುಮಾರ್ ಯಾದವ್ ಭೇಟಿ
- ಉಪಚುನಾವಣಾ ಫಲಿತಾಂಶಕ್ಕೂ ಮುನ್ನ ಸಿಪಿ ಯೋಗೇಶ್ವರ್ ವಿರುದ್ಧ ಮಗನ ದೂರು: ನಕಲಿ ಸಹಿ ಆರೋಪ
- ಸಚಿವ ಸ್ಥಾನ ನನ್ನ ಹಕ್ಕು, ಬೇಡಿಕೆಯಲ್ಲ: ನಿಖರ ಹೇಳಿಕೆ ನೀಡಿದ ‘ಕೈ’ ಶಾಸಕ ನರೇಂದ್ರ ಸ್ವಾಮಿ
- ರಾಜ್ಯಗಳಾದ್ಯಂತ `ED’ ದಾಳಿ: ಲಾಟರಿ ಕಿಂಗ್ ಮಾರ್ಟಿನ್ನ 12.41 ಕೋಟಿ ನಗದು ಜಪ್ತಿ
- ರಾಜ್ಯದಲ್ಲಿ ಶೀಘ್ರವೇ 14 ಲಕ್ಷ ಬಿಪಿಎಲ್ ಕಾರ್ಡ್ಗಳು ರದ್ದು: ಸರ್ಕಾರದಿಂದ ಸ್ಪಷ್ಟನೆ
More Stories
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭಾರತ ತಂಡದ ಟಿ20 ನಾಯಕ ಸೂರ್ಯಕುಮಾರ್ ಯಾದವ್ ಭೇಟಿ
ಉಪಚುನಾವಣಾ ಫಲಿತಾಂಶಕ್ಕೂ ಮುನ್ನ ಸಿಪಿ ಯೋಗೇಶ್ವರ್ ವಿರುದ್ಧ ಮಗನ ದೂರು: ನಕಲಿ ಸಹಿ ಆರೋಪ
ಸಚಿವ ಸ್ಥಾನ ನನ್ನ ಹಕ್ಕು, ಬೇಡಿಕೆಯಲ್ಲ: ನಿಖರ ಹೇಳಿಕೆ ನೀಡಿದ ‘ಕೈ’ ಶಾಸಕ ನರೇಂದ್ರ ಸ್ವಾಮಿ