ಮೂವರು ಪತ್ನಿಯರನ್ನು ಬಿಟ್ಟು ಬಂಢ ಗಂಡನೊಬ್ಬ ನಾಲ್ಕನೇ ಮದುವೆಗೆ ಸಿದ್ಧನಾಗಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಯೂಸುಫ್ ಹೈದರ್ ಎಂಬಾತ ಮೂವರು ಪತ್ನಿಯರಿಗೆ ವಂಚನೆ ಮಾಡಿ ನಾಲ್ಕನೇ ಮದುವೆಗೆ ರೆಡಿಯಾಗಿದ್ದಾನೆ.
ಎನ್.ಆರ್ ಪುರ ತಾಲೂಕಿನ ಬಾಳೆಹೊನ್ನೂರು ನಿವಾಸಿ ಹೈದರ್. ಮಂತ್ರವಾದಿ ಎಂದು ಮಂಕುಬೂದಿ ಎರಚಿ ಅಮಾಯಕರಿಗೆ ವಂಚನೆ ಮಾಡಿದ್ದಾನೆ.
ಈಗ ಮೋಸ ಹೋದ ಪತ್ನಿಯರು ಈತನ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.
ಸಕಲೇಶಪುರ, ಮೂಡಿಗೆರೆ, ಆಲ್ದೂರಿನ ಮಹಿಳೆಯರಿಗೆ ಮೋಸ ಮಾಡಿರುವ ಹೈದರ್, ಸದ್ಯ ಕಳಸ ಪಟ್ಟಣದ ಮಹಿಳೆ ಜೊತೆ ಎಸ್ಕೇಪ್ ಆಗಿದ್ದಾನೆ.
ಮಂತ್ರವಾದಿ ಹೆಸರಿನಲ್ಲಿ ಅನೇಕ ಮಹಿಳೆಯರಿಗೆ ವಂಚನೆ ಮಾಡಿರುವ ಈತನನ್ನು ಬಂಧಿಸುವಂತೆ ಮೂವರು ಪತ್ನಿಯರು ಚಿಕ್ಕಮಗಳೂರು ಎಸ್ಪಿ ಗೆ ದೂರು ನೀಡಿದ್ದಾರೆ.
More Stories
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
ಕ್ಷಣಾರ್ಧದಲ್ಲಿ 33 ಲಕ್ಷ ಕಳ್ಳತನ: ಓರ್ವ ಆರೋಪಿ ಬಂಧನ
ಚಾಮರಾಜನಗರದಲ್ಲಿ ಖಾಸಗಿ ಬಸ್ ಪಲ್ಟಿ: ಓರ್ವ ಸಾವು, 30ಕ್ಕೂ ಹೆಚ್ಚು ಜನರಿಗೆ ಗಾಯ