ಮೇ 3 ರ ಅಕ್ಷಯ ತೃತೀಯ ದಿನ ನಡೆಲಿರುವ ಕೋಟ್ಯಾಂತರ ರು ಚಿನ್ನದ ವ್ಯಾಪಾರಕ್ಕೂ ಧರ್ಮ ದಂಗಲ್ ಶುರುವಾಗಿದೆ.ಹಲಾಲ್ , ಝಟ್ಕಾ ಆಯ್ತು. ಈಗ ಬಂಗಾರಕ್ಕೂ ದರ್ಮದ ಲೇಪನ ಹಚ್ಚುವ ಅಭಿಯಾನ ಅರಂಭವಾಗಿದೆ.
ಈ ಕುರಿತಂತೆ ಹಿಂದೂ ಸಂಘಟನೆಗಳು ಮಲಬಾರ್ ಸೇರಿದಂತೆ ಮುಸ್ಲಿಂ ಜ್ಯುವೆಲರಿ ಶಾಪ್ ಗಳಲ್ಲಿ ಚಿನ್ನ ಖರೀದಿ ಮಾಡದಂತೆ ಅಭಿಯಾನ ಆರಂಭಿಸಿದ್ದಾರೆ.
ರಾಜ್ಯದಲ್ಲಿ ಸರಿ ಸುಮಾರು ಮೂವತ್ತು ಸಾವಿರ ಚಿನ್ನದಂಗಡಿಗಳಿವೆ. ಅದರಲ್ಲಿ ಶೇಕಡಾ 30 ರಷ್ಟು ಮುಸ್ಲಿಂ ಮಾಲೀಕತ್ವದ ಮಳಿಗೆಗಳಿದ್ದು, ಬಹುತೇಕ ಮುಸ್ಲಿಂ ವ್ಯಾಪಾರಿಗಳು ಕೇರಳ ಮೂಲದ ಮುಸ್ಲಿಂ ವ್ಯಾಪಾರಿಗಳಾಗಿದ್ದಾರೆ. ಕಳೆದ ಎರಡು ವರ್ಷದಿಂದ ಕೊರೊನಾ ಹಿನ್ನೆಲೆ ವ್ಯಾಪಾರ ಡಲ್ ಆಗಿತ್ತು. ಆದರೆ ಈ ವರ್ಷದ ಅಕ್ಷಯ ತೃತೀಯಕ್ಕೆ ಭರ್ಜರಿ ವ್ಯಾಪಾರದ ನಿರೀಕ್ಷೆಯಲ್ಲಿ ಚಿನ್ನದ ಅಂಗಡಿ ಮಾಲೀಕರಿದ್ದಾರೆ.
ಕಲಬುರಗಿ ಆಂದೋಲ ಶ್ರೀಗಳು ಪ್ರತಿಕ್ರಿಯೆ ನೀಡಿ ಕೇರಳದಲ್ಲಿ 800 ಮಂದಿ ಹಿಂದೂಗಳ ಹತ್ಯೆ ಮಾಡಲಾಗಿದೆ. 1200 ಹಿಂದೂ ಹುಡುಗಿಯರ ಮತಾಂತರ ಹಾಗೂ ರೇಪ್ ಮಾಡಲಾಗಿದೆ. ಈಗಲೂ ನಾವು ಎಚ್ಚೆತ್ತು ಕೊಳ್ಳದೇ ಹೋದರೆ ಹಿಂದೂಗಳು ನಾಶವಾಗುತ್ತಾರೆ. ಈ ಕಾರಣಕ್ಕಾಗಿ ನಾವು ಕಳೆದ ಎರಡು ತಿಂಗಳಿನಿಂದ ಅಭಿಯನ ಮಾಡಿ ಹಿಂದೂಗಳಲ್ಲಿ ಜಾಗೃತಿ ಮೂಡಿಸಿದ್ದೇವೆ ಎಂದರು.
ಆಕ್ಷಯ ತೃತೀಯ ದಿನ ಕೋಟ್ಯಾಂತ ರು ಚಿನ್ನ ಖರೀದಿ ಆಗುತ್ತದೆ. ಮುಸ್ಲಿಂ ವ್ಯಾಪಾರಿಗಳ ಅಂಗಡಿಗೆ ಹೋಗದೇ ಹಿಂದೂ ಅಂಗಡಿಗಳಲ್ಲಿ ಮಾತ್ರ ಖರೀದಿ ಮಾಡಿ ಎಂದು ಪ್ರಚಾರ ಮಾಡುತ್ತಿರುವ ಹಿಂದೂ ಮುಖಂಡರ ಬಗ್ಗೆ ಬೆಂಗಳೂರು ಶಿವಾಜಿನಗರ ಜ್ಯುವೆಲರಿ ಶಾಪ್ ಮಾಲೀಕರ ಸಂಘದ ಅಧ್ಯಕ್ಷ ಸಾದಿಕ್ ಪಾಷ ವಿರೋಧ ವ್ಯಕ್ತಪಡಿಸಿದ್ದಾರೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು