February 21, 2026

Newsnap Kannada

The World at your finger tips!

varthika

ವರದಕ್ಷಿಣೆ ಕಿರುಕುಳ : ಮಹಿಳಾ ಐಪಿಎಸ್ ಅಧಿಕಾರಿ ವರ್ತಿಕಾ, ಪತಿ ವಿರುದ್ದವೇ ದೂರು

Spread the love

ವರದಕ್ಷಿಣೆ ಕಿರುಕುಳ ಸಹಿದ ಮಹಿಳಾ ಹಿರಿಯ ಐಪಿಎಸ್ ಅಧಿಕಾರಿಯೇ , ಗಂಡ ಮತ್ತು ಆತನ ಕುಟುಂಬದ ಸದಸ್ಯರ ವಿರುದ್ಧ ದೂರು ನೀಡಿದ್ದಾರೆ.‌

ಐಪಿಎಸ್ ಅಧಿಕಾರಿ ವರ್ತಿಕಾ ಕಟಿಯಾರ್ ಬೆಂಗಳೂರಿನ ಕಬ್ಬನ್ ಪೇಟೆ ಫೋಲಿಸ್ ಠಾಣೆಗೆ ವರದಕ್ಷಿಣೆ ಕಿರುಕುಳ ಸಂಬಂಧಿಸಿದಂತೆ ಗಂಡ ಐಎಫ್ಎಸ್ ಅಧಿಕಾರಿ ನಿತೀನ್ ಸುಭಾಷ್ ಯಲ್ಲೋ ಸೇರಿದಂತೆ ಕುಟುಂಬದ 7 ಮಂದಿ ವಿರುದ್ದ ದೂರು ನೀಡಿದ್ದಾರೆ.

2011 ರಲ್ಲಿ ವರ್ತಿಕಾ ಹಾಗೂ ಸುಭಾಷ್ ವಿವಾಹವಾಗಿದ್ದರು. ಆಗಿನಿಂದಲೂ ವರದಕ್ಷಿಣೆ ಕೊಡುವಂತೆ ಪೀಡಿಸುತ್ತಿದ್ದರು ಎಂದು ವರ್ತಿಕಾ ದೂರಿನಲ್ಲಿ ಹೇಳಿದ್ದಾರೆ.

ವರದಕ್ಷಿಣೆಗಾಗಿ ನನ್ನ ಮೇಲೆ ಮಾನಸಿಕ ಹಾಗೂ ದೈಹಿಕ ವಾಗಿಯೂ ಹಲ್ಲೆ ಮಾಡಿದ್ದಾರೆ. ಒಂದು ವೇಳೆ ವರದಕ್ಷಿಣೆ ಕೊಡದೇ ಹೋದರೆ ವಿವಾಹ ವಿಚ್ಛೇದನ ನೀಡುವುದಾಗಿ ಗಂಡ ಬೆದರಿಕೆ ಹಾಕುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

saraswathi

error: Content is protected !!