ಮಾದಕಲೋಕದಲ್ಲಿ ದೋಸ್ತಿಯಾಗಿರುವ
ನಶೆ ರಾಣಿಯರು ಜೈಲಿನಲ್ಲಿ ಕಿತ್ತಾಟ ಜೋರಾಗಿದೆ ಅಂತೆ. ಒಬ್ಬಳಿಗೆ ರಾತ್ರಿ ಎಲ್ಲಾ ಓದೋ ಹುಚ್ಚು. ಮತ್ತೊಬ್ಬಳಿಗೆ ಬೆಳಗಿನ ಜಾವ ಯೋಗ ಮಾಡುವ ಅಭ್ಯಾಸ. ಇದೇ ಸಂಗತಿ ಇಬ್ಬರ ನಡುವೆ ಕಿತ್ತಾಟಕ್ಕೂ ನಾಂದಿಯಾಗಿದೆ.
ಮಾದಕ ಲೋಕದ ನಂಟು ಹೊಂದಿರುವ ಆರೋಪದ ಮೇಲೆ ಸಿಸಿಬಿ ಅತಿಥಿಗಳಾಗಿರುವ ಸ್ಯಾಂಡಲ್ ವುಡ್ ನಟಿ ಮಣಿಯರಾದ ರಾಗಿಣಿ ಮತ್ತು ಸಂಜನಾ ಜೈಲಿನಲ್ಲಿ ಪರಸ್ಪರ ಕಿತ್ತಾಟದಲ್ಲಿ ತೊಡಗಿದ್ದಾರಂತೆ. ಇವರ ಜಗಳಕ್ಕೆ ಪೊಲೀಸ್ ಸಿಬ್ಬಂದಿ ಬೇಸತ್ತು ಹೋಗಿದ್ದು, ಇವರು ಜಾಮೀನು ತೆಗೆದುಕೊಂಡು ಹೊರನಡೆದರೆ ಸಾಕಪ್ಪ ಎನ್ನುವ ಮಟ್ಟಿಗೆ ರೋಸಿ ಹೋಗಿದ್ದಾರಂತೆ.
ಪ್ರತಿನಿತ್ಯ ರಾಗಿಣಿ ಮತ್ತು ಸಂಜನಾ ಯಾವುದಾದರೂ ಒಂದು ವಿಷಯಕ್ಕೆ ಕಿತ್ತಾಡುತ್ತಲೇ ಇರುತ್ತಾರಂತೆ. ಕುಂತರು, ನಿಂತರು ಇವರ ಜಗಳ ಸಾಗುತ್ತಲೇ ಇರುತ್ತದೆಯಂತೆ. ಇದರಿಂದ ಜೈಲಿನ ಇತರ ಕೈದಿಗಳಿಗೂ ತೊಂದರೆ ಉಂಟಾಗುತ್ತಿದೆ. ಯಾರ ಮಾತಿಗೂ ಕಿವಿಗೊಡುತ್ತಿಲ್ಲ ಎನ್ನಲಾಗಿದೆ.
ಇವರ ಜಗಳದಿಂದ ಕೈದಿಗಳಿಗೆ ಮತ್ತು ಸಿಬ್ಬಂದಿಗೆ ದೊಡ್ಡ ಸಮಸ್ಯೆಯೇ ಉಂಟಾಗಿದ್ದು, ಇಡಿ ತನ್ನ ತನಿಖೆಯನ್ನು ಚುರುಕುಗೊಳಿಸಿದ ನಂತರ ಇವರ ಜಗಳ, ರಂಪಾಟ ಇನ್ನೂ ಹೆಚ್ಚಾಗಿದೆ. ಇಬ್ಬರೂ ಜಗಳವಾಡಿ ನಂತರ ಅಳಲು ಪ್ರಾರಂಭಿಸುತ್ತಿದ್ದಾರೆ ಎಂದು ಸಿಬ್ಬಂದಿಗಳು ತಮ್ಮ ಗೋಳು ತೋಡಿಕೊಂಡಿದ್ದಾರಂತೆ.
ರಾಗಿಣಿ ರಾತ್ರಿ ಬಹು ಹೊತ್ತಿನ ತನಕ ರೂಂ ಲೈಟ್ ಹಾಕಿಕೊಂಡು ಪುಸ್ತಕ ಓದುವಾಗ ಸಂಜಯಾ ನಂಗೆ ನಿದ್ದೆ ಬರೋಲ್ಲಾ ಲೈಟ್ ಆರಿಸುವಂತಾಳೆ.
ಬೆಳಗಿನ ಜಾವ ಸಂಜನಾ ಯೋಗ ಮಾಡುವಾಗ ಲೈಟ್ ಹಾಕಿಕೊಂಡಾಗ ರಾಗಿಣಿ ಲೈಟ್ ಆಫ್ ಮಾಡಿ ಅಂತ ಜಗಳ ಮಾಡುತ್ತಾರೆ. ಇದು ಕೋಳಿ ಜಗಳ ಅಲ್ಲ. ಎರಡು ಬಾಬ್ ಕಟ್ ಗಳ ಜಗಳ. ಜಾಮೀನು ಸಿಗುವ ತನಕ ಜಗಳ ಇರುತ್ತೆ.
More Stories
ಮಂಡ್ಯ ದೀಪಾಲಂಕಾರಕ್ಕೆ ಸಚಿವ ಚಲುವರಾಯಸ್ವಾಮಿ ಚಾಲನೆ
4 ಲಕ್ಷ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಕಂದಾಯ ನಿರೀಕ್ಷಕ – ಬಂಧನ
ಸಮ್ಮೇಳನಾಧ್ಯಕ್ಷ ನಾಡೋಜ ಗೊ.ರು.ಚನ್ನಬಸಪ್ಪರವರಿಗೆ ಅದ್ಧೂರಿ ಸ್ವಾಗತ