January 11, 2025

Newsnap Kannada

The World at your finger tips!

DOCTOR,news,medical

Dr. Manjunath's tenure as Director of Jayadeva Hospital has been extended by 1 year ಜಯದೇವ ಆಸ್ಪತ್ರೆ ನಿರ್ದೇಶಕರಾಗಿ ಡಾ ಮಂಜುನಾಥ್‌ ಸೇವಾವಧಿ 1 ವರ್ಷ ವಿಸ್ತರಣೆ #Thenewsnap #latestnews #karnataka #kannadanews #Hospital #jaideva #Mandyanews #Mysuru

ಏಪ್ರಿಲ್ 30 – ಮಧ್ಯಾಹ್ನ‌ 12 ಕ್ಕೆ ಡಾ. ಮಂಜುನಾಥ್ ಜೊತೆ ವೆಬಿನಾರ್ ಮಾಧ್ಯಮ ಸಂವಾದ

Spread the love

ಕೋವಿಡ್ ಸಂದರ್ಭದಲ್ಲಿ, ಸುದ್ದಿ ಮನೆಯಲ್ಲಿ ಕೆಲಸ ಮಾಡುವ ಪತ್ರಕರ್ತರು ಮತ್ತು ಸಿಬ್ಬಂದಿಗಳು ತೀವ್ರ ಸಂಕಷ್ಟದಲ್ಲಿ ಸಮಸ್ಯೆ ವಿರುದ್ಧ ವೃತ್ತಿ ಬದ್ಧತೆಯಿಂದ ಈಜುತ್ತಿದ್ದಾರೆ.

ಈ ದುರಿತ ಕಾಲದಲ್ಲಿ ಒತ್ತಡದಲ್ಲಿರುವ ಪತ್ರಕರ್ತರು, ಸುದ್ದಿ ಧಾವಂತಕ್ಕೆ ಬಿದ್ದು ಪ್ರಾಣತೆತ್ತ ಪ್ರಕರಣಗಳು ಅಲ್ಲಲ್ಲಿ ವರದಿಯಾಗುತ್ತಲೇ ಇವೆ.

ಕಳೆದ ವರ್ಷ ಕೋವಿಡ್ ಸಂದರ್ಭದಲ್ಲಿ ಇಂಥದ್ದೆ ಸಂದರ್ಭವನ್ನು ಮಾಧ್ಯಮ ಕ್ಷೇತ್ರ ಎದುರಿಸಿತ್ತು. ಈಗ ಇನ್ನಷ್ಟು ಭಯನಾಕ ಸನ್ನಿವೇಶಗಳಿಗೆ ಸುದ್ದಿ ಮನೆ ಸಾಕ್ಷಿಯಾಗುತ್ತಿದೆ.

manjunath cn

ಇಂತಹ ಹೊತ್ತಿನಲ್ಲಿ ನಾವು ಕನಿಷ್ಠ ಮುಂಜಾಗ್ರತೆ ವಹಿಸುವುದು, ಮುಂದೆ ಬಂದೊದಗಬಹುದಾದ ಸನ್ನಿವೇಶವನ್ನು ಧೈರ್ಯದಿಂದ ನಿಭಾಯಿಸುವುದು ನಮ್ಮ ಆದ್ಯತೆಯಾಗಬೇಕಿದೆ. ಸುದ್ದಿ ಮನೆಯಲ್ಲಿ ಪತ್ರಕರ್ತರು ಮತ್ತು ಸಿಬ್ಬಂದಿಗಳು, ಅವರ ಕುಟುಂಬದ ಕ್ಷೇಮ ಕೂಡ ಬಹುಮುಖ್ಯ. ಈ ನಿಟ್ಟಿನಲ್ಲಿ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (KUWJ) ಪುಟ್ಟ ಹೆಜ್ಜೆ ಇಟ್ಟಿದೆ.

ನಾಡಿನ ಹೆಸರಾಂತ ವೈದ್ಯ, ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಅವರೊಂದಿಗೆ ಏಪ್ರಿಲ್ 30 – ಮಧ್ಯಾಹ್ನ‌ 12 ಕ್ಕೆ ವೆಬಿನಾರ್ ಮಾಧ್ಯಮ ಸಂವಾದ. ಕೋವಿಡ್ ಸಂದರ್ಭದಲ್ಲಿ ಪತ್ರಕರ್ತರಿಗಿರಬೇಕಾದ ಮುನ್ನೆಚ್ಚರಿಕೆ ವಿಷಯ ಬಗ್ಗೆ ವೆಬಿನಾರ್ ಸಂವಾದ ಏರ್ಪಡಿಸಿದೆ. ಅಲ್ಲಿ ನಮ್ಮ ಆತಂಕಗಳಿಗೆ ಒಂದಿಷ್ಟು ಉತ್ತರ ಸಿಗಬಹುದು. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.

KUWJ Karnataka is inviting you to a scheduled Zoom meeting.

Topic: KUWJ Interaction with Dr CN Manjunath on COVID Impact on Media Warriors
Time: Apr 30, 2021 12:00 PM India

Join Zoom Meeting
https://us02web.zoom.us/j/82155183836?pwd=RitrT1RwS000SE0xYmh1UGZVUHQ3UT09

Meeting ID: 821 5518 3836
Passcode: 536281

Copyright © All rights reserved Newsnap | Newsever by AF themes.
error: Content is protected !!