February 22, 2026

Newsnap Kannada

The World at your finger tips!

181119e9 390e 4a99 a255 c0c81fab90c6

ಡ್ರಗ್ಸ್‌ ಪ್ರಕರಣ – ಬಿಜೆಪಿ ಮುಖಂಡನ ವಿಚಾರಣೆಗೆ ಸಮನ್ಸ್ ನೀಡಿದ ಪೊಲೀಸರು

Spread the love

ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲ್ಕತ್ತಾ ಪೊಲೀಸರು ಬಿಜೆಪಿ ಮುಖಂಡ ರಾಕೇಶ್‌ಸಿಂಗ್‌ಗೆ ಸಮನ್ಸ್‌ ಜಾರಿ ಮಾಡಿದ್ದಾರೆ.

ಕಾರಿನಲ್ಲಿ ಕೋಕೇನ್ ಸಹಿತ ಸಿಕ್ಕಿ ಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ದಿನಗಳ ಹಿಂದೆ ಬಂಗಾಳ ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಪಮೇಲಾ ಗೋಸ್ವಾಮಿ ಹಾಗೂ ಅವರ ಇಬ್ಬರು ಸ್ನೇಹಿತರನ್ನು ಬಂಧಿಸಲಾಗಿತ್ತು.

ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಪಮೇಲಾ ಗೋಸ್ವಾಮಿ ಸಂಚರಿಸುತ್ತಿದ್ದ ಕಾರಿನಲ್ಲಿ ಲಕ್ಷಾಂತರ ರು ಮೌಲ್ಯದ 100 ಗ್ರಾಂ ಕೋಕೇನ್ ನನ್ನು ಪೊಲೀಸರು ವಶಪಡಿಸಿಕೊಂಡಿದ್ದರು.

ಬಂಧಿತ ಆರೋಪಿ ಪಮೇಲಾ ಗೋಸ್ವಾಮಿಯವರನ್ನು ಕೊಲ್ಕತ್ತಾದ ನ್ಯಾಯಾಲಯಕ್ಕೆ ಹಾಜರುಪಡಿಸುವ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಈ ಪ್ರಕರಣದಲ್ಲಿ ಬಿಜೆಪಿ ಮುಖಂಡ ರಾಕೇಶ್‌ಸಿಂಗ್‌ ಪಿತೂರಿಯಿದೆ ಎಂದು ದೂರಿದ್ದರು.

ಈ ಸಂಬಂಧ ಪೊಲೀಸರು ಫೆಬ್ರವರಿ 23 ಸಂಜೆ 4 ಗಂಟೆಗೆ ಬಿಜೆಪಿ ಮುಖಂಡ ರಾಕೇಶ್‌ಸಿಂಗ್‌ಗೆ ತನಿಖಾಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್‌ ನೀಡಲಾಗಿದೆ ಎಂದು ತಿಳಿದುಬಂದಿದೆ.

error: Content is protected !!