ಚಾಲನಾ ರಹದಾರಿ ಪತ್ರವನ್ನು ಪಡೆಯಲು ಅರ್ಜಿ ಇನ್ನುಮುಂದೆ ಕಡ್ಡಾಯವಾಗಿ 90 ದಿನ ಕಾಯಬೇಕು ಎಂದು ಸಾರಿಗೆ ಇಲಾಖೆ ಹೇಳಿದೆ.
ಈ ಮೊದಲು ಆನ್‌ಲೈನ್ ಮೂಲಕ ಚಾಲನಾ ರಹದಾರಿ ಪತ್ರ ಸಲ್ಲಿಸಿದ್ದರೆ 30 ದಿನ ಕಾಯಬೇಕಿತ್ತು. ಕೋವಿಡ್ ಕಾರಣದಿಂದ ಸಾಕಷ್ಟು ಅರ್ಜಿಗಳು ವಿತರಣೆಯ ಪ್ರಕ್ರಿಯೆಯಲ್ಲಿ ಇರುವುದರಿಂದ ಸಾರಿಗೆ ಇಲಾಖೆ ಈ ನಿರ್ಧಾರ ಕೈಗೊಂಡಿದೆ.
ಕಲಿಕಾ ಹಾಗೂ ಅನುಜ್ಞಾ ಪತ್ರ ಪಡೆಯಲು ಆನ್‌ಲೈನ್ ಅರ್ಜಿ ಸಲ್ಲಿಕೆ ಮೊದಲು ಮಾಡಿದ್ದಾಗ 30 ದಿನ ಕಾಯಬೇಕಿತ್ತು. ಆದರೆ ಕೋವಿಡ್ ಕಾರಣದಿಂದ ಸಾವಿರಾರು ಕಲಿಕಾ ಹಾಗೂ ಅನುಜ್ಞಾ ಪತ್ರಗಳು ಬಾಕಿ ಇವೆ. ಈ ಅರ್ಜಿಗಳ ಸಮರ್ಪಕ ವಿಲೇವಾರಿ ಮಾಡಲು, ಅರ್ಜಿಗಳಿಗೆ 90 ದಿನಗಳವರೆಗೆ ಕಾಲಾವಕಾಶ ವಿಸ್ತರಣೆ ಮಾಡಲಾಗಿದೆ.
ಈ ಕುರಿತು ಆದೇಶ ಹೊರಡಿಸಿರುವ ಸಾರಿಗೆ ಇಲಾಖೆ ‘ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿಗಳು ಚಾಲನಾ ಪರವಾನಗೆಗಾಗಿ ಆನ್‌ಲೈನ್ ಮೂಲಕ ಬುಕ್ ಮಾಡಿದ ಅಭ್ಯರ್ಥಿಗಳಿಗೆ 90 ದಿನಕ್ಕೆ ಮೀರದಂತೆ ಸೇವೆ ನೀಡಬೇಕು’ ಎಂದು ಉಲ್ಲೇಖಿಸಿದೆ
More Stories
ಡ್ರಗ್ಸ್ ಕೇಸ್ ಹೆಸರಿನಲ್ಲಿ ಟೆಕಿಗೆ 40 ಲಕ್ಷ ವಂಚನೆ
ಮೈಸೂರು BEML ಅಧಿಕಾರಿ ಆತ್ಮಹತ್ಯೆ ಗೆ ಶರಣು
MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು