ಮುಸ್ಲಿಂ ವಿಸ್ತಾರವಾದ, ಪ್ರತ್ಯೇಕವಾದ ಹಿನ್ನೆಲೆ ಆರ್ಥಿಕ ಬಹಿಷ್ಕಾರ, ಮುಸ್ಲಿಮರ ಜೊತೆಗೆ ವ್ಯಾಪಾರ ವಹಿವಾಟು ಮಾಡಬಾರದು ಎಂದು ನಿಧ೯ರಿಸಲಾಗಿದೆ ಹೀಗಾಗಿ ಜಾತ್ರೆಯಲ್ಲಿ ಮುಸ್ಲಿಂ ಅಂಗಡಿಗಳು ನಡೆಯಬಾರದು ಎಂದು ಶ್ರೀರಾಮ ಸೇನೆ ಬೆಂಬಲ ವ್ಯಕ್ತಪಡಿಸಲಿದೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದರು.
ಬೆಳಗಾವಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಜಾತ್ರೆಯಲ್ಲಿ ಮುಸ್ಲಿಂ ಅಂಗಡಿ ನಡೆಯಬಾರದು ಅನ್ನೋದಕ್ಕೆ ಶ್ರೀರಾಮ ಸೇನೆಯ ಬೆಂಬಲವಿದೆ.
ಮುಸ್ಲಿಂರ ಮಾನಸಿಕತೆ, ಕ್ರೌರ್ಯ ಮೊದಲಿನಿಂದಲೂ ಬಂದಿದೆ. ಇದನ್ನ ನಿಲ್ಲಿಸುವವರೆಗೂ ರೀತಿ ಪ್ರಕ್ರಿಯೆ ನಡೆಯುತ್ತಿರುತ್ತವೆ. ಮುಂದಿನ ದಿನಗಳಲ್ಲಿ ಮುಸ್ಲಿಂರ ಜೊತೆಗೆ ವ್ಯಾಪಾರ ವಹಿವಾಟು ನಡೆಸಬಾರದು ಅನ್ನೋ ಬಹಿಷ್ಕಾರ ಮಾಡಲಾಗುತ್ತದೆ. ಅದು ಗೋಹತ್ಯೆ, ಗೋಮಾಂಸ ತಿನ್ನುವುದನ್ನು ನಿಲ್ಲಿಸುವವರೆಗೂ ಈ ಬಹಿಷ್ಕಾರ ಮುಂದುವರೆಯಲಿದೆ ಎಂದರು.
ನಿತ್ಯ ಬೆಳಗ್ಗೆ ಐದು ಗಂಟೆಗೆ ಆಜಾನ್ ಕೂಗುವುದನ್ನು ನಿಲ್ಲಿಸಬೇಕು. ಇಡೀ ರಾಜ್ಯಾದ್ಯಂತ ಆರ್ಥಿಕ ಬಹಿಷ್ಕಾರ ಹಾಕಲು ಶ್ರೀರಾಮ ಸೇನೆ ಆಂದೋಲನವಾಗಿದೆ. ಆಕ್ಷನ್‍ಗೆ ರಿಯಾಕ್ಷನ್ ನಾವು ಕೊಡುತ್ತಿದ್ದೇವೆ. ಬಹುಸಂಖ್ಯಾತ ಹಿಂದೂ ಸಮಾಜದ ಗೌರವ ಕಾಣುವ ಪ್ರಕ್ರಿಯೆ ಆಗಬೇಕು. ನಮ್ಮ ದೇವರನ್ನು ಒಪ್ಪದ ನೀವು ನಮ್ಮ ಜಾತ್ರೆಯಲ್ಲಿ ಯಾಕೆ ಬರುತ್ತೀರಿ. ಈ ದೇಶದ ಕಾನೂನು, ಸಂವಿಧಾನ, ನಿಯಮ ಪಾಲಿಸುವವರೆಗೂ ಬಹಿಷ್ಕಾರ ಮುಂದುವರೆಸುತ್ತೇವೆ ಎಂದು ಆಗ್ರಹಿಸಿದರು.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು