March 12, 2026

Newsnap Kannada

The World at your finger tips!

a9b06f58 a828 457b 8c08 838ab72cb153

ಡ್ರಗ್ಸ್ ಮಾಫಿಯಾ – ಆಸ್ಕಾ ಹೇಳಿಕೆ ಆ್ಯಂಕರ್ ಅನುಶ್ರೀಗೆ ಮುಳುವು

Spread the love

ಮಣಿಪುರದ ಆಸ್ಕಾ ಎಂಬ ಯುವತಿ ಡ್ರಗ್ಸ್ ಪಾರ್ಟಿಯಲ್ಲಿ ನಾನು ಆ್ಯಂಕರ್ ಅನುಶ್ರೀಯನ್ನು ನೋಡಿದ್ದೇ ಎಂದು ಮಂಗಳೂರು ಸಿಸಿಬಿ ಪೊಲೀಸರ ಮುಂದೆ ಬಾಯಿ ಬಿಟ್ಟಿದ್ದಾಳೆ.
ಸ್ಯಾಂಡಲ್‌ವುಡ್‌ ಡ್ರಗ್ಸ್ ಪ್ರಕರಣವು ಇಂತಹ ಹೇಳಿಕೆಗಳಿಂದ ನಿತ್ಯವೂ ಹೊಸ ತಿರುವು ಪಡೆದುಕೊಳ್ಳುತ್ತಿದೆ ಎನ್ನುವುದಕ್ಕೆ ಆಸ್ಕಾ ಹೇಳಿಕೆ ಪೂರಕವಾಗಿದೆ. ಮಣಿಪುರ ಮೂಲದ ಡ್ರಗ್ಸ್ ಪ್ರಕರಣದ ಆರೋಪಿ ಆಸ್ಕ್, ಆ್ಯಂಕರ್ ಅನುಶ್ರೀಯನ್ನು ನಾನು ಡ್ರಗ್ಸ್ ಪಾಟರ್ಿಯಲ್ಲಿ ಒಮ್ಮೆ ನೋಡಿದ್ದೇ ಎಂದು ಹೇಳಿದ್ದಾಳೆ. ಆಸ್ಕಾ ಹೇಳಿಕೆಯು ಆ್ಯಂಕರ್ ಅನುಶ್ರೀಗೆ ಮುಳುವಾಗುವ ಸಾಧ್ಯತೆ ಇದೆ.
ಈ ನಡುವೆ ಆಸ್ಕಾಳನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಿರುವ ಸಿಸಿಬಿ ಪೊಲೀಸರು ಮುಂಬೈನ ಬಾಲಿವುಡ್ ನಟರೊಂದಿಗೆ ಈಕೆಗೂ ನಂಟಿದೆ ಎಂದು ತನಿಖೆ ವೇಳೆ ಗೊತ್ತಾಗಿದೆ.
ಆಸ್ಕಾ ಹೇಳಿಕೆಯ ಜಾಡು ಹಿಡಿದು ಮಂಗಳೂರು ಸಿಸಿಬಿ ಪೊಲೀಸರು ಮುಂಬೈ ಹಾಗೂ ಗೋವಾಗೆ ಭೇಟಿ ನೀಡಿ ಸಾಕ್ಷ ಕಲೆ ಹಾಕುವ ಪ್ರಯತ್ನದಲ್ಲಿ ಇದ್ದಾರೆಂದು ಹೇಳಲಾಗಿದೆ.
ಆಸ್ಕಾ ಹೇಳಿಕೆಯ ನಂತರ ಆ್ಯಂಕರ್ ಅನುಶ್ರೀಯಿಂದ ಪೊಲೀಸರು ಮತ್ತೆ ವಿವರಣೆ ಪಡೆಯುವ ಸಾಧ್ಯತೆ ಇದೆ.

error: Content is protected !!