ಹಾಸ್ಯ ಕಲಾವಿದೆ ಭಾರತಿ ಸಿಂಗ್ ನಿವಾಸದ ಮೇಲೆ ಎನ್‍ಸಿಬಿ ಅಧಿಕಾರಿಗಳು ಶನಿವಾರ ದಾಳಿ ಮಾಡಿದರು.
ಹೆಚ್ಚಿನ ವಿಚಾರಣೆ ಹಿನ್ನೆಲೆ ಭಾರತಿ ಸಿಂಗ್ ಮತ್ತು ಪತಿ ಹರ್ಷ್ ಲಿಂಬಾಚಿಯಾನನ್ನು ವಶಕ್ಕೆ ಪಡೆದು ಎನ್‍ಸಿಬಿ ಕಚೇರಿಗೆ ಕರೆತರಲಾಗಿದೆ.
ದಾಳಿ ವೇಳೆ ಭಾರತಿ ಸಿಂಗ್ ನಿವಾಸದಲ್ಲಿ ಕಡಿಮೆ ಪ್ರಮಾಣದಲ್ಲಿ ಗಾಂಜಾ ಸಿಕ್ಕಿದೆ ಎನ್ನಲಾಗಿದೆ. ಎನ್‍ಸಿಬಿ ಅಧಿಕಾರಿಗಳು ಹರ್ಷನನ್ನು ತಮ್ಮ ವಾಹನದಲ್ಲಿ ಕರೆ ತಂದ್ರೆ, ಹಿಂದೆ ತಮ್ಮ ಕಾರಿನಲ್ಲಿ ಭಾರತಿ ಎನ್‍ಸಿಬಿ ಕಚೇರಿಗೆ ಆಗಮಿಸಿದ್ದಾರೆ.
ಕಚೇರಿ ಪ್ರವೇಶಿಸುವ ವೇಳೆ ತಮ್ಮನ್ನು ಕೇವಲ ವಿಚಾರಣೆಗಾಗಿ ಕರೆ ತರಲಾಗಿದೆ ಎಂಬ ಸಂದೇಶವನ್ನು ಭಾರತಿ ಸಿಂಗ್ ಸನ್ನೆ ಮೂಲಕ ಮಾಧ್ಯಮಗಳಿಗೆ ರವಾನಿಸಿದ್ದಾರೆ.
ಎನ್‍ಸಿಬಿ ವಿಚಾರಣೆ ಹಿನ್ನೆಲೆ ಭಾರತಿ ಮತ್ತು ಅವರ ಪತಿಯನ್ನು ಕಚೇರಿಗೆ ಕರೆ ತರಲಾಗಿದೆ ಎಂದು ಎನ್‍ಸಿಬಿ ಜೋನಲ್ ಡೈರೆಕ್ಟರ್ ಸಮೀರ್ ವಾಂಖೇಡ್ ಹೇಳಿದ್ದಾರೆ. ಡ್ರಗ್ ಪೆಡ್ಲರ್ ವಿಚಾರಣೆ ವೇಳೆ ಭಾರತಿ ಸಿಂಗ್ ಹೆಸರು ಹೇಳಿದ್ದರಿಂದ ದಾಳಿ ನಡೆದಿದೆ ಎನ್ನಲಾಗಿದೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು