Editorial

ಶತಶತಮಾನದ ಪರದಾಸ್ಯದ ಕಾಯಿಲೆಗೆ ದಿವ್ಯೌಷಧ ನೀಡಿದ ಡಾಕ್ಟರ್ ಹೆಡಗೇವಾರ್..

  • ಊರಿಗೆಲ್ಲಾ ಸಂತಸದ ಹಬ್ಬದ ಸಂಭ್ರಮ ….

ಅದು ಬರಿಯ ಸಂತಸದ ಕ್ಷಣಗಳಾಗಿ ಹೊರಜಗತ್ತಿಗೆ ಕಂಡರೂ ಪರದಾಸ್ಯ ಚಿರದಾಸ್ಯದ ಭಯದ ಛಾಯೆಯಲ್ಲೇ ಬಾಳಬೇಕಾಗಿತ್ತು . ಆ ಸಂಭ್ರಮದ ಕಾರಣ ಬ್ರಿಟಿಷ್ ಅಧಿಕಾರಿಯ ಜನ್ಮದಿನದ ಸಂಭ್ರಮ. ಈ ಕ್ಷಣಿಕ ಸಂಭ್ರಮದ ಕ್ಷಣಗಳು ಶಾಲೆಯ ವರೆಗೂ ಸಿಹಿತಿನಿಸಾಗಿ ಬಂದು ತಲುಪಿತ್ತು . ಮಕ್ಕಳೆಲ್ಲಾ ಸಾಲುಸಾಲಾಗಿ ಕೈಯೊಡ್ಡಿ ಸಿಹಿಯನ್ನು ಪಡೆದು ಸಾಂದರ್ಭಿಕ ಖುಷಿಯಲ್ಲಿ ಮುಳುಗಿಬಿಟ್ಟರು ಬಾಲಕರಾಗಿದ್ದರಿಂದ . ಆದರೆ ಅಲ್ಲೊಬ್ಬ ಪುಟ್ಟಹೂಡುಗ ಅದೇ ಶಾಲೆಯಲ್ಲಿ ವ್ಯಾಸಂಗಿಸುತ್ತಿದ್ದವನ ಮುಖದಲ್ಲಿ ಆಕ್ರೋಶವು ಆವರಿಸಿತ್ತು ಕಿಚ್ಚೊಂದಿತ್ತು ಊರೆಲ್ಲಾ ಸಂಭ್ರಮದಲ್ಲಿರುವಾಗ , ಈ ಪುಟ್ಟಬಾಲಕನು ತನಗೆ ಸಿಕ್ಕ ಆ ಸಿಹಿಯ ಪದಾರ್ಥವನ್ನು ಮೋರಿಗೆ ಒಮ್ಮಿಂದೊಮ್ಮೆಲೆ ಎಸೆದು ಬಿಟ್ಟನು. ಕಾರಣ ಕೇಳಿದರೆ ನಿಮಗೆ ಆಶ್ಚರ್ಯವೆನ್ನಿಸಬಹುದು ಆದರೂ ಅಚ್ಚರಿ ಪಡಲೇಬೇಕು ಅದೇ ಊರಿನ ಸಾಮಂತರಾದ ಬೋನ್ಸಲೆ ಮಹಾರಾಜರನ್ನು ಸ್ಮರಿಸಿದರೆ ಅವರಿಂದ ಅಧಿಕಾರವನ್ನು ಬಲವಂತದಿಂದ ಕಸಿದುಕೊಂಡಿದ್ದ ಬ್ರಿಟಿಷರ ಅಧಿಕಾರಿಯ ಜನ್ಮದಿನವನ್ನು ಸಂಭ್ರಮಿಸುತ್ತಿರುವುದನ್ನು ನೋಡಿ . ಆ ಪುಟ್ಟ ಬಾಲಕನೇ ವಿಶ್ವದ ಅತಿದೊಡ್ಡ ಮಾನವ ಸಂಪನ್ಮೂಲವನ್ನೇ ಹೊಂದಿರುವ ಎತ್ತರದ ಸ್ವಯಂಸೇವಕ ಸಂಘಟನೆ ಅದರ ಸಂಸ್ಥಾಪಕರು ಆದ ಡಾಕ್ಟರ್ ಕೇಶವ ಬಲಿರಾಮ ಹೆಡಗೇವಾರ್.

ಅವರ ರಾಷ್ಟ್ರಭಕ್ತಿಯ ಜೀವನದ ವೃತ್ತಾಂತದ ಪ್ರಾರಂಭದ ದಿವಸವದು ಅವರು ನಂಬಿದ ರಾಷ್ಟ್ರಭಕ್ತಿಯ ಸನಾತನ ಮೌಲ್ಯಗಳೇ ಮುಂದಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಿದ್ಧಾಂತವಾಗಿದ್ದು . ಉತ್ತರಾರ್ಧದಲ್ಲಿ ತಿಳಿದಿರುವ ವಿಚಾರ, ಹಾಗೂ ಸಂಘದ ಪ್ರಾರಂಭವನ್ನು ಮಾಡಿದ್ದು ಕಿತ್ತಲೆನಗರಿ ನಾಗಪುರದ ಮೊಹಿತೇವಾಡದ ಪಾಳುಬಿದ್ದ ಕೋಟೆಯ ಎದುರು.ಅದು ಬಾಲಕರನ್ನೇ ಸೇರಿಸಿ ಆಟ ವ್ಯಾಯಾಮ ಹಾಗೂ ಸಮತಾಗಳನ್ನು ಹೇಳಿಕೊಡುತ್ತ . ರಾಷ್ಟ್ರಭಕ್ತಿಯು ಅವರಿಗೆ ಮುಕ್ಕಳಾಗಿ ಕಾಡಿತ್ತು ಅವರನ್ನು ಹೆಡ್ ಗವಾರ್ ಎಂಬ ಮುಂತಾದ ಅಪಮಾನಗಳನ್ನು ವಿರೋಧಿಗಳು ಮಾಡುತ್ತಾ ಬಂದರು ಈ ವ್ಯಂಗ್ಯ ವಿರೋಧಗಳನ್ನು ಎದುರಿಸಿಯೂ ಅವರು ರಾಷ್ಟ್ರ ಭಕ್ತಿಯನ್ನು ಮರೆಯಲಿಲ್ಲ . ಅವರು ಬಹುತೇಕ ಚಿತ್ರಗಳಲ್ಲಿ ಧರಿಸಿರುವ ಕೋಟು ಏತಕ್ಕೆ ಅವರು ಧರಿಸುತ್ತಿದ್ದರು ಎಂದರೆ ಅವರ ಅಂಗಿಯು ಹರೆದಿತ್ತು ಮನೆಯಲ್ಲಿ ಆರ್ಥಿಕ ತೊಂದರೆ ಮೊದಲಾದವುಗಳು . ಇವೆಲ್ಲವನ್ನು ನೋಡಿ ಅವರು ಇದರಿಂದ ವಿಮುಖರಾಗಿ ತಮ್ಮ ವೈದ್ಯಕೀಯ ವೃತ್ತಿ ಜೀವನವನ್ನು ಮುಂದುವರೆಸಿ ಹಣವನ್ನು ಗಳಿಸಬಹುದಾಗಿತ್ತು ಆದರೆ ಅವರು ಹಾಗೆ ಮಾಡಿದ್ದಿದ್ದರೆ ನಾವು ಸಂಘದಂತಹ ಹೆಮ್ಮರವನ್ನು ನೋಡಲು ಸಾಧ್ಯವಾಗುತ್ತಿರಲೇ ಇಲ್ಲವೇನೋ .

ಅದೇ ಬಾಲಕರ ತಂಡವು ಬೆಳೆದು ಕುಶಪಥವೆಂದು ಹೆಸರಿನ ಒಂದು ಠೋಳಿಯಾಯ್ತು ಆ ಕುಶಪಥದ ಬಾಲಕರೇ ಮುಂದಕ್ಕೆ ಪ್ರಚಾರಕರಾದರು ಸಂಘದ ಎತ್ತರದ ಜಾವಾಬ್ದಾರಿಯನ್ನು ಪಡೆದರು, ಮೋರೋಪಂಥ ಪಿಂಗಳೆ, ದತ್ತೋಪಂಥ ಠೇಂಗಡಿ ಅಂತಹ ಅಖಿಲ ಭಾರತೀಯ ಜವಾಬ್ದಾರಿಯನ್ನು ಹೊಂದಿದ ಅನೇಕರು . ಸಂಘವು ಕರುನಾಡಿಗೆ ಕಾಲಿಟ್ಟಿದ್ದು ಮಾಧವರಾವ್ ಜೋಷಿಯೆಂಬ ಪ್ರಚಾರಕರಿಂದ ಅವರು ಸಂಗೀತ ವಿದ್ವಾಂಸರಾಗಿ ಸಂಘಕ್ಕೆ ತಮ್ಮ ಜೀವಿತ ಕಾಲವನ್ನು ಮುಡಿಪಾಗಿಟ್ಟಿಬಿಟ್ಟಂತವರು . ಅವರು ಕರುನಾಡಿಗೆ ಬಂದದ್ದು ಧಾರವಾಡದಲ್ಲಿ ಇದ್ದಿದ್ದು ಸಾಧನ ಕೇರಿಯಲ್ಲಿನ ದ.ರಾ.ಬೇಂದ್ರವರನ್ನು ಮೊದಲಿಗೆ ಭೇಟಿಯಾಗಿದ್ದು.
ಡಾ.ಹೆಡಗೇವಾರರ ಸ್ವತಂತ್ರ ಸಂಗ್ರಾಮದಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಎಲ್ಲರಿಗೂ ಸಿಹಿ ತಿಳಿದಿರುವ ವಿಚಾರವಾಗಿದೆ .ಸಂಘವು ರಾಷ್ಟ್ರ ಭಕ್ತಿಯನ್ನು ಬೆಳೆಸುವುದರ ಜೊತೆಗೆ ರಾಷ್ಟ್ರ ಸೇವೆ ಹಾಗೂ ರಾಷ್ಟ್ರ ನಿರ್ಮಾಣದ ಪಣವನ್ನು ತೊಟ್ಟಿದ್ದು ಹಾಗೂ ಸಂಘವು ಜನ್ಮ ಶತಾಬ್ದಿಯನ್ನು ಆಚರಿಸುವ ಸಂಭ್ರಮದಲ್ಲಿದೆ . ಅದಕ್ಕೆ ಕಾರಣೀಭೂತರು ಡಾ.ಹೆಡಗೇವಾರರು ಆದರೆ ಅದನ್ನು ಮುಂದಕ್ಕೆ ನಡೆಸಿದ್ದು ಮಾಧ್ವ ಸದಾಶಿವರಾವ್ ಗೋಳ್ವಲ್ಕರ್ (ಗುರೂಜಿ) ಈ ಬಳುವಳಿ ಮುಂದಕ್ಕೆ ಸಾಗುತ್ತಲೇ ಬರುತ್ತಿದೆ .

ಇಂತಹ ಅಸೀಮ ರಾಷ್ಟ್ರಭಕ್ತಿ, ರಾಷ್ಟ್ರಾಭಿಮಾನ ಹಾಗೂ ಸನಾತನ ಪರಂಪರೆಯ ಮೌಲ್ಯವನ್ನು ಕೈಬಿಡದಂತೆ ಈ ಪುಣ್ಯ ಭೂಮಿಯು ಮಹಾತ್ಮರನ್ನು ಕೊಡುಗೆಯಾಗಿ ನೀಡುತ್ತಲೇ ಬಂದಿದೆ ರಾಮ ಹಾಗೂ ಕೃಷ್ಣ ಭಗವಾನ್ ಋಷಿಗಳಾದ ಶ್ರೀ ವೇದವ್ಯಾಸರು ಬುದ್ಧ , ಮಹಾವೀರ ಮೊದಲ್ಗೊಂಡು ಅನೇಕರನ್ನು ಈ ಪುಣ್ಯ ಭೂಮಿಯು ನಮ್ಮೆಲರಿಗೂ ಆದರ್ಶಪ್ರಾಯವಾಗಿ ಬಾಳಲು ಈ ಮಹಾಪುರುಷರ ಆದರ್ಶಗಳೇ ಸಾಕ್ಷಿ .ಲೋಕಾಯುಕ್ತ ದಾಳಿ : ಆರ್‌ಟಿಒ ಅಧಿಕಾರಿ ಮನೆಯಲ್ಲಿ ಚಿನ್ನಾಭರಣ , 3 ಲಕ್ಷ ಹಣ ಜಪ್ತಿ

ಸ್ವಾತಂತ್ರ್ಯ ಸಂಗ್ರಾಮ ಶತಶತಮಾನಗಳ ಹೋರಾಟ ಹಾಗೂ ಭಾರತವನ್ನು ಆತ್ಮನಿರ್ಭರರನ್ನಾಗಿ ಮಾಡಲು ಕೊಂಕಣಿ ತೊಟ್ಟಂತಹ ನಮ್ಮೆಲ್ಲರ ಹೆಮ್ಮೆಯ ಪ್ರಧಾನ ಮಂತ್ರಿಗಳು ಈ ಸಂಘಟನೆಯಲ್ಲೇ ಅನ್ಯಾನ್ಯ ಜವಾಬ್ದಾರಿಯನ್ನು ನಿರ್ವಹಿಸಿ ಈಗ ವಿಶ್ವ ನಾಯಕರಾಗಿ ಗುರುತಿಸಿಕೊಳ್ಳುತ್ತಿರುವುದು ಎಲ್ಲರಿಗೂ ಆನಂದನಪ್ರದವಾದ ವಿಚಾರ…!!

~ಆದಿತ್ಯ.ಜಿ.ಮೈಸೂರು✍️

Team Newsnap
Leave a Comment

Recent Posts

ಅಕ್ಟೋಬರ್ 4 ರಿಂದ 7 ವರೆಗೆ ಶ್ರೀರಂಗಪಟ್ಟಣ ದಸರ

ಶ್ರೀರಂಗಪಟ್ಟಣ : ಅಕ್ಟೋಬರ್ 4 ರಿಂದ 7 ವರೆಗೆ ವಿಜೃಂಭಣೆಯಿಂದ ಶ್ರೀರಂಗಪಟ್ಟಣ ಆಚರಿಸಲಾಗುವುದು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ… Read More

September 19, 2024

ತುಪ್ಪದ ಬದಲು ಪ್ರಾಣಿಗಳ ಕೊಬ್ಬಿನಿಂದ ತಿರುಪತಿ ಲಡ್ಡನ್ನು ತಯಾರಿಸಲಾಗುತ್ತಿತ್ತು: ಚಂದ್ರಬಾಬು ನಾಯ್ಡು

ಆಂಧ್ರಪ್ರದೇಶ: ಹಿಂದಿನ ಸರ್ಕಾರ ತಿರುಪತಿ ಲಡ್ಡುವನ್ನು ತುಪ್ಪದ ಬದಲು ಪ್ರಾಣಿಗಳ ಕೊಬ್ಬಿನಿಂದ ತಯಾರಿಸಲಾಗಿದೆ ಎಂದು ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು… Read More

September 19, 2024

ಶಾಸಕ ಮುನಿರತ್ನ ವಿರುದ್ಧ ಅತ್ಯಾಚಾರ ಕೇಸ್‌ ದಾಖಲು

ಬೆಂಗಳೂರು: ಜೆಪಿ ಶಾಸಕ ಮುನಿರತ್ನವಿರುದ್ಧ ಮತ್ತೊಂದು ಕೇಸ್‌ ದಾಖಲಾಗಿದ್ದು , ಇದೀಗ ಶಾಸಕನ ವಿರುದ್ಧ ಅತ್ಯಾಚಾರ ಕೇಸ್‌ ದಾಖಲಾಗಿದೆ. ಶಾಸಕ… Read More

September 19, 2024

ಮೆಜೆಸ್ಟಿಕ್‌ ಬಸ್‌ ನಿಲ್ದಾಣದಲ್ಲಿ ಬಿಎಂಟಿಸಿ ಬಸ್‌ಗೆ ವಿಶೇಷ ಚೇತನ ಬಲಿ

ಬೆಂಗಳೂರು: ಮೆಜೆಸ್ಟಿಕ್‌ ಬಸ್‌ ನಿಲ್ದಾಣದಲ್ಲಿ ಬಿಎಂಟಿಸಿ ಬಸ್‌ ಅಪಘಾತಕ್ಕೆ ವಿಶೇಷ ಚೇತನ ಬಲಿಯಾಗಿರುವ ಘಟನೆ ನಡೆದಿದೆ. ಬಿಎಂಟಿಸಿ ಬಸ್ ಯಶವಂತಪುರದಿಂದ… Read More

September 18, 2024

ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India

ನವದೆಹಲಿ ,ಸೆಪ್ಟೆಂಬರ್ 18 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 68,640 ರೂಪಾಯಿ ದಾಖಲಾಗಿದೆ. 24… Read More

September 18, 2024

ಸೆ.19ರಿಂದ ವಿಎಓ/ಜಿಟಿಟಿಸಿ ಪರೀಕ್ಷೆಗೆ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ

ಬೆಂಗಳೂರು: ಸೆ.19ರಿಂದ ಮ ಆಡಳಿತಾಧಿಕಾರಿ ಮತ್ತು ಜಿಟಿಟಿಸಿಯ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮತ್ತೊಮ್ಮೆ ಅವಕಾಶ ನೀಡಲಾಗಿದೆ ಎಂದು ಕೆಇಎ ಕಾರ್ಯನಿರ್ವಾಹಕ… Read More

September 17, 2024