April 8, 2025

Newsnap Kannada

The World at your finger tips!

elephant attack

ದೇವಸ್ಥಾನದಲ್ಲಿ ಆನೆ ಅಬ್ಬರ: ಮೂವರ ದುರ್ಮರಣ

Spread the love

ತಿರುವನಂತಪುರಂ: ಕೇರಳದ ಕೊಯಿಲಾಂಡಿ ಬಳಿಯ ಮನಕುಲಂಗರ ಭಗವತಿ ದೇವಸ್ಥಾನದಲ್ಲಿ ಉತ್ಸವದ ಸಂದರ್ಭದಲ್ಲಿ ಆನೆ ಅಬ್ಬರಿಸಿದ ಪರಿಣಾಮ ಮೂವರು ವೃದ್ಧರು ಸಾವನ್ನಪ್ಪಿದ್ದಾರೆ.

ಗುರುವಾರ ಸಂಜೆ ದೇವಾಲಯದ ಉತ್ಸವಕ್ಕಾಗಿ ಆನೆಗಳನ್ನು ತರಲಾಗಿತ್ತು. ಈ ವೇಳೆ ಪಟಾಕಿ ಸಿಡಿಸಿದಾಗ ಎರಡು ಆನೆಗಳು ಭಯಗೊಂಡು ಅಸ್ತವ್ಯಸ್ತವಾಗಿ ಓಡಿದ್ದು, ಅದರ ಪರಿಣಾಮವಾಗಿ ಕೆಲವರ ಮೇಲೆ ಕಾಲ್ತುಳಿತ ಸಂಭವಿಸಿದೆ. ಇದರಿಂದ ಮೂವರು ವೃದ್ಧರು ದುರ್ಘಟನೆಗೆ ಒಳಗಾಗಿದ್ದಾರೆ.

ಆನೆಗಳು ನಿಯಂತ್ರಣ ತಪ್ಪಿ ದೇವಸ್ಥಾನದ ಕಟ್ಟಡಕ್ಕೆ ಡಿಕ್ಕಿ ಹೊಡೆದ ಪರಿಣಾಮ ಗೋಡೆಯೊಂದು ಕುಸಿದು ಬಿದ್ದಿದೆ. ಇದರಿಂದ ಕೆಲವರು ಅವಶೇಷಗಳಡಿ ಸಿಕ್ಕಿಬಿದ್ದಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಗೋಡೆ ಕುಸಿದು ಇಬ್ಬರು ಮಹಿಳೆಯರು ಮತ್ತು ಒಬ್ಬ ಪುರುಷ ಸಾವನ್ನಪ್ಪಿದ್ದಾರೆ.

ಸುಮಾರು 20 ಜನರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಈ ದುರ್ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!