ಡ್ರಗ್ಸ್ ಪ್ರಕರಣದ ಆರೋಪ ಹೊತ್ತಿದ್ದ, ಅನೇಕ ದಿನಗಳಿಂದ ಎನ್‌ಸಿಬಿ ಅಧಿಕಾರಿಗಳ ಕೈಗೆ ಸಿಗದೇ ತಪ್ಪಿಸಿಕೊಂಡು ಓಡಾಡುತ್ತಿದ್ದ ನಟಿ ದೀಪಿಕಾ ಪಡುಕೋಣೆಯ ಮ್ಯಾನೇಜರ್ ಕರೀಷ್ಮಾ ಪ್ರಕಾಶ್ ತಾವೇ ಸ್ವತಃ ಖುದ್ದಾಗಿ ಎನ್‌ಸಿಬಿ ಕಛೇರಿಗೆ ಹಾಜರಾಗಿದ್ದಾರೆ.
ಕೆಲದಿನಗಳ ಹಿಂದೆ ಕರೀಷ್ಮಾ ಪ್ರಕಾಶ್ ಮನೆಯನ್ನು ಶೋಧಿಸಿದ್ದ ಅಧಿಕಾರಿಗಳಿಗೆ ಕರೀಷ್ಮಾ ಡ್ರಗ್ಸ್ ನಂಟು ಹೊಂದಿದ್ದರು ಎಂಬ ಬಗ್ಗೆ ಕೆಲವು ಆಧಾರಗಳು ಸಿಕ್ಕಿದ್ದವು. ಈ ಆಧಾರದ ಮೇರೆಗೆ ಎನ್‌ಸಿಬಿ ಕರೀಷ್ಮಾ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿತ್ತು.
ಆಗ ಬಂಧನದ ಭೀತಿಗೊಳಗಾಗಿದ್ದ ಕರೀಷ್ಮಾ ಎನ್‌ಸಿಬಿ ಅಧಿಕಾರಿಗಳ ಕೈಗೆ ಸಿಗದೇ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಇದೀಗ ಅವರಿಗೆ ನಿರೀಕ್ಷಣಾ ಜಾಮೀನು ದೊರೆತಿದ್ದರಿಂದ ಎನ್‌ಸಿಬಿ ಕಛೇರಿಗೆ ಹಾಜರಾಗಿದ್ದರು.
ಕರೀಷ್ಮಾ ಅವರಿಗೆ ಸದ್ಯಕ್ಕೆ ನವೆಂಬರ್ 7ರ ವರೆಗೆ ನಿರೀಕ್ಷಣಾ ಜಾಮೀನು ದೊರೆತಿದೆ. ಹಾಗಾಗಿ ಯಾವುದೇ ಅಧಿಕಾರಿಗಳು ನಿರೀಕ್ಷಣಾ ಜಾಮೀನಿನ ಅವಧಿ ಮುಗಿಯುವವರೆಗೆ ಕರೀಷ್ಮಾ ಅವರನ್ನು ಬಂಧಿಸುವಂತಿಲ್ಲ.
More Stories
ಸಂಸತ್ ಕಟ್ಟಡದ ಬಳಿ ಬೆಂಕಿ ಹಚ್ಚಿಕೊಂಡ ಯುವಕ ಚಿಕಿತ್ಸೆ ಫಲಕಾರಿಯಾಗದೆ ಸಾವು
ಕರ್ತವ್ಯದ ವೇಳೆ ಬ್ರೈನ್ಸ್ಟ್ರೋಕ್ಗೆ ಬಲಿಯಾದ ಅರಣ್ಯ ಇಲಾಖೆ ನೌಕರ
ಮುದ್ದುಲಕ್ಷ್ಮಿ ಸೀರಿಯಲ್ ನಟ ಚರಿತ್ ಬಾಳಪ್ಪ ಲೈಂಗಿಕ ದೌರ್ಜನ್ಯ ಆರೋಪದಡಿ ಬಂಧನ