March 12, 2026

Newsnap Kannada

The World at your finger tips!

bike

ಅತೀ ವೇಗದಿಂದ ಬೈಕ್ ಚಾಲನೆ:ಆಯತಪ್ಪಿ ಮಂಡ್ಯದ ಯುವ ಪ್ರೇಮಿಗಳ ದುರಂತ ಸಾವು

Spread the love

ಅತೀ ವೇಗದಿಂದ ಬೈಕ್ ಚಾಲನೆ ಮಾಡಿಕೊಂಡು ಬರುತ್ತಿದ್ದಾಗ
ಆಯತಪ್ಪಿ ಮಂಡ್ಯದ ಯುವ ಪ್ರೇಮಿಗಳ ದುರಂತ ಸಾವು ಕಂಡ ಘಟನೆ ಕೊಳ್ಳೇಗಾಲ ತಾಲೂಕಿನ ಚಿಕ್ಕಿಂದುವಾಡಿ ಹಾಗೂ ಮಧುವನಹಳ್ಳಿ ಮುಖ್ಯರಸ್ತೆಯಲ್ಲಿ ಜರುಗಿದೆ.

ಮಂಡ್ಯ ಜಿಲ್ಲೆಯ ಹರುವು ಗ್ರಾಮದ ಐಶ್ವರ್ಯ (18) ಹಾಗೂ ಆನಂದ್ (22) ಮೃತಪಟ್ಟ ಪ್ರೇಮಿಗಳು.

ಮಹದೇಶ್ವರ ಬೆಟ್ಟಕ್ಕೆ ಆಗಮಿಸಿ ಪೂಜೆ‌ ಮುಗಿಸಿ ಮಂಡ್ಯಕ್ಕೆ ವಾಪಸ್ಸು ಆಗುತ್ತಿದ್ದಾಗ ಅತೀ ವೇಗವಾಗಿ ಬೈಕ್ ಚಾಲನೆ ಮಾಡಿದ್ದರಿಂದ ಆಯಾತಪ್ಪಿ ರಸ್ತೆ ಬದಿಯ ಚಾನಲ್‌ಗೆ ಬಿದ್ದು ಭೀಕರವಾಗಿ ಗಾಯಗೊಂಡಿದ್ದರು.

ತಕ್ಷಣ ಸಾರ್ವಜನಿಕರು ಗಾಯಾಳು ಗಳನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ರವಾನಿಸುವಾಗ ಮಾರ್ಗ ಮಧ್ಯೆ ಯುವತಿ ಮೃತಪಟ್ಟಳು. ಹೆಚ್ಚಿನ ಚಿಕಿತ್ಸೆಗೆ ಮೈಸೂರು ಆಸ್ಪತ್ರೆಗೆ ಸೇರಿದ ಬೈಕ್ ಸವಾರ ಯುವಕ ಚಿಕಿತ್ಸೆ ಫಲಕಾರಿ ಯಾಗದೇ ಕೊನೆಯುಸಿರೆಳಿದ್ದಾನೆ.

ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

ಸ್ಥಳಕ್ಕೆ ಡಿವೈಎಸ್ಪಿ ನಾಗರಾಜು, ಸಿಪಿಐ ಶ್ರೀಕಾಂತ್ ಹಾಗೂ ಎಸ್‌ ಐ ಅಶೋಕ್ ಭೇಟಿ ನೀಡಿ ಪರೀಶಿಲಿಸಿದರು.

error: Content is protected !!