January 30, 2026

Newsnap Kannada

The World at your finger tips!

vivek murthy

ಮಂಡ್ಯ – ಮಡಿಕೇರಿ ಆಸ್ಪತ್ರೆ ಗೆ 1.40 ಕೋಟಿ ರು ಮೌಲ್ಯದ ಔಷಧ ಕೊಡುಗೆ ನೀಡಿದ ಡಾ ವಿವೇಕ್ ಮೂರ್ತಿ

Spread the love

ಹುಟ್ಟೂರಿನ ಋಣ ತೀರಿಸಲು ಮುಂದಾಗಿರುವ ಮಂಡ್ಯ ತಾಲೂಕಿನ ಹಲ್ಲೇಗೆರೆ ಮೂಲದ ಅಮೆರಿಕಾದ ಸರ್ಜನ್‌ ಜನರಲ್‌ ಡಾ.ವಿವೇಕ್‌ಮೂರ್ತಿ ಕೋವಿಡ್ ಸಂಕಷ್ಟಕ್ಕೆ ಸ್ಪಂದಿಸಿ ಭಾರಿ ಮೊತ್ತದ ಔಷಧಿಗಳನ್ನು ಕಳುಹಿಸಿದ್ದಾರೆ.

ಮಂಡ್ಯ ಮತ್ತು ಮಡಿಕೇರಿ ಜಿಲ್ಲೆಗಳಿಗೆ 1.40 ಕೋಟಿ ರು. ಮೌಲ್ಯದ ವೈದ್ಯಕೀಯ ನೆರವು ನೀಡುವುದರ ಮೂಲಕ ಕೊರೋನಾ ಸಂಕಷ್ಟದ ಕಾಲದಲ್ಲಿ ತವರೂರಿನ ಜನರ ಕಷ್ಟಕ್ಕೆ ಸ್ಪಂದಿಸಿ ತಮ್ಮ ಉದಾರತೆಯನ್ನು ಮೆರೆದಿದ್ದಾರೆ.‌

ಮಂಡ್ಯ ತಾಲೂಕಿನ ಹಲ್ಲೇಗೆರೆ ಗ್ರಾಮದವರಾದ ಲಕ್ಷ್ಮೀ ನರಸಿಂಹಮೂರ್ತಿಯವರ ಪುತ್ರ ಡಾ.ವಿವೇಕ ಹುಟ್ಟೂರಿನ ಅಭಿಮಾನ ಇತರರಿಗೂ ಮಾದರಿಯಾಗಿದೆ.

ಯಾವ ಔಷಧಿಗಳನ್ನು ರವಾನೆ ಮಾಡಿದ್ದಾರೆ?

  • 70 ಆಕ್ಸಿಜನ್‌ ಕಾನ್ಸಂಟ್ರೇಟ​ರ್
  • 25 ಡಿಜಿಟಲ್‌ ಥರ್ಮಾಮೀಟರ್‌
  • 1.96 ಲಕ್ಷ ಎನ್‌-95 ಮಾಸ್ಕ್‌ಗಳ
  • 5000 ಫೇಸ್‌ಶೀಲ್ಡ್‌

*400 ಗ್ಲೌವ್ಸ್, 50 ಆಕ್ಸಿಜನ್‌ ಕ್ಯಾನುಲಾ

*5 ವೋಲ್ಟೇಜ್‌ ಟ್ರಾನ್ಸ್‌ಫಾರ್ಮ​ರ್ ಗಳ

ಈ ಎಲ್ಲಾ ವೈದ್ಯಕೀಯ ಸಲಕರಣೆಗಳೆಲ್ಲವೂ ಅಮೆರಿಕಾದಿಂದ ನೇರವಾಗಿ ಬೆಂಗಳೂರಿಗೆ ಬಂದಿಳಿದಿವೆ. ಅಲ್ಲಿಂದ ವಿವೇಕ್‌ ಕುಟುಂಬದವರು ಮಂಡ್ಯದ ಮಿಮ್ಸ್‌ ಹಾಗೂ ಮಡಿಕೇರಿ ಆಸ್ಪತ್ರೆಗಳಿಗೆ ನೀಡಿದ್ದಾರೆ.

ವಿವೇಕ್ ಮೂರ್ತಿ ಕುಟುಂಬದವರು ಮುಂದಿನ ದಿನಗಳಲ್ಲಿ 1 ಕೋಟಿ ರು ವೆಚ್ಚದಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿನ ರೋಗಿಗಳ ಅನುಕೂಲಕ್ಕಾಗಿ ವಾರ್ಡು ಗಳ ನಿರ್ಮಾಣ ಮಾಡಿಕೊಡುವ ನಿರ್ಧಾರ ವನ್ನು ಮಾಡಿದೆ ಮೂರ್ತಿ ಸಮೀಪದ ಬಂಧು ಪತ್ರಕರ್ತ ವಸಂತ ಕುಮಾರ್ ನ್ಯೂಸ್ ಸ್ನ್ಯಾಪ್ ಗೆ ತಿಳಿಸಿದ್ದಾರೆ.

error: Content is protected !!