“ಚಿನ್ನದ ಹುಡುಗ’ ನೀರಜ್ ಚೋಪ್ರಾ ತನ್ನ ಕನಸೊಂದನ್ನು ನನಸು ಮಾಡಿಕೊಂಡಿದ್ದಾರೆ. ಅವರೇ ಹೇಳಿಕೊಂಡಂತೆ ಅದೊಂದು ಸಣ್ಣಕನಸು.
ಏನಪ್ಪ ಅದು ಅಂದ್ರೆ, ತಮಗೆ ಜನ್ಮನೀಡಿದ ತಂದೆ-ತಾಯಿಯನ್ನು ತಮ್ಮ ಜೀವಮಾನದಲ್ಲಿ ಒಮ್ಮೆಯಾದರು ವಿಮಾನ ಪ್ರಯಾಣ ಮಾಡಿಸಬೇಕು ಎಂದು ಅಂದುಕೊಂಡಿದ್ದರು. ಹಿರಿಯರು ಹೇಳುವಂತೆ, ಎಲ್ಲದಕ್ಕೂ ಸಮಯದ ಬರಬೇಕು ಅಂತ. ನೀರಜ್ ಅಂದುಕೊಂಡಿದ್ದು ಇಂದು ಕಾರ್ಯರೂಪಕ್ಕೆ ಬಂತು.
A small dream of mine came true today as I was able to take my parents on their first flight.
— Neeraj Chopra (@Neeraj_chopra1) September 11, 2021
आज जिंदगी का एक सपना पूरा हुआ जब अपने मां – पापा को पहली बार फ्लाइट पर बैठा पाया। सभी की दुआ और आशिर्वाद के लिए हमेशा आभारी रहूंगा 🙏🏽 pic.twitter.com/Kmn5iRhvUf
ಟೋಕಿಯೊ ಒಲಿಂಪಿಕ್ಸ್ನಲ್ಲಿ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಗೆದ್ದುಕೊಂಡ 23 ವರ್ಷದ ನೀರಜ್, ಈಗ ತಮ್ಮ ತಂದೆ-ತಾಯಿಯ “ಗಗನಯಾತ್ರೆ’ಯನ್ನೂ ಮಾಡಿಸಿದ್ದಾರೆ. ಪ್ರೀತಿಯ ಅಪ್ಪ-ಅಮ್ಮನೊಂದಿಗೆ ವಿಮಾನದಲ್ಲಿ ಕುಳಿತಿರುವ ಫೋಟೋವನ್ನು ತಮ್ಮ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ತಮ್ಮ ಸಣ್ಣ ಕನಸು ಈಗ ನನಸಾಗಿದೆ ಎಂದು ಬರೆದುಕೊಂಡಿದ್ದಾರೆ.
ಚಿನ್ನದಪದಕ ಪಡೆದಾಗ ಎಷ್ಟು ಸಂತಸಪಟ್ಟರೊ ಅದಕ್ಕಿಂತ ಹೆಚ್ಚು ಸಂತೋಷ ನೀರಜ್‌ಗೆ ಈಗ ಆಗಿರಬಹುದು ಎಂಬುದು ಅವರ ಅಭಿಮಾನಿಗಳ ಅನಿಸಿಕೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು