December 22, 2024

Newsnap Kannada

The World at your finger tips!

elephant attack

ಹನೂರಿನ ನಾಗಮಲೆಯಲ್ಲಿ ಆನೆ ದಾಳಿ: ಓರ್ವ ಸಾವು

Spread the love

ಹನೂರು : ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಚೆಕ್ ಪೋಸ್ಟ್ ನಲ್ಲಿ ನಡೆದ ಆನೆ ದಾಳಿಯಲ್ಲಿ ಬೆಂಗಳೂರಿನ ಓರ್ವ ಸಾವನ್ನಪ್ಪಿದ್ದಾನೆ.

ಬೆಂಗಳೂರಿನ ಗೋವಿಂದರಾಜು ಮತ್ತು ಗೆಳೆಯ ಲೋಕೇಶ್ ಮಹದೇಶ್ವರ ಬೆಟ್ಟದಲ್ಲಿ ಮಹದೇಶ್ವರನ ಪೂಜೆಯನ್ನು ಮುಗಿಸಿಕೊಂಡು ತಡರಾತ್ರಿ 11:30 ರಲ್ಲಿ ಇಂಡಿಗನತ್ತ ಹತ್ತಿರವಿರುವ ಅರಣ್ಯ ಇಲಾಖೆ ಚೆಕ್ ಪೋಸ್ಟ್ ದಾಟಿ ನಾಗಮಲೆಗೆ ತೆರಳುತ್ತಿತ್ತ ಸಂದರ್ಭದಲ್ಲಿ ಕಾಡಾನೆಯೊಂದು ಇಬ್ಬರ ಮೇಲೆ ಏಕಾಏಕಿ ದಾಳಿ ನಡೆಸಿದೆ.

ಗೋವಿಂದರಾಜು ಎಂಬ ವ್ಯಕ್ತಿಗೆ ಆನೆ ತುಳಿದು ಸ್ಥಳದಲ್ಲೇ ಸಾವನಪ್ಪಿದ್ದಾನೆ. ಮತ್ತೊಬ್ಬ ಲೋಕೇಶ್ ಎಂಬ ವ್ಯಕ್ತಿ ಅಲ್ಲಿಂದ ಪರಾರಿಯಾಗಿದ್ದಾನೆ.

ಅರಣ್ಯ ವಲಯದೊಳಗೆ ರಾತ್ರಿ ಸಮಯದಲ್ಲಿ ದೇವರ ದರ್ಶನಕ್ಕೆ ಹೋಗುವವರನ್ನು ನಿಷೇದ ಮಾಡಬೇಕು ಎಂಬುದು ಹಲವು ಜನರ ಅಭಿಪ್ರಾಯವಾಗಿದೆ.ಲಡಾಖ್ ನಲ್ಲಿ ಸೇನಾ ವಾಹನ ಕಂದಕಕ್ಕೆ ಬಿದ್ದು ಹುತಾತ್ಮರಾದ 9 ಯೋಧರು- ಪ್ರಧಾನಿ ಸಂತಾಪ

ಸಂಬಂಧ ಪಟ್ಟ ಇಲಾಖೆ ಸೂಕ್ತ ಕ್ರಮ ವಹಿಸಬೇಕು. ಆನೆ ತುಳಿತಕ್ಕೆ ಒಳಗಾಗಿ ಸಾವನಪ್ಪಿರುವ ಸುದ್ದಿ ತಿಳಿದು ಮಲೆ ಮಹದೇಶ್ವರ ಬೆಟ್ಟದ ಪೊಲೀಸ್ ಠಾಣೆಯ ಪೊಲೀಸರು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ವರದಿ :- ನಾಗೇಂದ್ರ ಪ್ರಸಾದ್

Copyright © All rights reserved Newsnap | Newsever by AF themes.
error: Content is protected !!