ದೆಹಲಿಯ ರಾಜ್ಯಸಭೆಯಲ್ಲಿ ರೈತರ ಸಬಲೀಕರಣ ಮತ್ತು ಸಂರಕ್ಷಣೆ, ರೈತರ ವ್ಯಾಪರ ಮತ್ತು ವಾಣಿಜ್ಯ ಕುರಿತು ಕೃಷಿ ಮಸೂದೆಗಳನ್ನು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಸೋಮವಾರ ಮಂಡನೆ ಮಾಡಿದರು.
ಇದೇ ವೇಳೆ ಪ್ರತಿಪಕ್ಷಗಳು ಕೇಂದ್ರ ಸರ್ಕಾರದ ಎರಡು ಮಸೂದೆಗಳನ್ನು ವಿರೋಧಿಸಿ, ಆಯ್ಕೆ ಸಮಿತಿಗೆ ನೀಡಲು ಹೇಳಿದವು.
ಕೇಂದ್ರ ಸರ್ಕಾರವು ಪರಿಚಯಿಸಿರುವ ಕೃಷಿ ಮಸೂದೆಗಳು ‘ಪ್ರಜಾಪ್ರಭುತ್ವದ ಕಗ್ಗೊಲೆ’ ಎಂದು ವಿರೋಧ ಪಕ್ಷಗಳ ಹೇಳಿದರೆ, ಅಂಗೀಕಾರದ ಸಮಯದಲ್ಲಿ ಗೊಂದಲ ಸೃಷ್ಠಿಸಿದ ವಿರೋಧ ಪಕ್ಷಗಳ ನಡೆ ‘ಪ್ರಜಾಪ್ರಭುತ್ವಕ್ಕೆ’ ವಿರುದ್ಧವಾದದ್ದು ಎಂದು ರಕ್ಷಣಾ ಸಚಿವರು ಹೇಳಿದ್ದಾರೆ.
ಆದರೆ ಇಂದು ರಾಜ್ಯಸಭೆಯಲ್ಲಿ ಉಪಸಭಾಪತಿ ಹರಿವಂಶ್ ಮಸೂದೆಗಳನ್ನು ಅಂಗೀಕರಿಸುವಂತೆ ಹೇಳಿದಾಗ ತೃಣಮೂಲ ಕಾಂಗ್ರೆಸ್ ನ ಡರೆಕ್ ಒಬ್ರಿಯನ್ ಆಕ್ರೋಶಗೊಂಡು ಉಪಸಭಾಪತಿ ಎದುರಿಗೆ ರೂಲ್ಸ್ ಪುಸ್ತಕವನ್ನು ಹರಿದು ಹಾಕಿದ್ದಾರೆ. ಇದನ್ನು ಅನುಚಿತ ವರ್ತನೆ ಎಂದು ಹೇಳಿ ಅಂಗೀಕಾರಗೊಂಡ ಮಸೂದೆಗಳನ್ನು ವಿರೋಧಿಸಿ ಗೊಂದಲ ಸೃಷ್ಠಿಸಿದ ಕಾರಣಕ್ಕೆ ಎಂಟು ಜನ ಸಂಸದರನ್ನು ರಾಜ್ಯ ಸಭಾ ಸಭಾಪತಿಯವರು ಒಂದು ವಾರಗಳ ಕಾಲ ಅಮಾನತು ಮಾಡಿದ್ದಾರೆ. ಆದರೆ ಅಮಾನತುಗೊಂಡ ಸಂಸದರು ಹೊರಹೋಗಲು ನಿರಾಕರಿಸಿದರು. ಹೀಗೆ ಕೆಲಹೊತ್ತು ರಾಜ್ಯ ಸಭೆ ಗೊಂದಲದ ಗೂಡಾಗಿತ್ತು.
More Stories
ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ
ವಿರಾಟ್ ಕೊಹ್ಲಿಗೆ ಬಿಬಿಎಂಪಿ ನೋಟಿಸ್
ಮಂಡ್ಯ: 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ