March 13, 2026

Newsnap Kannada

The World at your finger tips!

centralCrime

ಡ್ರಗ್ಸ್ ಪ್ರಕರಣ : ಸಿಸಿಬಿಯಿಂದ 2900 ಪುಟಗಳ ಚಾರ್ಜಶೀಟ್ ಸಲ್ಲಿಕೆ

Spread the love

ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ ತನಿಖಾ ಹಂತದಲ್ಲಿರುವಾಗಲೇ ಸಿಸಿಬಿ ನ್ಯಾಯಾಲಯಕ್ಕೆ 2900 ಪುಟಗಳ ಚಾರ್ಜ್ ಶೀಟ್ ಎನ್ ಡಿಪಿಎಸ್ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

ಈ ಚಾರ್ಜ್ ಶೀಟ್ 25 ಆರೋಪಿಗಳ ವಿರುದ್ಧ 180 ಸಾಕ್ಷಿಗಳ ಹೇಳಿಕೆ ಆಧರಿಸಿದೆ. 5 ವಾಲ್ಯೂಮ್ ಗಳ ಈ ಚಾರ್ಜಶೀಟ್ ಪ್ರಕರಣದ ಆರೋಪಿಗಳಿಗೆ ಮತ್ತೆ ಜೈಲಿನ ಹಾದಿ ತೋರಿಸಲಿದೆ ಎನ್ನಲಾಗುತ್ತಿದೆ‌.

ನಟಿ ರಾಗಿಣಿ ದಿವೇದಿ, ಸಂಜನಾ ಗಲ್ರಾನಿ, ರಾಹುಲ್ ,ವಿರೇನ್ ಖನ್ನಾ, ಶಿವಪ್ರಕಾಶ್ ಚಿಪ್ಪಿ ಸೇರಿದಂತೆ‌ ದಕ್ಷಿಣ ಆಫ್ರಿಕಾ ಮೂಲದ ನಾಲ್ಕು ಆರೋಪಿಗಳ ವಿರುದ್ಧ ಚಾರ್ಜಶೀಟ್ ಸಲ್ಲಿಕೆಯಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಮೂವರು ಆರೋಪಿಗಳ ಬಂಧನ ಬಾಕಿ ಇದೆ.

ಪ್ರಕರಣದಲ್ಲಿ ಬಂಧಿತರಾದ ಆರೋಪಿ ಗಳ ಹೇಳಿಕೆಯೇ ಪ್ರಮುಖ ಸಾಕ್ಷಿ ಎನ್ನಲಾಗಿದೆ, ಡ್ರಗ್ಸ್ ಸೇವನೆ ಜೊತೆಗೆ ಪೆಂಡ್ಲಿಂಗ್ ಮಾಡಿದ್ದು, ದಂಧೇಕೋರರಿಗೆ ಆಶ್ರಯ ಹಾಗೂ ಹಣ ಸಹಾಯ ನೀಡಿದ ಹಲವರ ವಿವರವನ್ನು ಚಾರ್ಜ್ ಶೀಟ್‌ ಉಲ್ಲೇಖಿಸಿದೆ

ಡ್ರಗ್ಸ್ ಕೇಸ್ ನಲ್ಲಿ ಬೇಲ್ ಪಡೆದು ಹೊರಗಡೆ ಬಂದಿರುವ ಅರೋಪಿಗಳಿಗೆ ಟೆನ್ಸನ್ ಹೆಚ್ಚಾಗಿದೆ. ಸಧ್ಯದಲ್ಲೇ ವಾದಗಳು ಆರಂಭವಾಗುವ ಸಾಧ್ಯತೆ ಇದೆ.

error: Content is protected !!