January 14, 2026

Newsnap Kannada

The World at your finger tips!

ED , raid , psi

ಮಾಜಿ ಸಚಿವ ನಾಗೇಂದ್ರ, ದದ್ದಲ್ ನಿವಾಸಗಳ ಮೇಲೆ ED ದಾಳಿ : ಬಂಧನ ಸಾಧ್ಯತೆ

Spread the love
  • ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ಆರೋಪ ಕೇಸ್
  • 10ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಿರುವ ಇಡಿ ಅಧಿಕಾರಿಗಳು
  • ನಕಲಿ ಕಂಪನಿ, ನಕಲಿ ಅಕೌಂಟ್ ಮೂಲಕ ಹಣ ಟ್ರಾನ್ಸ್​ಫರ್ ಆರೋಪ

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ಪ್ರಕರಣದ ಸಂಬಂಧ ಬೆಂಗಳೂರು, ರಾಯಚೂರು ಸೇರಿದಂತೆ 10ಕ್ಕೂ ಹೆಚ್ಚು ಸ್ಥಳಗಳಲ್ಲಿ ಇಡಿ ದಾಳಿ ಮಾಡಿದ್ದಾರೆ.

ಪ್ರಕರಣದ ಎಲ್ಲಾ ಆರೋಪಿಗಳ ಮನೆ ಮೇಲೆ ಬುಧವಾರ ಬೆಳಗ್ಗೆ 6 ಗಂಟೆಯಿಂದ ದಾಳಿ ಆರಂಭಿಸಿದ್ದಾರೆ.

ಬೆಂಗಳೂರು, ಬಳ್ಳಾರಿ, ರಾಯಚೂರು ಮತ್ತು ಹಾವೇರಿಯಲ್ಲಿ ಇಡಿ ಅಧಿಕಾರಿಗಳು ಮಾಜಿ ಸಚಿವ ನಾಗೇಂದ್ರ, ಬಸನಗೌಡ ದದ್ದಲ್, ಪದ್ಮನಾಭ, ಪರಶುರಾಮ ಮತ್ತು ಬ್ಯಾಂಕ್ ಅಧಿಕಾರಿಗಳ‌ ಮನೆ ಮೇಲೆ ದಾಳಿ ಮಾಡಿದ್ದಾರೆ.

187 ಕೋಟಿಯ ಬಹುದೊಡ್ಡ ಹಗರಣದಲ್ಲಿ 94 ಕೋಟಿ ಹೈದ್ರಾಬಾದ್ ಗೆ ಟ್ರಾನ್ಸಫರ್ ಆಗಿದೆ. ನಕಲಿ ಕಂಪನಿಗಳಿಗೆ, ನಕಲಿ ಅಕೌಂಟ್ ಮೂಲಕ ಟ್ರಾನ್ಸಫರ್ ಮಾಡಲಾಗಿದೆ ಎನ್ನಲಾಗಿದೆ.

ಲೆಕ್ಕವಿಲ್ಲದೇ ಅಕ್ರಮ ಹಣ ವರ್ಗಾವಣೆ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ದಾಳಿ

ರಾಯಚೂರು ನಗರದ ಆರ್ ಆರ್ ಕಾಲೋನಿಯಲ್ಲಿರುವ ಬಸನಗೌಡ ದದ್ದಲ್ ಮನೆ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಐವರು ಅಧಿಕಾರಿಗಳ ತಂಡದಿಂದ ಮನೆ ಮೇಲೆ‌ ದಾಳಿ ನಡೆದಿದೆ.

ಈ ವೇಳೆ ಅಧಿಕಾರಿಗಳು ಮನೆ ಸದಸ್ಯರ ಮೊಬೈಲ್ ಸೀಜ್ ಮಾಡಿದ್ದಾರೆ. ಒಬ್ಬರು ಮಹಿಳಾ ಅಧಿಕಾರಿ ಸೇರಿದಂತೆ ಒಟ್ಟು ಮೂವರು ಅಧಿಕಾರಿಗಳಿಂದ ರೇಡ್ ನಡೆದಿದೆ.

ಇದನ್ನು ಓದಿ – ರಾಮನಗರ ಪ್ರತಿಭಟನೆ :ನಿಖಿಲ್ ಹಾಗೂ ಪೊಲೀಸರ ಮಧ್ಯೆ ಮಾತಿನ ಚಕುಮುಕಿ

ಮಾಜಿ ಸಚಿವ ನಾಗೇಂದ್ರರ ಬೆಂಗಳೂರಿನ ಡಾಲಸ್ ಕಾಲೋನಿ ಅಪಾರ್ಟ್ ಮೆಂಟ್ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

error: Content is protected !!