ಪ್ರೀತಿ ಒರತೆಯನರಸಿ ಅಲೆದಾಡಿದೆ ಜೀವ
ಮನದ ತುಂಬೆಲ್ಲಾ ರಂಗು ರಂಗಿನ ಭಾವ
ಏಕಾಂತ ಪಯಣದಲಿ ಜೊತೆಯಾದ ಗೆಳೆಯ
ಸ್ನೇಹ ಭಾವ ಸಂಸ್ಕಾರದ ನಮ್ರ ಒಡೆಯ
ಮರಳುಗಾಡಿನಲಿ ಸಿಕ್ಕ ಜೀವ ಸೆಲೆಯಂತೆ
ಮನದ ಗುಡಿಯಲಿ ಅರಾಧಿಸುವೆ ನೆಲೆಯಂತೆ
ಹೃದಯ ವೀಣೆ ನೂರು ರಾಗ ಮೀಟಿದೆ
ಅನುರಾಗ ರಾಗ ಅನುಬಂಧ ಬೆಸೆದಿದೆ
ಹುಸಿನಗೆಯ ಕಣ್ಣ ನೋಟ ಮಿಂಚಿನ ಚಮತ್ಕಾರ
ಕನಸಿನ ಲೋಕದಿ ನಿತ್ಯ ನೂತನ ಸಂಚಾರ
ದೂರ ಹೋಗದಿರು ಮನದಿಂದ ಮನವೇ
ಮರಿಚೀಕೆಯಾಗದಿರು ಒಲವ ಬದುಕಿಗೆ ಒಲವೇ.
ಜಯಂತಿ .ರೈ
ಮಡಿಕೇರಿ


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು